Advertisement

ಇದ್ದೂ ಇಲ್ಲವಾದ ಆಲಮೇಲ ಗ್ರಂಥಾಲಯ

04:08 PM Nov 08, 2019 | |

ಆಲಮೇಲ: ಸಮರ್ಪಕ ನಿರ್ವಹಣೆ ಕೊರತೆಯಿಂದ ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಇದ್ದೂ ಇಲ್ಲವಾಗಿದೆ. ಈ ಕುರಿತು ಸಾರ್ವಜನಿಕರು, ಓದುಗರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿ ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

Advertisement

ಈಗಾಗಲೇ 28 ವರ್ಷ ಪೂರೈಸಿದ ಈ ಸಾರ್ವಜನಿಕ ಗ್ರಂಥಾಲಯ 1991ರಲ್ಲಿ ಪ್ರಾರಂಭಗೊಂಡಿತು. ಗ್ರಾಪಂ ಕಟ್ಟಡದಲ್ಲೇ ಮೊದಲಿಗೆ ಗ್ರಂಥಾಲಯ ಪ್ರಾರಂಭಗೊಂಡಿತ್ತು. ನಂತರ 1956ರಲ್ಲಿ ನಿರ್ಮಿಸಿದ್ದ ಹಳೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಸುಮಾರು 20 ವರ್ಷಗಳ ಕಾಲ ಗ್ರಂಥಾಲಯವನ್ನು
ಸರಿಯಾಗಿ ಕಾರ್ಯನಿರ್ವಹಿಸಲಾಗಿತ್ತು. ಈಚೆಗೆ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ಉಪಯುಕ್ತವಿಲ್ಲದಂತಾಗಿದೆ. ಗ್ರಂಥಾಲಯಕ್ಕೆ ಹೋಗಬೇಕು ಎಂದರೆ ಯಾವಾಗಲು ಬೀಗ ಹಾಕಿರುತ್ತದೆ ಎಂದು ಆರೋಪಿಸುವ ಸಾರ್ವಜನಿಕರು ಮತ್ತು ಓದುಗರು, ಸಂಬಂಧಪಟ್ಟ ಗ್ರಂಥಾಲಯ ಇಲಾಖೆಗೆ, ಜಿಲ್ಲಾಧಿ ಕಾರಿಗೆ, ತಹಶೀಲ್ದಾರ್‌ ಮತ್ತು ಪಪಂಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಗ್ರಂಥಾಲಯದಲ್ಲಿರುವ 4290 ಪುಸ್ತಕಗಳು ಧೂಳುತಿನ್ನುತ್ತಿವೆ. ಗ್ರಂಥಾಲಯಕ್ಕೆ ನೀಡಿದ ಜಾಗ ಅತಿಕ್ರಮಣಗೊಂಡಿದೆ. ಅಸಮರ್ಪಕ ನಿರ್ವಹಣೆಗೆ ಇದೊಂದು ಉದಾಹರಣೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪ್ರತಿ ತಿಂಗಳು ಪತ್ರಿಕೆ, ಸ್ವಚ್ಛತೆ ನಿರ್ವಹಣೆಗೆ 400 ರೂ. ಸಹಾಯಧನ ಬರುತ್ತದೆ. ಈ ಹಣದಲ್ಲಿ ಎರಡು ದಿನಪತ್ರಿಕೆ ತರಿಸಲಾಗುತ್ತದೆ. ಒಟ್ಟು 275 ಜನ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ಆದರೆ ಓದುಗರಿಗೆ ಸದ್ಬಳಕೆಗೆ ಬಾರದ ಪುಸ್ತಕಗಳು ಕತ್ತಲೆ ಕೋಣೆಯಲ್ಲಿ ಕೊಳೆಯುತ್ತಿವೆ.

ಶಿಥಿಲಗೊಂಡ ಕಟ್ಟಡ: 63 ವರ್ಷದ ಹಳೆಯ (1956ರಲ್ಲಿ ನಿರ್ಮಾಣ) ಹಂಚಿನ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಶಿಥಿಲಗೊಂಡಿದೆ. ಹಂಚುಗಳು ಒಡೆದಿವೆ. ಮಳೆಗಾಲದಲ್ಲಿ ನೀರು ಸೋರಿ ಪುಸ್ತಕ, ಪತ್ರಿಕೆಗಳು ಹಾಳಾಗಿವೆ. ಆಲಮೇಲ ಪಟ್ಟಣದಲ್ಲಿ ಸುಮಾರ 30 ಸಾವಿರ ಜನಸಂಖ್ಯೆ ಇದ್ದು, ಓದುಗರು ಸಾರ್ವಜನಿಕ ಗ್ರಂಥಾಲಯಕ್ಕೆ ಆಗಮಿಸಿ ಓದಬೇಕೆಂದರೆ ಯಾವಾಗಲು ಬೀಗ ಹಾಕಿರುತ್ತಾರೆ. ಹೀಗಾಗಿ ಓದುಗರ ಕೊರತೆಯಿಂದ ಗ್ರಂಥಾಲಯ ಎಲ್ಲಿದೆ ಎಂಬ ಪ್ರಶ್ನೆ ಬಹಳಷ್ಟು ಜನರಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next