Advertisement

ಕಾಲುವೆ ಕೊನೆಯಂಚಿನ ಜಮೀನಿಗೆ ನೀರು ಹರಿಯಲಿ

04:56 PM Jun 28, 2021 | Team Udayavani |

ಆಲಮಟ್ಟಿ: ಮಳೆಗಾಲದಲ್ಲಿ ಕ್ಲೋಸರ್‌ ಕಾಮಗಾರಿಗಳು ಗುಣಮಟ್ಟದ್ದಾಗಲು ಸಾಧ್ಯವಿಲ್ಲ. ಆದ್ದರಿಂದ ಅತಿ ಅವಶ್ಯವಿರುವಲ್ಲಿ ಇಲಾಖೆ ವತಿಯಿಂದ ಕಾಮಗಾರಿ ನಿರ್ವಹಿಸಿ ಕಾಲುವೆ ಕೊನೆಯಂಚಿನ ರೈತರ ಜಮೀನುಗಳವರೆಗೆ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.

Advertisement

ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿ ಕ್ಲೋಸರ್‌ ಹಾಗೂ ಸ್ಪೇಷಲ್‌ ರಿಪೇರಿ ಕಾಮಗಾರಿಗೆ ಮಳೆಗಾಲದಲ್ಲಿ ಟೆಂಡರ್‌ ಕರೆಯಲಾಗಿದೆ. ರೋಹಿಣಿ ಹಾಗೂ ಮೃಗಶಿರಾ ಮಳೆ ಅಲ್ಪ ಪ್ರಮಾಣದಲ್ಲಿ ಆಗಿದ್ದರಿಂದ ಕಾಲುವೆಗಳಲ್ಲಿ ನೀರು ನಿಂತಿವೆ. ಇನ್ನು ಕಾಮಗಾರಿ ನಿರ್ವಹಿಸಲು ಅಗತ್ಯವಾಗಿ ಬೇಕಾಗಿರುವ ಕಾರ್ಮಿಕರು ಕೃಷಿ ಕೆಲಸದಲ್ಲಿ ತೊಡಗಿದ್ದಾರೆ. ಯಂತ್ರಗಳನ್ನು ಬಳಸಿಕೊಂಡು ಕಾಲುವೆಯಲ್ಲಿನ ಹೂಳು ತೆರವುಗೊಳಿಸುವುದಾದರೆ ಈಗಾಗಲೇ ನೀರು ನಿಂತು ಕಾಲುವೆಯ ಸಿಮೆಂಟ್‌ ಕಾಂಕ್ರೀಟ್‌ ನೀರಿನಿಂದ ಹಸಿಯಾಗಿವೆ. ಹೀಗೆ ಹಲವಾರು ಸಮಸ್ಯೆಗಳಿರುವುದರಿಂದ ಕಾಮಗಾರಿಗಳು ಗುಣಮಟ್ಟದ್ದಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೆಲ ಕಾಲುವೆಗಳಿಗೆ ತೆರಳಿ ಪರಿಶೀಲಿಸಿದಾಗ ಕಾಲುವೆಯಲ್ಲಿನ ಹೂಳು ಹಾಗೆಯೇ ಇದೆ. ಕೆಲ ಕಡೆಗಳಲ್ಲಿ ನೀರಿನಲ್ಲಿ ಯಂತ್ರಗಳಿಂದ ಹೂಳು ತೆಗೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಕಾಲುವೆಯ ನೀರಿನಲ್ಲಿ ಯಂತ್ರಗಳು ಸಿಲುಕಿಕೊಂಡು ಕಾಂಕ್ರೀಟ್‌ ಕಿತ್ತಿವೆ. ಕಾಲುವೆ ಪಕ್ಕದಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸುತ್ತಿರುವುದು ಕಂಡು ಬಂದಿದೆ.

ಅಧಿ ಕಾರಿಗಳು ಅವಶ್ಯವಿದ್ದಲ್ಲಿ ಕಾಮಗಾರಿ ಪಡೆದು ಇನ್ನುಳಿದವುಗಳನ್ನು ರದ್ದುಗೊಳಿಸಿ ಕೊರೊನಾ ನಿರ್ಮೂಲನೆಗಾಗಿ ಖರ್ಚು ಮಾಡಬಹುದಾಗಿತ್ತು. ಆದರೆ ಸರ್ಕಾರದ ಹಣ ಒಟ್ಟಾರೆ ಖರ್ಚು ಮಾಡಲು ಅಧಿ ಕಾರಿಗಳು ಹಠಮಾರಿ ಧೋರಣೆ ಅನುಸರಿಸುತ್ತಿರುವುದೇಕೆ? ಇದರಿಂದ ಕೇವಲ ಹಣ ಖರ್ಚು ಮಾಡಲು ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆಯೇ ಹೇಗೆ? ಸರ್ಕಾರದ ಹಣ ಸದುಪಯೋಗಕ್ಕಿಂತಲೂ ದುರುಪಯೋಗವಾಗುವ ಸಂಭವವೇ ಹೆಚ್ಚು. ಆದ್ದರಿಂದ ಸರ್ಕಾರದ ತನಿಖಾ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next