ಬಾಲ್ಯದಿಂದಲೇ ಭರತನಾಟ್ಯದೊಂದಿಗೆ ಈಕೆಗೆ ಗಟ್ಟಿಯಾದ ನಂಟು. 1500ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿ, ವೇದಿಕೆಗಳ ಮೇಲೆ ತನ್ನದೇ ಛಾಪು ಮೂಡಿಸಿರುವ ಕಲಾವಿದೆ. ಹೆಸರಿಗೆ ತಕ್ಕಂತೆ ನೃತ್ಯದ ಕಂಪನ್ನು ಮಲ್ಲಿಗೆಯಂತೆ ಪಸರಿಸುತ್ತಿರುವ, ಅಲಾಫಿಯಾ ಜಾಸ್ಮಿನ್ ಖಾನ್ ಈಗ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾರೆ.
ಇವರು ಲಿಂಗರಾಜಪುರದ “ನವ್ಯ ನಾಟ್ಯ ಸಂಗಮ’ದ ನಾಟ್ಯಗುರು ಗೀತಾ ಶ್ರೀನಾಥ್‌ರ ಬಳಿ ಹದಿನೈದು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ತಂದೆ ಜಬ್ಬೆರುಲ್ಲ ಖಾನ್ ಮತ್ತು ತಾಯಿ ಜಾಸ್ಮಿನ್ ಖಾನ್‌ರ ಒತ್ತಾಸೆಯೇ ಇವರ ಸಾಧನೆಗೆ ಸ್ಫೂರ್ತಿ. ಚಿತ್ರಕಲೆ, ಸಂಗೀತ,ಮೂಕಾಭಿನಯ, ಜಾನಪದ ನೃತ್ಯ, ಥ್ರೋ ಬಾಲ್, ಬ್ಯಾಡ್ಮಿಂಟನ್, ಕರಾಟೆಯಲ್ಲಿ “ಬ್ಲಾÂಕ್ ಬೆಲ್ಟ್’.. ಹೀಗೆ ಬಹುಮುಖ ಪ್ರತಿಭೆ ಎನ್ನುವುದಕ್ಕೆ ಅನ್ವರ್ಥ ನಾಮದಂತಿರುವ ಅಲಾಫಿಯಾ ಪ್ರಸ್ತುತ ಎಂ.ಸಿ.ಎ ಓದುತ್ತಿದ್ದಾರೆ.
ಬೆಂಗಳೂರು ಮತ್ತು ಗೋವಾ ದೂರದರ್ಶನ ಕೇಂದ್ರ, ಶ್ರೀ ಶಂಕರ, ಸುವರ್ಣ ಮತ್ತು ಸೂರ್ಯ ಟಿವಿಗಳಲ್ಲಿ, ಇಸ್ಕಾನ್ ಹೆರಿಟೇಜ ಫೆಸ್ಟಿವಲ್, ಮೈಸೂರು ದಸರಾ, ಬಸವ ಧರ್ಮಸಮ್ಮೇಳನ, ನೆಹರು ಯುವಕೇಂದ್ರ ಉತ್ಸವ ಮುಂತಾದ ಪ್ರಸಿದ್ಧ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮೈಸೂರು ಹುಲಿ ಟಿಪ್ಪು$ಸುಲ್ತಾನ್ ಪ್ರಶಸ್ತಿ, ಕಲಾಕಿರಣ, ಬಾಲ್ಯಚೇತನ, ಪಾರಿಜಾತ, ಸವ್ಯಸಾಚಿ, ಬೆಳ್ಳಿ ಚುಕ್ಕಿ ಪ್ರಶಸ್ತಿ, ಬಾಲಮಯೂರಿ, ನೃತ್ಯರತ್ನ, ಕಲಾಸ್ಫೂರ್ತಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಎಲ್ಲಿ?: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು
ಯಾವಾಗ?: ಮಾ.4, ಭಾನುವಾರ ಬೆ.10