Advertisement

ಕೇಂದ್ರ ಯೋಜನೆ ಮನೆ ಬಾಗಿಲಿಗೆ

09:36 AM Jun 30, 2019 | Naveen |

ಆಳಂದ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಕ್ಷೇತ್ರದಲ್ಲಿನ ಸಾಮಾನ್ಯ ಜನರ ಮನೆಬಾಗಿಲಿಗೆ ತಲುಪಿಸಲು ಬದ್ಧನಾಗಿದ್ದೇನೆ ಎಂದು ಬೀದರ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಹೇಳಿದರು.

Advertisement

ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ಅವಧಿಯಲ್ಲೂ ಪ್ರಧಾನಿ ಮೋದಿ ದೇಶದ ಪ್ರಗತಿ ಮಾಡಿದಂತೆ, ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದೆ ಇರಬಹುದು. ಮೊದಲು ದೇಶ ಪ್ರಗತಿಯಾದರೆ ಕ್ಷೇತ್ರ ಪ್ರಗತಿಯಾದಂತೆ. ಪಕ್ಷ ಮತ್ತು ಜನ ಸಾಮಾನ್ಯರ ಯಾವುದೇ ಕುಂದುಕೊರತೆಗಳಿಗೆ ಸ್ಪಂದಿಸಲು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.

ಕೇಂದ್ರದ ಅನೇಕ ಜನಪರ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಕಾರ್ಯಕರ್ತರು, ಮುಖಂಡರು ಕೈಜೋಡಿಸಬೇಕು. ಕೇಂದ್ರದ ಫಸಲು ಭೀಮಾ ಯೋಜನೆ, ಆಯುಷ್ಯಮಾನ್‌ ಭಾರತ, ಪಿಎಂ ಕಿಸಾನ ಸಮ್ಮಾನ, ಗ್ಯಾಸ್‌ ವಿತರಣೆ ಹೀಗೆ ಅನೇಕ ಯೋಜನೆಗಳನ್ನು ಅರ್ಹರಿಗೆ ತಲುಪಿಸಲಾಗಿದೆ. ಮುಂದೆಯೂ ಎಲ್ಲ ಕಾರ್ಯಗಳಿಗೂ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಚುನಾವಣೆಯಲ್ಲಿ ಮತ ನೀಡಿದ ಮತದಾರರಿಗೆ ಮತ್ತು ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ, ಅಪ್ಪಸಾಹೇಬ ಗುಂಡೆ, ಜಿಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮತ್ತು ರೈತರಿಗೆ ನೆರವು ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯೆ ಆಸ್ಮೀತಾ ಚಿಟಗುಪಕರ್‌ ಸಂಸದರಿಗೆ ಮನವಿ ಸಲ್ಲಿಸಿದರು.

ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಸದಸ್ಯ ಹರ್ಷಾನಂದ ಗುತ್ತೇದಾರ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಸಂಜಯ ಮಿಸ್ಕಿನ್‌, ಮಹಾಂತಪ್ಪ ಆಲೂರೆ ಸರಸಂಬಾ, ಹಣಮಂತರಾವ್‌ ಮಲಾಜಿ ಮತ್ತಿತರ ಮುಖಂಡರು ಹಾಜರಿದ್ದರು.

ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ರಮೇಶ ಮೂಲಗೆ, ಜಿಲ್ಲಾ ಮುಖಂಡ ಆದಿನಾಥ ಹೀರಾ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಸದರು ಹಾಗೂ ಶಾಸಕರನ್ನು ಸನ್ಮಾನಿಸಿದರು. ಪಕ್ಷದ ಹಿರಿಯ ಮತ್ತು ಕಿರಿಯ ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ಆಳಂದ ಪಟ್ಟಣಕ್ಕೆ ವರ್ತುಲ ರಸ್ತೆ, ಲಾತೂರ ಕಲಬುರಗಿ ಆಳಂದ ವಾಯಾ ರೈಲು ಮಾರ್ಗ, ಕೇಂದ್ರೀಯ ವಿವಿಗೆ ಕುಡಿಯುವ ನೀರು, ಪಟ್ಟಣದಲ್ಲಿ ಒಳಚರಂಡಿ, ಅಂಚೆ ಕಚೇರಿಗೆ ನಿವೇಶನ, ಕಲಬುರಗಿ ಉಮರಗಾ ಚಥುಷ್ಟದ ಹೆದ್ದಾರಿ ನಿರ್ಮಾಣ, ನಿರುದ್ಯೋಗ ನಿವಾರಣೆಗಾಗಿ ಕಾರ್ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.
• ಸುಭಾಷ ಗುತ್ತೇದಾರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next