Advertisement

ಯಾರು ಜವಾಹಿರಿ?

11:19 PM Apr 07, 2022 | Team Udayavani |

ಐಮನ್‌ ಅಲ್‌- ಜವಾಹಿರಿ! ಕರ್ನಾಟಕದ ತುಂಬಾ ಈ ಅಲ್‌ಕಾಯಿದಾ ಉಗ್ರನದ್ದೇ ಮಾತು. “ಅಲ್ಲಾಹು ಅಕ್ಬರ್‌’ ಕೂಗಿ, ಹಿಜಾಬ್‌ ಹೋರಾಟಗಾರ್ತಿಯಾಗಿ ಹೊರಹೊಮ್ಮಿದ ಮಂಡ್ಯದ ಹುಡುಗಿಗೆ, ಎಲ್ಲೋ ಅಡಗಿ ಕುಳಿತ ಉಗ್ರನಾಯಕ ಬೆಂಬಲ ಸೂಚಿಸಿದ್ದಾನೆ. ಅಷ್ಟಕ್ಕೂ ಜವಾಹಿರಿ ಯಾರು?

Advertisement

ಈಜಿಪ್ಟ್ ನ ಪಾತಕಿ :

ಮೂಲತಃ ಈಜಿಪ್ಟ್ನ ಉಗ್ರ ಐಮನ್‌ ಅಲ್‌- ಜವಾಹಿರಿ, ಪಾಕ್‌ನಲ್ಲಿ ಅಮೆರಿಕ ಹೊಡೆದುರುಳಿ­ಸಿದ ಒಸಾಮಾ ಬಿನ್‌ ಲಾಡೆನ್‌ನ ದೋಸ್ತ್. 2011ರಲ್ಲಿ ಲಾಡೆನ್‌ನನ್ನು ಅಮೆರಿಕ ಹೊಡೆದುರುಳಿಸಿದಾಗ, ಅಲ್‌ಖೈದಾ ನಾಯಕತ್ವ ಈ ದುಷ್ಟನ ಹೆಗಲೇರಿತು.

ಮಿಲಿಟರಿ ಡಾಕ್ಟರ್‌ :

ವೈದ್ಯ ಕುಟುಂಬದಲ್ಲಿ ಹುಟ್ಟಿದ ಜವಾಹಿರಿ, ಓದಿದ್ದು ಕೂಡ ಮೆಡಿಸಿನ್‌. ಪದ್ಯ ಬರೆಯುವ ಹುಚ್ಚು. ಕೈರೋ ವಿವಿಯಲ್ಲಿ ಓದುವಾಗಲೇ ಇಸ್ಲಾಮ್‌ ಮೇಲಿನ ದಬ್ಟಾಳಿಕೆ ಖಂಡಿಸಿ, ಪದ್ಯ ಗೀಚುತ್ತಿದ್ದ. ರಾಜಕೀಯ ನಂಟು ಹೊಂದಿದ್ದ ಚಿಕ್ಕಪ್ಪ ಮಾಫೌಝ್ ಅಜಮ್‌ನಿಂದ ಬ್ರೈನ್‌ವಾಶ್‌ ಆಗಿ “ಈಜಿಪ್ಟಿಯನ್‌ ಇಸ್ಲಾಮಿಕ್‌ ಜೆಹಾದಿ’ಯ ಹೋರಾಟಗಾರನಾದ. ಈಜಿಪ್ಟ್ನ ಮಿಲಿಟರಿಯಲ್ಲಿ ಸರ್ಜನ್‌ ಆಗಿದ್ದ. ಸೇನೆ ವಿರುದ್ಧ ಪಿತೂರಿ ರೂಪಿಸಿ ಸಿಕ್ಕಿಬಿದ್ದ.

Advertisement

ಈಗೆಲ್ಲಿದ್ದಾನೆ? :

70 ವರ್ಷದ ಈ ಮುದಿ ಉಗ್ರನೀಗ ಅಫ್ಘಾನ್‌ನ ವಾಯವ್ಯ ಭಾಗದ ಕುನಾರ್‌ ಪ್ರಾಂತ್ಯದಲ್ಲಿ ಅಡಗಿದ್ದಾನೆ. ತನ್ನ ಸುತ್ತ ಉಗ್ರ ತುಕಡಿಗಳನ್ನು ಕಾವಲು ಇರಿಸಿಕೊಂಡಿದ್ದಾನೆ.

ಇವನನ್ನು ಪಾಕ್‌ ಸಾಕಿತ್ತು… :

1995ರಲ್ಲಿ ಪಾಕಿಸ್ಥಾನದಲ್ಲಿ ಈಜಿಪ್ಟ್ನ ರಾಯಭಾರಿ ಕಚೇರಿ ಸ್ಫೋಟ ಈತನಿಗೆ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಪಾಕ್‌ನಲ್ಲಿದ್ದೇ ಈಜಿಪ್ಟಿಯನ್‌ ಇಸ್ಲಾಮಿಕ್‌ ಜೆಹಾದಿಗಳನ್ನು ಎತ್ತಿಕಟ್ಟಿ, ಈಜಿಪ್ಟ್ನಲ್ಲಿ ಬಾಂಬ್‌ ಸ್ಫೋಟಗಳ ಮೂಲಕ ಮಾರಣಹೋಮ ನಡೆಸಿದ. ಸಾಲು ಸಾಲು ಸಚಿವರನ್ನೇ ಕೊಂದ.

ಜೆಡ್ಡಾದಲ್ಲಿ ಲಾಡೆನ್‌ ಭೇಟಿ :

1985ರ ಸುಮಾರು. ಸೈನ್ಯ ತೊರೆದು, ಮೆಡಿಸಿನ್‌ ಅಭ್ಯಾಸದ ನೆಪದಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಬಂದಾಗ, ಈತನಿಗೆ ಅಲ್‌ಕಾಯಿದಾ ನಾಯಕ ಒಸಾಮ ಬಿನ್‌ ಲಾಡೆನ್‌ ಸಿಕ್ಕಿದ. ಲಾಡೆನ್‌ನ ಆಪ್ತಸಲಹೆಗಾರನಾಗಿ, ಕೊನೆಯವರೆಗೂ ಅವನ ಆರೋಗ್ಯ ಸೇವೆ ಮಾಡಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next