Advertisement

ಕೃಷ್ಣಾ ನದಿಗೆ 1,85,095 ಕ್ಯೂಸೆಕ್‌ ನೀರು

02:57 PM Sep 06, 2019 | Naveen |

ಆಲಮಟ್ಟಿ: ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಜಲಾಶಯದಿಂದ 1,85,095 ಕ್ಯೂಸೆಕ್‌ ನೀರನ್ನು ಜಲಾಶಯದ ಎಲ್ಲ 26 ಗೇಟುಗಳ ಮೂಲಕ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ.

Advertisement

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾಗಿದ್ದರಿಂದ ಕಳೆದ ಮೂರು ದಿನಗಳಿಂದ ಮತ್ತೆ ಆಲಮಟ್ಟಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ. ಅಲ್ಲದೇ ಮಹಾರಾಷ್ಟ್ರ ಸರ್ಕಾರ ಕೋಯ್ನಾ ಜಲಾಶಯದಿಂದ ವ್ಯಾಪಕ ನೀರು ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಆದರೆ ಗುರುವಾರ 63,760 ಕ್ಯೂಸೆಕ್‌ ನೀರು ಹರಿದು ಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ನದಿಪಾತ್ರಕ್ಕೆ 1,85,095 ಕ್ಯೂಸೆಕ್‌ ನೀರು ಹರಿದು ಬಿಡಲಾಗುತ್ತಿದೆ.

519.60ಮೀ ಗರಿಷ್ಠ ಎತ್ತರದಲ್ಲಿ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 519.14 ಮೀ.ಎತ್ತರವಾಗಿ 115.221 ಟಿಎಂಸಿ ಅಡಿ ಸಂಗ್ರಹವಾಗಿ ಜಲಾಶಯಕ್ಕೆ 63,760 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಆ ಎಲ್ಲ ನೀರನ್ನು ಕೆಪಿಸಿಎಲ್ ಹಾಗೂ ಗೇಟುಗಳ ಮೂಲಕವಾಗಿ ನದಿ ಪಾತ್ರಕ್ಕೆ ಹರಿದುಬಿಡಲಾಗಿದೆ.

ಕಳೆದ ಜುಲೈ ತಿಂಗಳ ಕೊನೆಯ ವಾರದಲ್ಲಿ ಕೃಷ್ಣೆಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಉಪನದಿಗಳಾಗಿರುವ ವಾರಣಾ, ವೇದಗಂಗಾ, ಪಂಚಗಂಗಾ ಸೇರಿದಂತೆ ಸಾಂಗ್ಲಿ, ಸಾತಾರಾ, ಕೊಲಾØಪುರ ಹಾಗೂ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದಿದ್ದರಿಂದ ಕೃಷ್ಣೆಯ ಇನ್ನೊಂದು ಉಪನದಿಯಾಗಿರುವ ಘಟಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಈ ನದಿ ಆಲಮಟ್ಟಿ ಸಮೀಪದಲ್ಲಿ ಕೃಷ್ಣೆಯನ್ನು ಕೂಡಿರುವುದರಿಂದ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಆಗಷ್ಟ್ ತಿಂಗಳಿನಲ್ಲಿ ಗರಿಷ್ಠ 6.30ಲಕ್ಷ ಕ್ಯೂಸೆಕ್‌ ನೀರು ಹರಿದುಬಂದು ಕೃಷ್ಣೆಯ ದಡದಲ್ಲಿರುವ ಗ್ರಾಮಗಳ ಬೆಳೆ ಹಾಗೂ ಗ್ರಾಮಗಳು ಜಲಾವೃತಗೊಂಡಿದ್ದವು.

ಮತ್ತೆ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ವ್ಯಾಪಕ ಮಳೆ ಸುರಿಯಲಾರಂಭಿಸಿವುದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ನದಿ ತೀರದಲ್ಲಿರುವ ರೈತರು ಮತ್ತೆ ಆತಂಕಕ್ಕೀಡಾಗಿದ್ದಾರೆ.

Advertisement

1.74.794 ಕ್ಯೂಸೆಕ್‌ ನೀರು ಹೊರಕ್ಕೆ

ನಾಲತವಾಡ: ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಗುರುವಾರ ಸಂಜೆ 6 ಗಂಟೆಗೆ ಜಲಾಶಯದ 17 ಗೇಟುಗಳ ಮೂಲಕ 1.74.794 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ.

ಆಲಮಟ್ಟಿ ಜಲಾಶಯದ ಮೂಲಕ 1.70000 ಕ್ಯುಸೆಕ್‌ ಹೆಚ್ಚಿದ ಒಳ ಹರಿವಿನಿಂದ ಜಲಾಶಯದ 492.25 ಗರೀಷ್ಟ ಮಟ್ಟದಲ್ಲಿ ಸದ್ಯ 491.81 ಮೀಟರ್‌ ನೀರು ಸಂಗ್ರಹಗೊಂಡಿದೆ. ನದಿ ಪಾತ್ರದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಕಳೆದ ಆಗಷ್ಟ್ ತಿಂಗಳಲ್ಲಿ ಹರಿದ ದಾಖಲೆಯ ನೀರು ಬಿಡಲಾಗಿತ್ತು. ಮತ್ತೆ ಈಗ ಜಲಾಶಯದ ನೀರಿನ ರಭಸವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next