Advertisement

ಅರಳದಿನ್ನಿಗೆ ಅಧಿಕಾರಿಗಳ ಭೇಟಿ: ಪರಿಸ್ಥಿತಿ ಪರಿಶೀಲನೆ

05:28 PM Aug 09, 2019 | Naveen |

ಆಲಮಟ್ಟಿ: ಕೃಷ್ಣೆಯ ನೆರೆಹಾವಳಿ ಪೀಡಿತ ಅರಳದಿನ್ನಿ ಗ್ರಾಮಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್‌ ಮೋಹ್ಸಿನ್‌ ಹಾಗೂ ಕೃಷ್ಣಾಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ| ಜೆ.ರವಿಶಂಕರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಗುರುವಾರ ವೆಳಗ್ಗೆ ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿರ್ದೇಶಕ ಡಾ| ಜೆ.ರವಿಶಂಕರ ಅವರು ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಡಿ.ಬಸವರಾಜು ಅವರೊಂದಿಗೆ ಅರಳದಿನ್ನಿಯ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಯುವ ಮುಖಂಡ ಸುರೇಶ ಗುಮತಿಮಠ, ಪ್ರತಿ ಬಾರಿ ಕೃಷ್ಣಾ ನದಿಗೆ ನೆರೆ ಹಾವಳಿ ಬಂದಾಗಲೂ ಗ್ರಾಮದ ಸುಮಾರು 30ಕ್ಕೂ ಅಧಿಕ ಎಕರೆ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗುವುದು ವಾಡಿಕೆಯಾಗಿದೆ. ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯಸಂಸ್ಕಾರ ನಡೆಸಲು ಸ್ಮಶಾನ ಜಾಗೆಯಿಲ್ಲ, ದನಕರುಗಳನ್ನು ಮೇಯಿಸಲು ಗೋಮಾಳವಿಲ್ಲ. ಆದ್ದರಿಂದ ಈ ಹಿಂದೆಯಿದ್ದ ರೈಲ್ವೆ ಇಲಾಖೆಯಿಂದ ನಿರ್ಮಿತ ಕೃಷ್ಣಾ ಸೇತುವೆ ಪಕ್ಕದ ಕೃಷ್ಣಾ ಭಾಗ್ಯಜಲ ನಿಗಮದ ಜಾಗೆಯಲ್ಲಿ ನಮಗೆ ಗೋಮಾಳ ನೀಡಿದರೆ ಅದನ್ನೇ ನಾವು ಸ್ಮಶಾನಕ್ಕೂ ಬಳಸಿಕೊಳ್ಳುತ್ತೇವೆ. ಇನ್ನು ಗ್ರಾಮಕ್ಕೆ ಸಮೀಪದಲ್ಲಿಯೇ ನದಿಯಿರುವುದರಿಂದ ಮುಂದೊಂದು ದಿನ ತೊಂದರೆಯಾಗಬಹುದು. ಆದ್ದರಿಂದ ಗ್ರಾಮವನ್ನು ನಮ್ಮ ಗ್ರಾಮದ ಸರಹದ್ದಿನಲ್ಲಿಯೇ ಸುರಕ್ಷಿತ ಸ್ಥಳದಲ್ಲಿ ನಿರ್ಮಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಗ್ರಾಮಸ್ಥರ ಅಹವಾಲು ಆಲಿಸಿದ ಕೆಬಿಜೆಎನೆಲ್ ವ್ಯವಸ್ಥಾಪಕ ನಿರ್ದೇಶಕರು, ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಗ್ರಾಮಕ್ಕೆ ಸ್ಮಶಾನ ಜಾಗೆಯನ್ನು ಪ್ರಥಮ ಆದ್ಯತೆ ಮೇಲೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾಯಂಕಾಲ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್‌ ಮೋಹ್ಸಿನ್‌ ಅವರು ಬಸವನಬಾಗೇವಾಡಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿಯವರೊಂದಿಗೆ ಆಗಮಿಸಿ ಪ್ರವಾಹ ಪೀಡಿತ ಸ್ಥಳ ಪರಿಶೀಲಿಸಿದರು.

Advertisement

ನಂತರ ಗ್ರಾಮಸ್ಥರು ಗ್ರಾಮವನ್ನು ಸ್ಥಳಾಂತರಿಸುವುದು ಹಾಗೂ ವಿವಿಧ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಅವರು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ತಾವು ಪ್ರಥಮವಾಗಿ ಪ್ರವಾಹ ಪೀಡಿತ ಗ್ರಾಮವಾದ ಅರಳದಿನ್ನಿಗೆ ಭೇಟಿ ನೀಡಿದ್ದು ಜಲಾವೃತದಿಂದ ಬೆಳೆ ಹಾನಿಯಾಗಿರುವ ರೈತರಿಗೆ ಯೋಗ್ಯ ಪರಿಹಾರ ನೀಡಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಆಲಮಟ್ಟಿ ಪಿಡಿಒ ಮಂಜುಳಾ ಘಂಟಿ, ನಿಡಗುಂದಿ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪ್ರಕಾಶ ಗೋಡಖೀಂಡ್ಕಿ, ಮಲ್ಲನಗೌಡ ಬಿರಾದಾರ, ಮಹಾಂತೇಶ ಬೆಳಗಲ್ಲ, ಸಲೀಂ ಮುಲ್ಲಾ, ಬಸವರಾಜ ಹೆರಕಲ್ಲ, ಲಕ್ಷ್ಮಣ ಹಂಡರಗಲ್ಲ, ಭೀಮಪ್ಪ ವಾಲೀಕಾರ, ಸುಭಾಷ್‌ ಪವಾರ, ಪರಶುರಾಮ ಬಡಿಗೇರ, ಆಲಮಟ್ಟಿ ಗ್ರಾಪಂ ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಯಲಗೂರೇಶ ಕೊಳ್ಳಾರ, ಯಲಗೂರದಪ್ಪ ಟುಬಾಕಿ, ಕಾಶಿಮಸಾಬ ನಿಡಗುಂದಿ, ನವಾಬ ಮುಲ್ಲಾ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next