ಕಲಬುರಗಿ: ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀ.ನಿಂದ 524.26 ಮೀ.ಗೆ ಎತ್ತರಿಸುವ ಕುರಿತು ಕೇಂದ್ರ ಸರಕಾರ ಮಧ್ಯಪ್ರವೇಶಿಸುವಂತೆ ಕೋರಲಾಗಿದೆ.
ಶೀಘ್ರವೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಕಾವತ್ ಅವರನ್ನು ಭೇಟಿ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ನೀರು ಹಂಚಿಕೆ ವಿಷಯ ಸಂಬಂಧ ಆಂಧ್ರದ ತಕರಾರು ಅರ್ಜಿ ನ್ಯಾಯಾಲಯದಲ್ಲಿದೆ. ಈಗಾಗಲೇ ಕೇಂದ್ರ ಸರಕಾರಕ್ಕೆ ಮಧ್ಯ ಪ್ರವೇಶ ಮಾಡುವಂತೆ ಕೋರಿ ಪತ್ರ ಬರೆಯಲಾಗಿದೆ.
ಈ ಸಂಬಂಧ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುತ್ತದೆ. ಕೇಂದ್ರದ ಮೇಲೆ ಒತ್ತಡ ಹಾಕಿ ಅಧಿಸೂಚನೆ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು.
ಮಹಾದಾಯಿ ಯೋಜನೆಯ ಕಾಮಗಾರಿಯ ಡಿಪಿಆರ್ ಅನುಮೋದನೆಗೂ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ.
ಕೋವಿಡ್-19 ಹಾವಳಿ ಕಡಿಮೆ ಆದ ಮೇಲೆ ದಿಲ್ಲಿಗೆ ತೆರಳಿ ಅನುಮೋದನೆಗೆ ಮನವಿ ಸಲ್ಲಿಸಲಾಗುವುದು.
ಪ್ರವಾಹ ಬಾರದಂತೆ ಮುಂಜಾಗ್ರತೆ ವಹಿಸಲು ಜು. 15ರ ಅನಂತರ ಮಹಾರಾಷ್ಟ್ರ ಸರಕಾರದ ಜತೆ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.