ಶಂಕರ ಜಲ್ಲಿ
ಆಲಮಟ್ಟಿ: ಕೃಷ್ಣೆ ಉಗಮ ಸ್ಥಾನ ಹಾಗೂ ಕೃಷ್ಣೆಯ ಜಲಾನಯ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 1,05,115 ಕ್ಯೂಸೆಕ್‌ಗಿಂತಲೂ ಅಧಿಕ ನೀರು ಹರಿದು ಬರುತ್ತಿದ್ದು ಜಲಾಶಯ ತುಂಬುವ ಆಶಾಭಾವ ಮೂಡುವಂತಾಗಿದೆ.
519.600 ಮೀ. ಎತ್ತರದ ಜಲಾಶಯ ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಸಂಜೆ ಜಲಾಶಯಕ್ಕೆ 1,05,115 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಇದರಿಂದ ಜಲಾಶಯದಲ್ಲಿ ಸುಮಾರು 82 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅದರಲ್ಲಿ 17.650 ಟಿಎಂಸಿ ಜಲಚರಗಳಿಗಾಗಿ ಮೀಸಲಿರಿಸಿದರೆ, 64.350 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ.
ಕಳೆದ ವರ್ಷ ಜು. 12ರಂದು 514.480ಮೀ. ಎತ್ತರದಲ್ಲಿ 67.666 ಟಿಎಂಸಿ ಅಡಿ ನೀರು ಸಂಗ್ರಹವಾಗಿ 63,465 ಕ್ಯೂಸೆಕ್ ಒಳಹರಿವಿದ್ದು 5500 ಕ್ಯೂಸೆಕ್ ನೀರನ್ನು ವಿವಿಧ ಮೂಲಗಳಿಂದ ನೀರನ್ನು ಹೊರ ಬಿಡಲಾಗುತ್ತಿತ್ತು.
ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳಿಂದ ಸುಮಾರು 6.5 ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ. ಬಸವಸಾಗರ ಜಲಾಶಯ ವ್ಯಾಪ್ತಿಯಲ್ಲಿ ನೀರಾವರಿಗೊಳಪಡುವ ಜಮೀನುಗಳು ಹೆಕ್ಟೇರ್‌ಗಳಲ್ಲಿ ನಾರಾಯಣಪುರ ಎಡದಂಡೆಕಾಲುವೆ-27,961ಹೆಕ್ಟೇರ್, ಹುಣಸಗಿ ಶಾಖಾ ಕಾಲುವೆ-22,172ಹೆಕ್ಟೇರ್, ರಾಂಪುರ ಏತ ನೀರಾವರಿ ಕಾಲುವೆ-21,571.50 ಹೆಕ್ಟೇರ್, ಶಹಾಪುರ ಶಾಖಾ ಕಾಲುವೆ- 1,03,417 ಹೆಕ್ಟೆರ್, ಮುಡಬೂಳ ಶಾಖಾ ಕಾಲುವೆ-41,885ಹೆಕ್ಟೇರ್, ಇಂಡಿ ಶಾಖಾ ಕಾಲುವೆ-1,24,110.92 ಹೆಕ್ಟೇರ್, ಇಂಡಿ ಏತ ನೀರಾವರಿ ಯೋಜನೆ-50,838.10 ಹೆಕ್ಟೇರ್ ಜೇವರ್ಗಿ ಶಾಖಾ ಕಾಲುವೆ-55,266.58 ಹೆಕ್ಟೇರ್, ನಾರಾಯಣಪುರ ಬಲದಂಡೆ ಕಾಲುವೆ-97,202.94 ಹೆಕ್ಟೇರ್, ರಾಜನಕೊಳೂರ ಏತ ನೀರಾವರಿ-845.19ಹೆಕ್ಟೇರ್, ಮರೋಳ (ರಾಮಥಾಳ)ಏತ ನೀರಾವರಿ ಮೊದಲ ಹಂತ ಪೂರ್ವ ಕಾಲುವೆ- 6015.93 ಹೆಕ್ಟೇರ್, ಮರೋಳ (ರಾಮಥಾಳ) ಮೊದಲ ಹಂತ ಪಶ್ಚಿಮ ಕಾಲುವೆ-6970.80 ಹೆಕ್ಟೇರ್, ಮರೋಳ (ರಾಮಥಾಳ) ಹಂತ2 ಹನಿ ನೀರಾವರಿ ಪೂರ್ವ-9840.97ಹೆಕ್ಟೇರ್, ಮರೋಳ(ರಾಮಥಾಳ) ಹಂತ 2 ಹನಿ ನೀರಾವರಿ ಪಶ್ಚಿಮ-9360.57 ಹೆಕ್ಟೇರ್ ಹಾಗೂ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ-21,981.11 ಹೆಕ್ಟೇರ್, ಆಲಮಟ್ಟಿ ಬಲದಂಡೆ ಕಾಲುವೆ-8,939.98 ಹೆಕ್ಟೇರ್, ಮುಳವಾಡ ಏತ ನೀರಾವರಿ ಪೂರ್ವ ಕಾಲುವೆ-6,046.91 ಹೆಕ್ಟೇರ್, ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆ-15,862.84, ಸೊನ್ನ ಏತ ನೀರಾವರಿ-546.69 ಹೆಕ್ಟೇರ್, ತಿಮ್ಮಾಪುರ ಏತ ನೀರಾವರಿ ಯೋಜನೆಡಿಸಿ1-12,472.38ಹೆಕ್ಟೇರ್, ತಿಮ್ಮಾಪುರ ಏತ ನೀರಾವರಿ ಯೋಜನೆ ಡಿಸಿ2-3,382.86 ಹೆಕ್ಟೇರ್, ಚಿಮ್ಮಲಗಿ ಏತ ನೀರಾವರಿ ಸಂಯುಕ್ತ ಕಾಲುವೆ-1,073.31 ಹೆಕ್ಟೇರ್, ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆ-4,140.47ಹೆಕ್ಟೇರ್, ತೆಗ್ಗಿ ಸಿದ್ದಾಪುರ ಏತ ನೀರಾವರಿ ಯೋಜನೆ-471.68 ಹೆಕ್ಟೇರ್, ರೊಳ್ಳಿಮನ್ನಿಕೇರಿ-797.20 ಹೆಕ್ಟೇರ್ ಪ್ರದೇಶಗಳು ಸೇರಿದಂತೆ ಒಟ್ಟು 6,53,173.93 ಹೆಕ್ಟೇರ್ ಪ್ರದೇಶವು ಮುಂಗಾರು ಹಂಗಾಮಿಗೆ ನೀರಾವರಿಗೊಳಪಡಲಿವೆ.
ವಿದ್ಯುತ್‌ಗೂ ನೀರು: ಕೂಡಗಿಯಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರಕ್ಕೆ ಆಲಮಟ್ಟಿ ಪಾರ್ವತಿಕಟ್ಟೆ ಸೇತುವೆ ಹತ್ತಿರದಿಂದ 18 ಕಿ.ಮೀ. ಅಂತರದ ಕೂಡಗಿಗೆ ಕೊಳವೆ ಮಾರ್ಗವಾಗಿ ಒಂದು ವರ್ಷಕ್ಕೆ 2.50 ಟಿಎಂಸಿ ಹಾಗೂ ಆಲಮಟ್ಟಿ ಜಲಾಶಯದ ಬಲ ಭಾಗದಲ್ಲಿರುವ ಕರ್ನಾಟಕ ವಿದ್ಯುತ್ ಉತ್ಪಾದನಾ ಘಟಕದ 55 ಮೆ.ವ್ಯಾ.ನ 5 ಹಾಗೂ 15 ಮೆ.ವ್ಯಾ.ನ ಒಂದು ಘಟಕ ಸೇರಿದಂತೆ ಒಟ್ಟು ಆರು ಘಟಕಗಳಿಂದ 290 ಮೆ.ವ್ಯಾ.ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕೆರೆ ಹಾಗೂ ಬಾಂದಾರ: ವಿಜಯಪುರ ಜಿಲ್ಲೆಯ 16 ಕೆರೆ, 5 ಬಾಂದಾರ್ ಮತ್ತು ಬಾಗಲಕೋಟ ಜಿಲ್ಲೆಯ 7 ಕೆರೆಗಳ ತುಂಬುವ ಯೋಜನೆ ಹಾಗೂ ಮಮದಾಪುರ, ಸಾರವಾಡ, ಬಬಲೇಶ್ವರ, ಬೇಗಂತಲಾಬ, ಭೂತನಾಳ, ತಿಡಗುಂದಿ, ತಿಕೋಟಾ ಮತ್ತು ಇತರೆ 10 ಕೆರೆಗಳನ್ನು ತುಂಬಲಾಗುತ್ತಿದೆ.
ಒಟ್ಟಾರೆ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಸಂಗ್ರಹವಾಗುವ 123.081 ಟಿಎಂಸಿ ಅಡಿ ನೀರಿನಲ್ಲಿ ಎಲ್ಲ ಕಾಲುವೆ ಜಾಲ, ಕೆರೆ ತುಂಬುವ ಯೋಜನೆ, ಕೈಗಾರಿಕೆ, ಭಾಷ್ಪೀಕರಣ ಹಾಗೂ ಕುಡಿಯುವ ನೀರು ಸೇರಿದಂತೆ ಒಟ್ಟು 17.90 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ನಾರಾಯಣಪುರದ ಬಸವ ಸಾಗರದಲ್ಲಿ 33.313 ಟಿಎಂಸಿ ಅಡಿ ನೀರಿನಲ್ಲಿ ಎಲ್ಲ ಕಾಲುವೆಗಳು, ಹನಿ ನೀರಾವರಿ ಯೋಜನೆಗಳು, ಕೈಗಾರಿಕೆ, ಭಾಷ್ಪೀಕರಣ ಹಾಗೂ ಕುಡಿಯುವ ನೀರು ಸೇರಿದಂತೆ 105.75 ಟಿಎಂಸಿ ಅಡಿ ನೀರು ಬಳಸಿಕೊಳ್ಳಲಾಗುತ್ತಿದೆ.