Advertisement

ಖಜೂರಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ವಿಳಂಬ

12:36 PM Jul 24, 2019 | Naveen |

ಆಳಂದ: ಗಡಿಭಾಗದ ಮಕ್ಕಳ ಶೈಕ್ಷಣಿಕ ಉದ್ದೇಶದಿಂದ 2017ರಂದು ತೆರೆಯಲಾದ ಇಂದಿರಾಗಾಂಧಿ ವಸತಿ ಶಾಲೆಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ, ಇದುವರೆಗೂ ಸಕಾಲಕ್ಕೆ ಕಟ್ಟಡ, ಕಾಯಂ ಶಿಕ್ಷಕರು, ವಸತಿ ನಿಲಯ ಒದಗಿಸದೆ ದಿನದೊಡುತ್ತಿರುವುದು ಪ್ರವೇಶ ಪಡೆದ ಜಿಲ್ಲೆಯ ವಿವಿಧ ಭಾಗದ 150 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.

Advertisement

2017-18ರಂದು ಶೈಕ್ಷಣಿಕ ವರ್ಷದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲೇ ಇಂದಿರಾಗಾಂಧಿ ವಸತಿ ಶಾಲೆಗೆ 6ನೇ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಪಡೆದು ಪ್ರಭಾರಿ ಪ್ರಚಾರ್ಯರು, ಮತ್ತು ಅತಿಥಿ ಶಿಕ್ಷಕರ ನಿಯೋಜನೆ ಮೇಲೆ ತರಗತಿ ಪ್ರಾರಂಭಿಸಿದ್ದಾರೆ. 8ನೇ ತರಗತಿವರೆಗೆ ಬರೋಬ್ಬರಿ 150 ಮಕ್ಕಳು ಓದುತ್ತಿದ್ದಾರೆ. ಆದರೆ ಕಾಯಂ ಶಿಕ್ಷರು, ಸ್ವಂತ ಕಟ್ಟಡ ವಸತಿ ವ್ಯವಸ್ಥೆ, ಸುಸಜ್ಜಿತ ಕಟ್ಟಡವನ್ನು ಸಕಾಲಕ್ಕೆ ಒದಗಿಸದೆ ಇರುವುದು ಸಂಬಂಧಿತ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸದ್ಯ ಖಜೂರಿ ಗ್ರಾಮದ ಬಾಡಿಗೆ ಕಟ್ಟಡದಲ್ಲೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ತೇಕ ವಸತಿ ನಿಲಯ ನಡೆಸಲಾಗುತ್ತಿದೆ. ಕಟ್ಟಡ ಒದಗಿಸಲು ಶಾಲೆ ಆರಂಭದ ವರ್ಷದಲ್ಲೇ ಸರ್ಕಾರ ಕಾಮಗಾರಿಯನ್ನೂ ಶುರು ಮಾಡಿದೆ. ಆದರೆ ಅನುದಾನದ ಕೊರತೆ ಸೇರಿ ಇನ್ನಿತರ ತಾಂತ್ರಿಕ ತೊಂದರೆ ಉಂಟಾಗಿ ಕಟ್ಟಡ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಒಂದೂವರೆ ವರ್ಷ ವಿಳಂಬವಾಗಿರುವುದು ವಿದ್ಯಾರ್ಥಿಗಳ ಪರದಾಟಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.

ಕಟ್ಟಡ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷವಾದರು ಬೇಕು ಎನ್ನುತ್ತಾರೆ ಸ್ಥಳೀಯರು. ಅಲ್ಲಿವರೆಗೆ ವಿದ್ಯಾರ್ಥಿಗಳು ವರ್ಗ ಕೋಣೆ, ವಸತಿ ನಿಲಯ ಶೌಚಾಲಯ, ನೀರಿನ ಪ್ರತ್ಯೇಕ ವ್ಯವಸ್ಥೆಗೆ ಪರದಾಡುವ ಅನಿವಾರ್ಯತೆ ಎದುರಾಗಿದೆ. ಸಂಬಂಧಿತ ಅಧಿಕಾರಿಗಳು ಈ ಕೂಡಲೇ ಗುಣಮಟ್ಟದೊಂದಿಗೆ ಸುಸಜ್ಜಿತ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಶಾಲೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡುವಂತೆ ಮಾಡಿದೆ.

ಸುಮಾರು 15 ಕೋಟಿ ರೂ. ವೆಚ್ಚದಲ್ಲಿ 2018ರ ಏಪ್ರಿಲ್ 20ರಂದು ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ. ಪೂರ್ಣಗೊಳಿಸಿ ಶಾಲಾಡಳಿತಕ್ಕೆ ಹಸ್ತಾಂತರಿಸಲು ಇನ್ನೂ ಒಂದುವರ್ಷ ಬೇಕಾಗುತ್ತದೆ.
ಸತೀಶ,
ಗುತ್ತಿಗೆದಾರ ಪರ ಇಂಜಿನಿಯರ್‌

Advertisement

ನಿರ್ಮಾಣ ಹಂತದಲ್ಲಿರುವ ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಬೇಗ ದೊರೆತರೆ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಒಂದೇ ಕಡೆ ಇರಿಸಲು. ಬೋಧನೆ ಮಾಡಲು ಅನುಕೂಲವಾಗುತ್ತದೆ. ಸದ್ಯ ಬಾಡಿಗೆ ವಸತಿ ನಿಲಯ ಮತ್ತು ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಇಲ್ಲಿ 150 ಮಕ್ಕಳಿಗೆ ಕೋಣೆಗಳು ಸಾಲುತ್ತಿಲ್ಲ. ಸಮಸ್ಯೆ ನಿವಾರಿಸಬೇಕು.
•ಶಾಲೆ ವಿದ್ಯಾರ್ಥಿಗಳ ಪಾಲಕರು

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಈ ಶಾಲೆ ನಡೆಯುತ್ತಿದೆ. ಕಟ್ಟಡ ಕಾಮಗಾರಿಗೆ ಅನುದಾನಕ್ಕೆ ಅಡೆತಡೆಯಾಗಿದ್ದರಿಂದ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಆದರೂ ಬರುವ ಮಾರ್ಚ್ ನೊಳಗೆ ಕಟ್ಟಡ ಪೂರ್ಣಗೊಳಿಸಿ
ಹಸ್ತಾಂತರಿಸುವ ಕುರಿತು ಭರವಸೆ ನೀಡಿದ್ದಾರೆ.
ಸತೀಶಕುಮಾರ,
ಜಂಟಿ ನಿರ್ದೇಶಕರು ಸಮಾಜ
ಕಲ್ಯಾಣ ಇಲಾಖೆ ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next