Advertisement
ಆಲಮಟ್ಟಿಯು ಬೃಹತ್ ಜಲಾಶಯ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನ, ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋ ಸೇರಿದಂತೆ ವಿವಿಧ ತಾಣಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ರೈಲ್ವೆ ನಿಲ್ದಾಣವನ್ನು ಹೊಂದಿ ಪ್ರವಾಸಿಗರ ಆಗಮನಕ್ಕೆ ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಹೊಂದಿರುವದರಿಂದ ಕಳೆದ ಕೆಲ ವರ್ಷಗಳಿಂದ ಪ್ರವಾಸಿಗರು ಏರುಗತಿಯಲ್ಲಿ ಆಗಮಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯಿಂದ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ವ್ಯಾಪಕ ಇಳಿಮುಖವಾಗಿದ್ದರೂ ಕೂಡ ಆಲಮಟ್ಟಿಯ ರಾಕ್ ಉದ್ಯಾನ ಸೇರಿದಂತೆ ಎಲ್ಲ ಉದ್ಯಾನಗಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಜನರು ಆಗಮಿಸುತ್ತಿರುವುದು ವಿಶೇಷ.
Related Articles
Advertisement
ಶುಚಿತ್ವಕ್ಕೆ ಆದ್ಯತೆ: ಆಲಮಟ್ಟಿ ಪಟ್ಟಣವು ನಿತ್ಯ ಹಸಿರುಡುಗೆಯನ್ನು ತೊಟ್ಟು ಪರಿಸರ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗಿಡಮರ ಹಾಗೂ ಜನದಟ್ಟಣೆ ಪ್ರದೇಶವಾಗಿರುವದರಿಂದ ಸಹಜವಾಗಿ ಕಸಕಡ್ಡಿಗಳು, ತ್ಯಾಜ್ಯಗಳು ಬೀಳುವದು ಸಹಜ. ಆದರೆ ಕೃಷ್ಣಾಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ಕಾಳಜಿಯಿಂದ ಎಲ್ಲ ಉದ್ಯಾನಗಳು, ಕಚೇರಿಗಳು ಹಾಗೂ ಎಲ್ಲ ರಸ್ತೆಗಳು ಸ್ವಚ್ಛವಾಗಿರುವದರಿಂದ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ತಾಪಂ ಸದಸ್ಯ ಮಲ್ಲು ರಾಠೊಡ.
ಪ್ರತಿ ವರ್ಷವೂ ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದರಿಂದ ಸಹಜವಾಗಿ ಜನ ಬರುವದು ಕಡಿಮೆಯಿರುತ್ತದೆ. ಇನ್ನು ಕೊರೊನಾ ವೈರಸ್ ಪರಿಣಾಮ ಪ್ರವಾಸಿಗರ ಸಂಖ್ಯೆ ಮೇಲೆ ಪರಿಣಾಮ ಬೀರಿಲ್ಲ.ಮಹೇಶ ಪಾಟೀಲ
ವಲಯ ಅರಣ್ಯಾಧಿಕಾರಿ,
ಆಲಮಟ್ಟಿ ಪರೀಕ್ಷಾ ಸಮಯವಾದ್ದರಿಂದ ಪ್ರವಾಸಕ್ಕೆ ಬರುವವರ ಸಂಖ್ಯೆ ಇಳಿಕೆಯಾಗಿದೆ. ಆದರೆ ಯಾವುದೇ ವೈರಸ್ ನಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ.
ಚಂದ್ರಶೇಖರ ಬಳ್ಳಾರಿ ಹಾಗೂ
ದೇವೇಂದ್ರ ಹಿರೇಮನಿ, ಸಣ್ಣ ವ್ಯಾಪಾರಸ್ಥರು ಶಂಕರ ಜಲ್ಲಿ