Advertisement
ಶನಿವಾರ ಆಲಮಟ್ಟಿಯ ಮುಖ್ಯ ಅಭಿಯಂತರರ ಕಚೇರಿ ಬಳಿಯಿರುವ ಪಾರ್ಕಿಂಗ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಎಂಜಿನಿಯರುಗಳ ಸಂಘದ ರಾಜ್ಯಮಟ್ಟದ ಸಮ್ಮೇಳನ, ತಾಂತ್ರಿಕ ಕಾರ್ಯಾಗಾರ, 2020ನೇ ಸಾಲಿನ ಎಂಜಿನಿಯರ್‌ಗಳ ದಿನಚರಿ ಬಿಡುಗಡೆ ಮತ್ತು 2019ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾವೇ ಸ್ವತಃ ಸ್ಥಳ ಪರಿಶೀಲಿಸಿ ಅಂದಾಜು ಪತ್ರಿಕೆ ತಯಾರಿಸಿ ಕಾರ್ಯೋನ್ಮುಖರಾಗುತ್ತಿದ್ದರಿಂದ ಯಾವ ಕಾಮಗಾರಿಗಳೂ ಕೂಡ ಗುಣಮಟ್ಟದ ಬಗ್ಗೆ ತಕರಾರಿರುತ್ತಿಲಿಲ್ಲ. ಅಂದಾಜು ಪತ್ರಿಕೆ ತಯಾರಿಸಿದ ನಂತರ ಹೆಚ್ಚುವರಿ ಮೊತ್ತದ ಅವಶ್ಯಕತೆಯೂ ಇರುತ್ತಿರಲಿಲ್ಲ. ಇತ್ತೀಚೆಗೆ ಅಭಿಯಂತರುಗಳು ಸ್ಥಳಕ್ಕೆ ಹೋಗದೇ ಖಾಸಗಿ ಕಂಪನಿಗಳಿಗೆ ಡಿಪಿಆರ್ ತಯಾರಿಸಲು ಸೂಚಿಸಿ ನಂತರ ಅಂದಾಜು ಪತ್ರಿಕೆ ತಯಾರಿಸುತ್ತಿರುವುದರಿಂದ ಹಾಗೂ ಅಭಿಯಂತರಾದವರು ಗುತ್ತಿಗೆದಾರರಿಂದ ಸಮರ್ಪಕವಾಗಿ ಕೆಲಸ ಪಡೆಯುವಾಗ ಯಾವ ಒತ್ತಡಕ್ಕೂ ಮಣಿಯಬಾರದು ಎಂದು ಕಿವಿಮಾತು ಹೇಳಿದರು.
Related Articles
ಸೂಕ್ತ ತೀರ್ಮಾನ ಕೈಗೊಂಡು ಯೋಜನೆಗಳನ್ನು ರೂಪಿಸಿ ಅದಕ್ಕೆ
ತಕ್ಕಂತೆ ಸರಿಯಾದ ಅಂದಾಜು ಪತ್ರಿಕೆ ತಯಾರಿಸಿ ಕಾರ್ಯೋನ್ಮುಖರಾದರೆ ಕಾಮಗಾರಿಗಳು ಅವರ ಹೆಸರನ್ನು
ಶಾಶ್ವತವಾಗಿ ಹೇಳುತ್ತವೆ. ಈ ನಿಟ್ಟಿನಲ್ಲಿ ಅಭಿಯಂತರುಗಳು ಕರ್ತವ್ಯನಿರ್ವಹಿಸಬೇಕು ಎಂದರು.
Advertisement
ರಾಜಕಾರಣದಲ್ಲಿ ಯಾವುದೇ ತೀರ್ಮಾನ ಮಾಡಿದರೂ ಕೂಡ ಅದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆಗಳು ಬರುತ್ತವೆ. ಒಂದು ರೀತಿಯಲ್ಲಿ ರಾಜಕಾರಣವೆಂದರೆ ಗ್ರಾಮೀಣ ಪ್ರದೇಶದಲ್ಲಿರುವ ಅಗಸಿಯಲ್ಲಿನ ಬೋರ್ಗಲ್ಲಿನಂತೆ. ಕೆಲವರು ಬಂದು ನಮಸ್ಕರಿಸಿದರೆ ಶ್ವಾನಗಳು ಬಂದು ಏನೋ ಮಾಡಿದಂತೆ ಹೀಗಾಗುತ್ತದೆ ಇದನ್ನು ನಾವು ಸಹಿಸಿಕೊಂಡು ಉತ್ತಮ ಆಡಳಿತ ನೀಡಲು ಶ್ರಮಿಸುತ್ತೇವೆ ಎಂದರು.
ಅಭಿಯಂತರುಗಳು ಮಾತ್ರ ಯೋಜನೆ ರೂಪಿಸಲು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕ ಅಂಶಗಳನ್ನು ಅರಿತುಕೊಂಡು ಯೋಜನೆ, ಅಂದಾಜು ಪತ್ರಿಕೆ ತಯಾರಿಸಿ ಗುಣಮಟ್ಟ ಹಾಗೂ ಮಾಪನದಲ್ಲಿ ರಾಜೀ ಮಾಡಿಕೊಳ್ಳಬಾರದು. ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕಾಳಜಿವಹಿಸಿದ್ದು ಪ್ರತಿ ಜಿಲ್ಲೆಗೊಂದರಂತೆ ಗುಣನಿಯಂತ್ರಣ ಘಟಕ ಆರಂಭಿಸಲು ಚಿಂತನೆ ನಡೆದಿದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರುಗಳ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್. ದೇವರಾಜ್ ಮಾತನಾಡಿ ಸಂಘದ ಕೇಂದ್ರ ಕಚೇರಿಯ ವ್ಯಾಜ್ಯ ಬಗೆಹರಿಸುವಂತೆ ಡಿಸಿಎಂ ಗೋವಿಂದ ಕಾರಜೋಳಗೆ ಕೋರಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ ಮುಖ್ಯ ಅಭಿಯಂತರುಗಳಾದ ಆರ್ .ಪಿ.ಕುಲಕರ್ಣಿ, ವಿ.ಕೆ.ಪೋತದಾರ, ಡಿ.ಬಸವರಾಜು, ಪ್ರದೀಪ ಎಂ, ಡಾ|ರಾಜೇಂದ್ರ ಪೋದ್ದಾರ, ವಾಸಣದ, ಜೆ.ಜಿ. ರಾಠೊಡ ಸೇರಿದಂತೆ ಮೊದಲಾದವರಿದ್ದರು.