Advertisement

ವಿಘ್ನ ವಿನಾಶಕನಿಗೆ ಸಂಭ್ರಮದ ವಿದಾಯ

06:25 PM Sep 08, 2019 | Naveen |

ಆಲಮೇಲ: ಕಳೆದ ಐದು ದಿನಗಳಿಂದ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಶುಕ್ರವಾರ ತಡರಾತ್ರಿ ಆರಮಭವಾಗಿ ಶನಿವಾರ ನಸುಕಿನ ಜಾವದವರೆಗೂ ಅದ್ಧೂರಿಯಾಗಿ ಜರುಗಿತು. ಡಿಜೆ ನಿಷೇಧವಿದ್ದರೂ ಕಿವಿಗಡ ಚಿಕ್ಕುವ ಧ್ವನಿಯಲ್ಲಿ ಕೇಕೆ ಹಾಕಿ ಹಾಡಿಗೆ ಕುಣಿದು ಸಂಭ್ರಮಿಸಿದ ಯುವಕರು, ವಿವಿಧ ಸ್ತಬ್ಧ ಚಿತ್ರಗಳು, ಜಾನಪದ ಕಲಾ ಪ್ರದರ್ಶನ, ಮಕ್ಕಳ ಕೋಲಾಟ, ಜಾಂಜು ಗಮನ ಸೆಳೆದವು.

Advertisement

ರಾಮಾಯಣ, ಮಹಾಭಾರತ, ದೇಶದ ಸಾಂದರ್ಭಿಕ ಸನ್ನಿವೇಶಕ್ಕೆ ತಕ್ಕಂತೆ ಸ್ತಬ್ಧ ಚಿತ್ರ, ರೂಪಕಗಳನ್ನು ನಿರ್ಮಾಣ ಮಾಡಲಾಗಿತ್ತು. ಗಣೇಶ ಉತ್ಸವ ಕಳೆದ 50 ವರ್ಷದಿಂದ ಪ್ರಾರಂಭವಾಗಿದ್ದು ಮೊದಲಿಗೆ ಗ್ರಾಮದಲ್ಲಿ ಒಂದೆ ಕಡೆ ಕಾಮನ ಕಟ್ಟಿ ಪ್ರಷ್ಠಾಪಿಸಲಾಗಿತ್ತು. ಹೀಗೆ ಒಂದೊಂದಾಗಿ ಹೆಚ್ಚಳವಾಗಿ 15 ಕಡೆ ಪ್ರತಿಷ್ಠಾಪಿಸಿದ ಗಣೇಶ ವಿಗ್ರಹಗಳು ಏಕ ಕಾಲಕ್ಕೆ ಐದನೇ ದಿನಕ್ಕೆ ವಿರ್ಸಜನೆಯಾಗುತ್ತವೆ. ಪುಣೆ ಮಾದರಿಯಲ್ಲಿ ಜರುಗಿದ ಗಣೇಶ ವಿಸರ್ಜನೆ ಮೆರವಣಿಗೆ ಕಣ್ತುಂಬಿಕೊಳ್ಳಲು ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಸೇರಿದಂತೆ ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ, ಜತ್ತ, ಸಾಂಗಲಿಗಳಿಂದ ಸುಮಾರ ಲಕ್ಷಾಂತರ ಜನ ಆಗಮಿಸಿದ್ದರು.

ಒಟ್ಟು 15 ಗಜಾನನ ಮಂಡಳಿಗಳಿದ್ದು ಅದಕ್ಕೆ ಒಂದು ಮಹಾ ಮಂಡಳಿ ರಚನೆ ಮಾಡಲಾಗಿತ್ತು. ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಧರ್ಮಿಯರನ್ನು ಅಧ್ಯಕ್ಷರನ್ನಾಗಿ ಮಾಡಿ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವದು ಭಾವೈಕ್ಯ ಸಂಕೇತವಾಗಿದೆ.

ಸ್ತಬ್ಧ ಚಿತ್ರಗಳು: 15 ಚೌಕಿನವರು ತಮ್ಮ ಗಣೇಶ ವಿಗ್ರಹಗಳೊಂದಿಗೆ ಆಕರ್ಷಕ ಸ್ತಬ್ಧ ಚಿತ್ರಗಳನ್ನು ನಿರ್ಮಿಸಿದರು. ರೇವಣಸಿದ್ದೇಶ್ವರ ತಿರುಪತಿಯ ಬಾಲಾಜಿ ವೆಂಕಟರಮಣ ಸ್ತಬ್ಧ ಚಿತ್ರ, ಅಂಬಾಭವಾನಿ ಚೌಕಿನವರು ಮೈಸೂರು ದಸರಾದ ಜಂಬು ಸವಾರಿ, ರಾಘವೇಂದ್ರ ಚೌಕಿನವರು ರಾಘವೇಂದ್ರ ಸ್ವಾಮಿಯ ರಾಯರ ಮಂಟಪ, ಬಸವ ನಗರದವರು ರಾಮ ಲಕ್ಷ್ಮಣ ಮತ್ತು ರಾವಣನ ಮಧ್ಯೆ ನಡೆಯುವ ಯುದ್ಧ ಸನ್ನಿವೇಶ, ಗಣೇಶ ನಗರದವರು ರಾಮನಿಗೆ ಪೂಜೆ ಮಾಡುವ ಹನುಮಾನ, ಹನುಮಾನ ಚೌಕಿನವರು ಪುರಂದರದಾಸರ ಸ್ತಬ್ಧ ಚಿತ್ರ ಪ್ರದರ್ಶಿಸಿದರು.

ದತ್ತ ಚೌಕಿನವರು ಮಹಿಷಾಸೂರ ಮರ್ಧನ, ಲಕ್ಷ್ಮೀ ಚೌಕಿನವರು ಚೌಡಮ್ಮ ದೇವಿ ಅವತಾರದ ಸನ್ನಿವೇಶ, ಗಾಂಧಿ ಚೌಕಿನವರು ಘತ್ತರಗಿ ಭಾಗ್ಯವಂತಿ ದೇವಿ, ಜೈ ಭವಾನಿ ಚೌಕಿನವರು ಶಿವತಾಂಡವ ನೃತ್ಯ, ಕಾಮನ ಕಟ್ಟಿ ಚೌಕಿನವರು ಹನುಮಂತ ರಾಮನಿಗೆ ಹೆಗಲ ಮೇಲೆ ಕೂಡಿಸಿಕೊಂಡು ಯುದ್ಧ ಮಾಡುವದು, ಸಾವಳಗೇಶ್ವರ ಚೌಕಿನವರು ಶಿವನ ಅವತಾರ ತಾಳಿರುವ ಸ್ತಬ್ದ ಚಿತ್ರಗಳು ಆಕರ್ಷಿಸಿದವು.

Advertisement

ಮೆರವಣಿಗೆಗೆ ಮಕ್ಕಳ ಕೋಲಾಟ, ಜಾಂಜು ಪತಕ, ಪೋತರಾಜನ ಕುಣಿತದ ಜತೆಗೆ ಹತ್ತಾರು ಜಾನಪದ ಕಲಾ ತಂಡಗಳು ಸಾಥ್‌ ನೀಡಿದವು. ಸ್ತಬ್ಧ ಚಿತ್ರಗಳನ್ನು ಸ್ಥಳೀಯ ಕಲಾವಿದರಾದ ಮಹೋನ ಪತ್ತಾರ, ಸಂಗಯ್ಯ ಮುಳಮಠ, ಅಂಬೋಜಿ ಬಂಡಗಾರ, ರಾಜು ಮಾನಕಾರ, ಶಂಕರ ಪಾಟೀಲ, ದೇವಾನಂದ ಖಂದಾರೆ ತಾಯರು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next