Advertisement

ಹಂತಕರ ಬಂಧನಕ್ಕೆ ಒತ್ತಾಯ

11:09 AM Jun 03, 2019 | Naveen |

ಆಲಮೇಲ: ಗೋ ರಕ್ಷಕ ಹಿಂದೂ ಸಂಘಟನೆ ಕಾರ್ಯಕರ್ತ ಬೆಳಗಾವಿ ಜಿಲ್ಲೆಯ ಶಿವುಕುಮಾರ ಉಪ್ಪಾರನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸ್ವಾಮಿ ವಿವೇಕಾನಂದ ಹಾಗೂ ವಿಶ್ವ ಹಿಂದೂ ಪರಿಷತ್‌ ಮುಖಂಡರು ಪ್ರತಿಭಟಿಸಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ವಿವೇಕಾನಂದ ಯುವ ಸೇನೆ ಅಧ್ಯಕ್ಷ ಅಜಯಕುಮಾರ ಬಂಟನೂರ ಮಾತನಾಡಿ, ಗೋ ರಕ್ಷಕ ಹಿಂದೂ ಸಂಘಟನೆ ಕಾರ್ಯಕರ್ತನನ್ನು ಗೋ ಭಕ್ಷಕರು ಕೊಲೆ ಮಾಡಿದ್ದು ಇಲ್ಲಿವರೆಗೆ ಯಾವಬ್ಬ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ, ಕರ್ನಾಟಕ ಸಮ್ಮಿಶ್ರ ಸರ್ಕಾರ ಹಿಂದೂ ಸಂಘಟನೆ ಕಾರ್ಯಕರ್ತರನ್ನು ದಮನ ಮಾಡವ ಕೆಲಸ ಮಾಡುತ್ತಿದೆ ಎಂದರು.

ಹಿಂದೂಗಳು ಗೋ ಅದೊಂದು ದೇವರು ಎಂದು ಪೂಜೆ ಮಾಡುವ ಪ್ರಾಣಿ. ಗೋ ಭಕ್ಷಕರು ಗೋವುಗಳನ್ನು ನಾಶ ಮಾಡುವುದರ ಜೊತೆಗೆ ಗೋ ರಕ್ಷಕರನ್ನು ಕೊಲೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷ ವಿಧಿಸಬೇಕು. ಕೊಲೆಯಾದ ಶಿವುಕುಮಾರ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬೇಕು. ಹಂತಕರನ್ನು ಬಂಧಿಸದಿದ್ದರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

ಬೆಳಗಾವಿ ವಿಭಾಗದ ವಿಶ್ವ ಹಿಂದೂ ಪರಿಷತ್‌ ಮುಖಂಡ ಶ್ರೀಮಂತ ದುದ್ದಗಿ ಮಾತನಾಡಿ, ಗೋ ರಕ್ಷಕ ಯುವಕನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವುದನ್ನು ಬಿಟ್ಟು ರಕ್ಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳ ಹತ್ತಿಕುವ ಕೆಲಸ ಮಾಡುತ್ತಿದೆ. ಇದೇ ರೀತಿ ಮುಂದು ವರಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಕೊಲೆಯಾದ ಗೋ ರಕ್ಷಕ ಶಿವುಕುಮಾರ ಉಪ್ಪಾರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ಘೋಷಿಸಬೇಕು ಹಾಗೂ ಸಮಸ್ತ ಹಿಂದೂ ಬಾಂಧವರು ಕೂಡಾ ಅವರ ಕುಟುಂಬಕ್ಕೆ ಸಹಾಯಧನ ನೀಡಬೇಕೆಂದು ವಿನಂತಿ ಮಾಡಿದರು.

ಶಿವಾನಂದ ಮಾರ್ಸನಳ್ಳಿ, ಅಮೃತ ಕೊಟ್ಟಲಗಿ, ಸುನೀಲ ತೆಲ್ಲೂರ, ಕಮಲಾಕರ ಪತ್ತಾರ, ಮಲಕು ಅನಂತಗೋಳ, ರತನ ಓಣಕುದಿ, ಹನುಮಂತ ರಜಪೂತ, ಆದರ್ಶ ಅಕ್ಕಲಕೋಟ, ಮುತ್ತು ಶೆಟ್ಟಿ, ಆಕಾಶ ನಾರಾಯಣಕರ, ಮುತ್ತು ಬಂಡಗಾರ, ಆಕಾಶ ಜಂಬಗಿ, ಸದಾನಂದ ಸುನ್ತಾಪುರ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next