Advertisement
ಪ್ರತಿ ವರ್ಷವೂ ರೋಹಿಣಿ, ಮೃಗಶಿರಾ ಮಳೆಗಳು ಸುರಿದು ಭೂಮಿಯನ್ನು ಹದವಾಗಿರಿಸಿಕೊಂಡಿದ್ದರೈತರು ಬಿತ್ತನೆ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಹಂಗಾಮಿನ ಮಳೆಗಳು ಸಮರ್ಪಕವಾಗಿ ಸುರಿಯದಿರುವುದರಿಂದ ಬಿತ್ತನೆ ಮಾಡಲು ರೈತರು ಭೂಮಿಯನ್ನು ಹದವಾಗಿರಿಸಿಕೊಂಡಿದ್ದರೂ ಬಿತ್ತನೆ ಮಾಡದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
Related Articles
Advertisement
ಮುಂಗಾರು ಹಂಗಾಮಿನ ಮಳೆಯಾಗದಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಈ ಸಂದರ್ಭದಲ್ಲಿ ಸರ್ಕಾರರೈತರ ನೆರವಿಗೆ ಬಂದು ಆತ್ಮಸ್ಥೈರ್ಯ ತುಂಬಬೇಕು ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಮಲ್ಲೇಶ ರಾಠೊಡ. ಗರಿಷ್ಠ 519.6 ಮೀ. ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಬುಧವಾರದ ಬೆಳಗಿನ ಮಾಹಿತಿಯಂತೆ 507.76 ಮೀ. ಎತ್ತರದಲ್ಲಿ 20.547 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇದರಲ್ಲಿ 17.620 ಟಿಎಂಸಿ ಅಡಿ ಜಲಚರಗಳಿಗೆ ಮೀಸಲಿದ್ದು ಇನ್ನುಳಿದ 2.927 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದೆ. ಜಲಾಶಯಕ್ಕೆ ಒಳ ಹರಿವು 19,172 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ವಿವಿಧ ಕುಡಿಯುವ ನೀರಿನ ಘಟಕಗಳಿಗೆ ಮತ್ತು ಭಾಷ್ಪೀಭವನ ಸೇರಿ ಒಟ್ಟು 561 ಕ್ಯೂಸೆಕ್ ನೀರು ಹೊರ ಹರಿವಿದೆ. ಕಳೆದ 22 ವರ್ಷಗಳಲ್ಲಿ 2021ನೇ ಸಾಲಿನಲ್ಲಿ ಮೇ 23ಕ್ಕೆ ಒಳ ಹರಿವು ಆರಂಭವಾಗಿ ಅಕ್ಟೋಬರ್ 22ರಂದು ಒಳ ಹರಿವು ಸ್ಥಗಿತಗೊಂಡಿತ್ತು. ನಂತರ ಮತ್ತೆ ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ಮಳೆ ಆರಂಭವಾಗಿದ್ದರ ಪರಿಣಾಮವಾಗಿ ಮತ್ತೆ ನವೆಂಬರ್ 20ರಿಂದ ಒಳ ಹರಿವು ಆರಂಭಗೊಂಡು ಡಿಸೆಂಬರ್ 29ರಂದು ಸ್ಥಗಿತಗೊಂಡಿತ್ತು. ಮಳಿ ಆಗಲಾರ್ದಕ ಬಿತ್ತುದ ಬಿಟ್ಟ ಬೀಜ ಗೊಬ್ಬರ ಹಂಗ ಮನ್ಯಾಗ ಇಟ್ಕೊಂಡ ಕುಂತೀವ್ರಿ. ಮ್ಯಾಲಕ ಅರ ಮಳಿ ಆಗಿದ್ರ ಆಲಮಟ್ಟಿ ಡ್ಯಾಮಿಗಿ ನೀರ ಬಂದ್ರ ಕೆನಾಲಕ ನೀರ ಬಿಡತಿದ್ರ. ಆ ನೀರರ ಹೊಲಕ ಉಣ್ಣಸಿತ್ತೀದ್ದೀವ್ರಿ, ಈ ಸಲಾ ಅದೂ ಇಲ್ಲ ನಮ್ಮ ಗತಿ ಹೆಂಗ ಅನ್ನುವಂಗ ಆಗೇತ್ರಿ.
ಖಾಜೇಸಾಬ ಗಂಜ್ಯಾಳ, ಬೇನಾಳ ಪ್ರತಿ ಸಲ ಮಳೆಯಾಗುತ್ತಿದ್ದರಿಂದ ಅಕಡಿ ಕಾಳುಗಳನ್ನು ಚೆಲೋ ಬೆಳೀತ್ತಿದ್ದೀವ್ರಿ. ಆದ್ರ ಈ ಸಲಾ ಮಳಿ ಆಗಲಿಲ್ಲ, ಒಣ ನೆಲಾ ಹಂಗ ಇಟ್ಟೇವ್ರಿ.
ಮಲ್ಲಿಕಾರ್ಜುನ ಗುಳೇದ, ಕಾರಜೋಳ ಶಂಕರ ಜಲ್ಲಿ