Advertisement
ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರಲ್ಲಿ ಬರುವ ದೇವರಹಿಪ್ಪರಗಿ ಮಾರ್ಗವಾಗಿ ಹೋಗುವ ನಾಗಠಾಣ ಬ್ರ್ಯಾಂಚ್ ಕಾಲುವೆ ಮೂಲಕ ಹೂವಿನಹಿಪ್ಪರಗಿ ಹೋಬಳಿಯ ಎಲ್ಲ ಕೆರೆಗಳನ್ನು ತುಂಬಿಸಲು ಸಂಬಂಧಿಸಿದ ಹಳ್ಳಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಲು ವಿನಂತಿಸಿದರು.
Related Articles
Advertisement
ಇನ್ನು ನೂತನವಾಗಿ ನಿರ್ಮಿಸಲಾಗಿರುವ ಕಾಲುವೆಯ ಕೂಡಗಿ ಬಳಿ ರೈಲ್ವೆ ಹಳಿ ಕ್ರಾಸಿಂಗ್ ಕಾಮಗಾರಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯಿಂದ ರೈತರು ನಾಡಿನ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಿದ್ದರ ಪರಿಣಾಮ ಸ್ವಾಮೀಜಿಯವರ ನೇತೃತ್ವದಲ್ಲಿ ಬಳೂತಿಯ ಮುಖ್ಯ ಸ್ಥಾವರದ ದುರಸ್ಥಿಗೆ ಸಂಬಂಧಿಸಿದವರನ್ನು ಭೇಟಿಯಾಗಿ ಬರಗಾಲದಿಂದ ಹಾಗೂ ಬೇಸಿಗೆಯ ಬಿಸಿಲಿನ ತಾಪದಿಂದ ಬಸವಳಿದಿರುವ ಜನತೆಯ ನೋವಿನ ಕುರಿತು ಸಮಗ್ರವಾಗಿ ಚರ್ಚಿಸಿದ್ದರ ಪರಿಣಾಮವಾಗಿ ಶನಿವಾರದಿಂದ ಕಾಲುವೆೆಗೆ ನೀರು ಹರಿಸಲು ಆರಂಭಿಸಲಾಗಿದೆ. ಆದ್ದರಿಂದ ಮೊದಲು ಮಸಬಿನಾಳ ಮುಖ್ಯಸ್ಥಾವರ (ಜಾಕ್‌ವೆಲ್)ನಿಂದ ನೀರು ಪೂರೈಸಬೇಕು ಎಂದು ಹೇಳಿದರು.
ಇದಕ್ಕೆ ಶಾಂತವಾಗಿಯೇ ಉತ್ತರಿಸಿದ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ, ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರದ ಸೂಚನೆಯಂತೆ ಎಲ್ಲ ಕಾಲುವೆಗಳನ್ನು ತುಂಬಿಸಲಾಗುವುದು. ಇದರಲ್ಲಿ ಅನುಮಾನ ಬೇಡ ಹಾಗೂ ಈಗಲೇ ಬೇಕೆಂದು ಹಠಮಾರಿ ಧೋರಣೆ ಸರಿಯಲ್ಲ, ನಿಯಮದಂತೆ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಎಸ್.ಬಿ. ಪಾಟೀಲ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗಯ್ಯ ಹಿರೇಮಠ, ಕೂಡಗಿ ಎನ್‌ಟಿಪಿಸಿ ಪಿಎಸೈ ಬಸವರಾಜ ಅವಟಿ, ರಮೇಶ ಕೋರಿ, ಚಂದ್ರಶೇಖರ ಮುಳವಾಡ, ರೇವಣಸಿದ್ದಪ್ಪ ನಂದಿಹಾಳ, ಸಿದ್ದರಾಮ ಅಂಗಡಗೇರಿ, ಸದಾಶಿವ ಭರಟಗಿ, ಹೊನಕೇರಪ್ಪ ತೆಲಗಿ, ಕೃಷ್ಣಪ್ಪ ಭಮರೆಡ್ಡಿ, ಅರ್ಜುನ ಹಾವಗೊಂಡ, ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹನುಮಂತರಾಯ ಗುಣಕಿ, ಪ್ರವೀಣ ಸಿಂಧೆ, ಪೀರಾಜಿ ತರ್ಪೆ, ಹರಿಬಾ ಪಾವನೆ ಮೊದಲಾದವರಿದ್ದರು.