Advertisement

ಅಕ್ತಂಗಿ ಅನುಪಮಾಳ ಮಾತು: ಸಿಟ್‌ ಬಂದ್ರೆ ಸುಂಟರ್‌ಗಾಳಿ!

07:04 AM Apr 12, 2017 | |

ಇವರು ಅನುಪಮಾ ಗೌಡ. ಕಲರ್ ಕನ್ನಡದಲ್ಲಿ ಪ್ರಸಾರವಾಗುವ “ಅಕ್ಕ’ ಧಾರಾವಾಹಿಯಿಂದಾಗಿ ಎಲ್ಲರ ಮನೆ ಸದಸ್ಯೆಯಾಗಿರುವವರು. ತ್ಯಾಗಮಯಿ ಭೂಮಿಕ ಮತ್ತು ಬಜಾರಿ ದೇವಿಕಾ ಪಾತ್ರಗಳನ್ನು ಒಟ್ಟಿಗೇ ನಿರ್ವಹಿಸುತ್ತಾ ಉತ್ತಮ ನಟಿ ಎಂದು ವೀಕ್ಷಕರಿಂದ ಭೇಷ್‌ ಎನಿಸಿಕೊಂಡಿದ್ದಾರೆ. “ಅಕ್ಕ’ ಅನುಪಮಾಗೆ ನಾಲ್ಕನೆ ಧಾರಾವಾಹಿ. ಕಸ್ತೂರಿ ವಾಹಿನಿಯ “ಹಳ್ಳಿ ದುನಿಯಾ’ ರಿಯಾಲಿಟಿ ಶೋ ಇಂದ ಇವರ ಟೀವಿ ಜೀವನ ಆರಂಭವಾಗಿದೆ. ಮಧ್ಯ “ನಗಾರಿ’ ಎಂಬ ಸಿನಿಮಾದಲ್ಲಿ ಹೀರೋಯಿನ್‌ ಆಗಿಯೂ ನಟಿಸಿದ್ದಾರೆ. 

Advertisement

ಅನುಪಮಾ ಓಟ್ಸ್‌ ರೆಸಿಪಿ
ದಿನಾ ಸಪ್ಪೆ ಓಟ್ಸ್‌ ತಿಂದು ಬೇಜಾರಾಗಿದ್ದರೆ ಹೀಗೆ ಮಾಡಿ

1- ಬಾದಾಮಿಯನ್ನು ಇಡೀ ದಿನ ನೀರಲ್ಲಿ ನೆನೆಸಿಡಿ. ಅದನ್ನು ಮಿಕ್ಸಿಯಲ್ಲಿ ರುಬ್ಬಿ ಹಾಲು ತೆಗೆದುಕೊಳ್ಳಿ, 2 ಬಟ್ಟಲು ಬಾದಾಮಿ ರಸ ಇದ್ದರೆ ಸಾಕು. ಇದಕ್ಕೆ ಓಟ್ಸ್‌ ಬೆರೆಸಿ. ಬಳಿಕ ನಿಮ್ಮಿಷ್ಟ ಹಣ್ಣುಗಳನ್ನು ಹಾಕಿ. ಬಳಿಕ 1 ಚಮಚ ಕಸ್ತೂರಿ ಬೀಜ, ಒಂದು ಟೀ ಚಮಚ ಜೇನು ತುಪ್ಪ, ಬ್ಲೂ ಬೆರ್ರಿ ಮತ್ತು ಇತರ ಒಣ ಹಣ್ಣುಗಳು, ಚಿಟಿಕೆ ದಾಲಿcನ್ನಿ ಪುಡಿ ಬೆರೆಸಿ ರಾತ್ರಿ ಇಡೀ ಫ‌Åಡ್ಜ್ನಲ್ಲಿ ಇಡಿ ಮರುದಿನ ಸವಿಯಿರಿ. 

2- ನಿಮ್ಮ ಮನೆಯಲ್ಲಿ ಮಾಡಿದ ಬೇಳೆ ಸಾರು ಅಥವಾ ಸೊಪ್ಪಿನ ಸಾರನ್ನು ತೆಗೆದುಕೊಳ್ಳಿ ಅದಕ್ಕೆ ಓಟ್ಸ್‌ ಹಾಕಿ ಕುದಿಸಿ. ರಚಿಯಾದ ಓಟ್ಸ್‌ ತಯಾರಾಗುತ್ತದೆ. ಬಿಸಿಬೇಳೆ ಬಾತ್‌ನ ಫೀಲ್‌ ಕೊಡುತ್ತದೆ.

ನಿಮ್ಮ ಕಿರುತೆರೆಗೆ ಎಂಟ್ರಿ ಬಗ್ಗೆ ಹೇಳಿ? 
 ನಟನೆ ಕುರಿತು ನನಗೆ ಏನೂ ಗೊತ್ತಿರಲಿಲ್ಲ. ನನ್ನ ಸ್ನೇಹಿತರೊಬ್ಬರು ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಲಿದ್ದ ಹಳ್ಳಿ ದುನಿಯಾದ ಆಡಿಷನ್‌ನಲ್ಲಿ ಭಾಗವಹಿಸಲು ಸೂಚಿಸಿದರು. ರಿಯಾಲಿಟಿ ಶೋಗಳ ಕ್ರೇಜ್‌ ಹೆಚ್ಚಾಗಿದ್ದ ಸಮಯವದು. ಪ್ರಯತ್ನ ಮಾಡುವ ಎಂದು ಆಡಿಷನ್‌ನಲ್ಲಿ ಭಾಗವಹಿಸಿದೆ. ಧಾರಾವಾಹಿ ಅವಕಾಶಗಳೂ ಅವೇ ಹುಡುಕಿಕೊಂಡು ಬಂದವು ಒಪ್ಪಿಕೊಂಡು ಮಾಡಿದೆ ಅಷ್ಟೇ. ಎಲ್ಲವೂ ಕಾಕತಾಳೀಯ. ಸುಮಾರು ಆರುವರೆ ವರ್ಷ ಆಯಿತು ನಾನು ಟೀವಿ ಕ್ಷೇತ್ರಕ್ಕೆ ಕಾಲಿಟ್ಟು.

ಇಷ್ಟು ಚಂದ ನಟನೆ ಮಾಡ್ತೀರಿ! ಆಸಕ್ತಿ ಇಲ್ಲದೆ ಹೇಗೆ ಇದೆಲ್ಲಾ ಸಾಧ್ಯವಾಯಿತು?
ನನ್ನ ಮೊದಲ ಧಾರಾವಾಹಿ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ “ಅಣ್ಣತಂಗಿ’. ಆಗ ನನಗೆ ಒಂಚೂರೂ ನಟನೆ ಗೊತ್ತಿರಲಿಲ್ಲ. ನಿರ್ದೇಶಕರು ಬೈದು ಬೈದು ನನ್ನಿಂದ ನಟನೆ ಹೊರ ತೆಗೆಯುತ್ತಿದ್ದರು. ಬಳಿಕ ಚಿ.ಸೌ. ಸಾವಿತ್ರಿಯಲ್ಲಿ ನಟಿಸಿದೆ. ಆಗಲೇ ನಾನು ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು. ನಿರ್ದೇಶಕರಾದ ಶೃತಿ ನಾಯ್ಡು ಮತ್ತು ರಮೇಶ್‌ ನನ್ನ ಮನಸ್ಸಿಗೆ ನಾಟುವಂತೆ ಬುದ್ಧಿ ಹೇಳುತ್ತಿದ್ದರು. ನಿನಗೆ ಸೀರಿಯಸ್‌ನೆಸ್‌ ಇಲ್ಲ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊ ಎಂದು ಹೇಳುತ್ತಿದ್ದರು. 
 
ಅಕ್ಕದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದೀರಿ. ಪತ್ರ ನಿರ್ವಹಣೆ ಕಷ್ಟ ಆಗುವುದಿಲ್ಲವೇ? 
ತುಂಬಾ ಕಷ್ಟ ಆಗುತ್ತದೆ. ಎರಡು ಪಾತ್ರಗಳೂ ತದ್ವಿರುದ್ಧವಾದ ಪಾತ್ರಗಳು. ಅದಕ್ಕೆ ಮಾಡುವ ಮೇಕಪ್‌, ಹಾಕುವ ಉಡುಪು ಎಲ್ಲವೂ ಬೇರೆಯೆ. ಆದ್ದರಿಂದ ಹೆಚ್ಚಿನ ಶ್ರಮವಾಗುತ್ತದೆ. ಇನ್ನು ನಟನೆ ವಿಷಯಕ್ಕೆ ಬಂದರೂ ಅಷ್ಟೇ. ಅಳುಮಂಜಿ ಭೂಮಿಕ ಪಾತ್ರ ಮಾಡುವಾಗ ಹೆಚ್ಚು ಶ್ರಮವಾಗುವುದಿಲ್ಲ. ಆದರೆ ಸೈಕ್‌ ದೇವಿಕಾ ಪಾತ್ರ ಮಾಡುವಾಗ ಹೈರಾಣಾಗುತ್ತೇನೆ. ಕಿರುಚಿ ಕಿರುಚಿ ಗಂಟಲು ಬಿದ್ದು ಹೋಗುತ್ತದೆ. ಆ ಪಾತ್ರ ಮಾಡಿ ಎಷ್ಟೋ ಹೊತ್ತಿನ ಬಳಿಕವೂ ನಾನು ಡಿಸ್ಟಬ್‌xì ಆಗಿರುತ್ತೇನೆ. ಸಿಕ್ಕಸಿಕ್ಕವರ ಮೇಲೆ ಕಿರುಚಾಡುತ್ತೇನೆ. 

Advertisement

ಮುಂದೆ ದ್ವಿಪಾತ್ರದ ಅವಕಾಶಗಳು ಬಂದರೆ ಒಪ್ಪಿಕೊಳ್ಳುತ್ತೀರಾ?
ದ್ವಿಪಾತ್ರದ ಆಫ‌ರ್‌ ಬಂದರೆ ಏನು ಕಥೆ ಎಂದು ಕೆಲವೊಮ್ಮೆ ಭಯವಾಗುತ್ತದೆ. ಅಷ್ಟು ಸುಸ್ತಾಗಿಸಿದೆ ಅಕ್ಕ ಧಾರಾವಾಹಿ ನನ್ನನ್ನು. ಮೂರುವರೆ ವರ್ಷದಿಂದ ಕಿರುಚಿ ಕಿರುಚಿ ತಲೆನೋವು ಬಂದಿದೆ. ಖಂಡಿತಾ ಮಾಡುವುದಿಲ್ಲ. 

ಸಧ್ಯಕ್ಕೆ ಸಿನಿಮಾ ಆಫ‌ರ್‌ಗಳು ಇವೆಯಾ?
ಸಧ್ಯಕ್ಕೆ “ಜಗತ್‌ ಕಿಲಾಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನಗೆ ಆರ್ಟ್‌ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇದೆ. ನನ್ನ ಪ್ರತಿಭೆಯನ್ನು ಸಂಪೂರ್ಣವಾಗಿ ಒರೆಗೆ ಹಚ್ಚುವಂತ ಪಾತ್ರವಿರಬೇಕು. ನಿಜ ಹೇಳಬೇಕೆಂದರೆ ನನಗೆ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಕಡಿಮೆ. ನೀವು ಕೇಳಿರುತ್ತೀರ ಸಿನಿಮಾದ ನಿರ್ದೇಶಕರು ನಿರ್ಮಾಪಕರು ನಟಿಯರಿಂದ ಬೇರೆ ಏನೇನೋ ನಿರೀಕ್ಷಿಸುತ್ತಾರೆ ಎಂದು. ಅದು ನಿಜ. ಆ ರೀತಿ ಅನುಭವಗಳು ನನಗೂ ಆಗಿವೆ. ಆದ್ದರಿಂದ ಸಿನಿಮಾ ಕುರಿತ ಆಸ್ತಿಯೂ ಕಡಿಮೆಯಾಗಿದೆ. ಆದರೆ ನಾನು ಈವರೆಗೂ ನಟಿಸಿರುವ ಎರಡೂ ಚಿತ್ರಗಳಲ್ಲಿ ನಾನು ಖುಷಿಯಿಂದ ನಟಿಸಿದ್ದೇನೆ. ತುಂಬಾ ಒಳ್ಳೆಯ ತಂಡಗಳು ಸಿಕ್ಕವು.

ನಟಿಯಾದ ಮೇಲೆ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಕಿರಿಕಿರಿ ಅನುಭವಿಸಿದ ಸಂದರ್ಭ ಯಾವುದು?
ಮಡಿಕೇರಿಯಲ್ಲಿ ಶೂಟಿಂಗ್‌ ನಡೆಯುತ್ತಿದ್ದ ಸಂದರ್ಭ ನಾನು ವೀಜಿಂಗ್‌ನಿಂದಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಕೂಡಲೇ ನಮ್ಮ ತಂಡದವರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನಿನ್ನೂ ಚೇತರಿಸಿಕೊಂಡಿರಲಿಲ್ಲ. ಆಗಲೆ ಸಾಕಷ್ಟು ಜನ ಮುತ್ತಿಗೆ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಜಾಗಿಂಗ್‌, ಶಾಪಿಂಗ್‌ ಅಂತೆಲ್ಲಾ ಹೋದಾಗ ಪೋಲಿ ಹುಡುಗರು ತೀರಾ ಕೆಟ್ಟದಾಗಿ ಮಾಡ್ತಾರೆ. ಸುಮಾರು ಸಂದರ್ಭಗಳಲ್ಲಿ ಅವರ ಮೇಲೆ ಚನ್ನಾಗಿ ಕೂಗಾಡಿದ್ದೇನೆ. ಮಹಿಳೆಯರಿಗೆ ಗೌರವ ಕೊಡಲು ಮೊದಲು ಕಲಿಯಿರಿ ಎಂದು ಬೈದು ಹೇಳಿದ್ದೇನೆ. 

ನಿಮ್ಮ ಒಂದು ಕೆಟ್ಟ ಗುಣ ಯಾವುದು?
ಕೋಪ. ನನಗೆ ಕೋಪ ತುಂಬಾ ಜಾಸ್ತಿ. ಕೋಪ ಬಂದರೆ ಕಿರುಚಾಡುವುದು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಬಿಸಾಡುವುದು. ಕೋಪ ತಣ್ಣಗಾಗುವವರೆಗೂ ಯಾರೊಂದಿಗೂ ಮಾತಾಡುವುದಿಲ್ಲ. ನಿಮಗೆ ಗೊತ್ತಾ ಒಮ್ಮೆ ಕಾರಿನ ಪ್ರಯಾಣಿಸುತ್ತಿದ್ದಾಗ ಕೋಪ ನೆತ್ತಿಗೇರಿ ಕಾರಿನ ಗಾಜನ್ನು ಪುಡಿ ಮಾಡಿದ್ದೆ. ಇದುವರೆಗೂ 8 ಬಾರಿ ಪೋನ್‌ ಬಿಸಾಕಿ ಒಡೆದಿದ್ದೇನೆ. 

ಹಾಗಾದರೆ ಶೂಟಿಂಗ್‌ ಸೆಟ್‌ನಲ್ಲಿ ಹೇಗಿರಿ¤àರ? ಅಲ್ಲೂ ಕೂಗಾಡ್ತೀರಾ?
ಹೌದು ಅಲ್ಲೂ ಕೂಗಾಡುವುದು, ಕಿರುಚಾಡುವುದು ಇದೆ. ಹಾಗೆ ಮಾಡಿ ನನ್ನ ಸುತ್ತಲಿನ ವಾತಾವರಣವನ್ನು ಹಾಳು ಮಾಡಿ ಪಶ್ಚಾತಾಪ ಪಟ್ಟಿದ್ದೇನೆ. ಸೆಟ್‌ನಲ್ಲಿ ನನ್ನ ಬಳಿ ಮಾತನಾಡಲು ಹೆದರಿಕೊಳ್ತಾರೆ. ನಿರ್ದೇಶಕರಿಂದ ಸರಿಯಾಗಿ ಬೈಸಿಕೊಂಡ ಸಂದರ್ಭಗಳು ಬಹಳ ಇವೆ. 

ಕಾಲೇಜ್‌ ದಿನಗಳಲ್ಲಿ ಹೇಗಿದ್ರಿ.
ಬರೀ ಬಂಕ್‌ ಮಾಡುತ್ತಾ, ಸಿನಿಮಾ ನೋಡುತ್ತಾ ನನ್ನ ಕಾಲೇಜು ಜೀವನ ಕಳೆದೆ. ಪಿಯುಸಿಯಲ್ಲಿ ನಾನು ಮತ್ತು ನನ್ನ ಸ್ನೇಹಿತೆಯರು ಸೇರಿ ರಿಲೀಸ್‌ ಆಗುವ ಎಲ್ಲಾ ಸಿನಿಮಾ ನೋಡ್ತಾ ಇದ್ವಿ. ಅದರಲ್ಲೂ ಪುನೀತ್‌ ಮತ್ತು ಗಣೇಶ್‌ ಸಿನಿಮಾಗಳನ್ನು ಮಿಸ್‌ ಮಾಡ್ತಾನೆ ಇರಲಿಲ್ಲ. ಪಿಯು ಫೇಲ್‌ ಆದ ಬಳಿಕ ನಮ್ಮ ಅಮ್ಮ ನನ್ನನ್ನು 1 ವರ್ಷ ಮನೆಯಲ್ಲಿ ಕೂರಿಸಿದರು. ನನಗೆ ಸೀರಿಯಸ್‌ನೆಸ್‌ ಬರಲಿ ಎಂದು ಅವರು ನಡೆಸುತ್ತಿದ್ದ ಬೊಟಿಕ್‌ನಲ್ಲಿ ನನಗೆ ಕೆಲಸಕ್ಕೆ ಹಚ್ಚಿದರು. ಬಳಿಕ ನಾನು ಐಐಎಫ್ಟಿಯಲ್ಲಿ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಸೇರಿದೆ. 

ಫ್ರೆಂಡ್ಸ್‌ ಎಲ್ಲಾ ಸೇರಿ ಕೂತು ಹರಟೆ ಹೊಡೆಯುವುದಾರೆ ಎಲ್ಲಿಗೆ ಹೋಗ್ತಿàರಾ? 
ಪದ್ಮನಾಭ ನಗರದಲ್ಲಿ ಕೆಫೆ-11 ಅಂತ ಒಂದು ಕೆಫೆ ಇದೆ. ಅದೇ ನಮ್ಮ ಅಡ್ಡ. ಅಲ್ಲಿ ಗಂಟೆಗಟ್ಟಲೆ ಕೂತು ಕಾಫಿ ಹೀರುತ್ತಾ, ಸ್ನಾಕ್ಸ್‌ ತಿನ್ನುತ್ತಾ ಹರಟೆ ಹೊಡೀತೀವಿ.  ಅದು ಬಿಟ್ಟರೆ ವಿವಿ ಪುರಂ ಫ‌ುಡ್‌ ಸ್ಟ್ರೀಟ್‌ಗೆ ಹೋಗಿ ಚಾಟ್ಸ್‌ ತಿಂತೀವಿ.

ನಿಮ್ಮ ಯರಾದರೂ ಒಬ್ಬಬೆಸ್ಟ್‌ ಫ್ರೆಂಡ್‌ ಬಗ್ಗೆ ಹೇಳಿ.
ನನ್ನ ಬೆಸ್ಟ್‌ ಫ್ರೆಂಡ್‌ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರಧಾರಿ ನೇಹಾ ಗೌಡ. ಎಲ್ಲಾ ಸ್ನೇಹಿತೆಯರ ಜೊತೆ ನಮ್ಮ ಎಲ್ಲ ಕಷ್ಟ, ಸುಖಗಳನ್ನು ಹಂಚಿಕೊಳ್ಳಲು ಆಗುವುದಿಲ್ಲ. ನಾನು ನೇಹಾ ಜೊತೆ ಎಲ್ಲವನ್ನೂ ಶೇರ್‌ ಮಾಡ್ಕೊತೀನಿ. ಇಬ್ಬರು ಆಗಾಗ ಭೇಟಿಯಾಗುತ್ತಾ ಇರ್ತೇವೆ. ಇಬ್ಬರೂ ಒಟ್ಟಿಗೆ ಕೂತು ಹರಟೆ ಹೊಡೆಯುತ್ತೇವೆ. ಆಚೆ ಹೋಗಿ ಡಿನ್ನರ್‌ ಮಾಡುತ್ತೇವೆ. 

ಮನೆಯಲ್ಲಿದ್ದಾಗ ಅಡುಗೆ ಮಾಡುವ ಅಭ್ಯಾಸ ಇದೆಯಾ?
ನಾನು ತುಂಬಾ ಚನ್ನಾಗಿ ಅಡುಗೆ ಮಾಡ್ತೀನಿ. ನಾನು ಮಾಡುವ ಚಿಕನ್‌ ಬಿರಿಯಾನಿ, ಚಿಕನ್‌ ಕರಿ ತಿಂದರೆ ಕಳೆದೇ ಹೋಗ್ತಿàರಾ. ಮುದ್ದೆ ಉಪ್ಪುಸಾರನ್ನು ಕೂಡ ಸಕತ್ತಾಗಿ ಮಾಡ್ತೀನಿ. ನನ್ನ ಡಯೆಟ್‌ ಅಡುಗೆಯನ್ನು ನಾನೇ ತಯಾರಿಸಿಕೊಳ್ಳುವುದು. ನಾವೇ ಮಾಡಿದರೆ ರುಚಿ ಹೇಗಿದ್ದರೂ ತಿಂದೇ ತಿನ್ನುತ್ತೇವೆ. ಬೇರೆಯವರು ಮಾಡಿಕೊಟ್ಟರೆ ನಕರಾ ಮಾಡ್ತೀವಿ. 

ನಿಮ್ಮ ಡಯಟ್‌ ಪ್ಲಾನ್‌ ಬಗ್ಗೆ ಹೇಳಿ
ಕೆಲವು ದಿನ ಕಟ್ಟುನಿಟ್ಟಾಗಿ ಡಯಟ್‌ ಫಾಲೊ ಮಾಡ್ತೇನೆ. ಒಮ್ಮೆ ಅನ್ನ ತಿನ್ನಲು ಶುರು ಮಾಡಿದರೆ ಬಿಡಲು ಆಗುವುದೇ ಇಲ್ಲ. ಹೆಚ್ಚು ಅನ್ನ ಅಥವಾ ಹೆಚ್ಚು ಕ್ಯಾಲೋರಿಯುಕ್ತ ಅಡುಗೆ ತಿಂದ ದಿನ ಹೆಚ್ಚು ನೀರು ಕುಡಿಯುತ್ತೇನೆ. ದಿನಕ್ಕೆ 3 ಬಾರಿ ಗ್ರೀನ್‌ ಟೀ ಕುಡಿಯುತ್ತೇನೆ. ನನಗೆ ಜಿಮ್‌ಗೆ ಹೋಗುವುದರಲ್ಲಿ ನಂಬಿಕೆ ಇಲ್ಲ. ನಾನು ಮತ್ತು ನನ್ನ ಕೆಲ ಫ್ರೆಂಡ್ಸ್‌ ತಂಡ ಮಾಡಿಕೊಂಡಿದ್ದೇವೆ. ಬೆಳಗ್ಗೆ ಜಾಗಿಂಗ್‌ ಹೋಗುತ್ತೇವೆ. ಶೆಟಲ್‌ ಆಡ್ತಾವೆ. ಯೋಗ ಮಾಡ್ತೇವೆ. ಇದರಿಂದ ತಾಜಾ ಗಾಳಿಯನ್ನು ಸೇವಿಸಿದಂತೂ ಆಗುತ್ತದೆ. 

ನಿಮ್ಮ ಬ್ಯೂಟಿ ರೆಜಿಮ್‌ ಏನು.
ಕಲಾವಿದರಲ್ಲಿ ಬ್ಯೂಟಿ ಬಗ್ಗೆ ತಲೆಕೆಡಿಸಿಕೊಳ್ಳದ ಕಲಾವಿದೆ ನಾನೇ ಇರಬೇಕು. ನಾನು ಪಾರ್ಲರ್‌ಗಳಿಂದ ಬಹಳ ದೂರ ಇರುತ್ತೇನೆ. “ಬಾಡಿ ಶಾಪ್‌’ ಉತ್ಪನ್ನಗಳನ್ನು ಉಪಯೋಗಿಸುತ್ತೇನೆ. ಬಾಡಿ ಶಾಪ್‌ನ ಫೇಸ್‌ ಪ್ಯಾಕ್‌, ಮಾಯುರೈಸರ್‌ ಬಳಸಿ ಮನೆಯಲ್ಲೇ ಬಟಿ ಮೇಂಟೇನ್‌ ಮಾಡುತ್ತೇನೆ. 

ನನಗೆ ಓದುವುದರರಲ್ಲಿ ಆಸಕ್ತಿ ಕಡಿಮೆ. ಪಿಯುಸಿಯಲ್ಲಿ ಪೋಷಕರು ಒತ್ತಾಯವಾಗಿ ಸೈನ್ಸ್‌ ಕೊಡಿಸಿದ್ದರು. ನಾನು ಪಿಸಿಎಂಬಿ ನಾಲ್ಕೂ ವಿಷಯಗಳಲ್ಲೂ ಫೇಲ್‌ ಆಗಿದ್ದೆ. ಅದಕ್ಕಿಂತಲೂ ಸ್ವಾರಸ್ಯಕರ ವಿಷಯ ಎಂದರೆ ನನಗೆ ಸಿಇಟಿ ಪರೀಕ್ಷೆ ತೆಗೆದುಕೊಳ್ಳಲು ಮನೆಯವರು ಹಣ ನೀಡಿದ್ದರು. ನಾನದನ್ನು ಮಜಾ ಮಾಡಿ ಖರ್ಚು ಮಾಡಿದ್ದೆ. ಸಿಇಟಿ ಪರೀಕ್ಷೆ ಕಟ್ಟಿದ್ದೇನೆ ಎಂದು ಮನೆಯಲ್ಲಿ ಕಾಗೆ ಹಾರಿಸಿದ್ದೆ. ಪಾಪ ಅವರು ನಂಬಿದ್ದರು. ಪರೀಕ್ಷೆ ಫ‌ಲಿತಾಂಶ ಬಂದ ದಿನ ನನ್ನ ಫ‌ಲಿತಾಂಶಕ್ಕಾಗಿ ಹುಡುಕಿದರು. ಆಗ ನಾನು ಪರೀಕ್ಷೆ ಕಟ್ಟೇಯಿಲ್ಲವೆಂದು ಅವರಿಗೆ ತಿಳಿಯಿತು.
 
ಮೊದಲು ನಿಜ ಜೀವನದಲ್ಲೂ ದೇವಿಕಾ ಥರಾನೆ ಇದ್ದೆ. ತುಂಬಾ ಕ್ರೇಸಿ ನಾನು. ಆದರೆ ಅಕ್ಕ ಧಾರಾವಾಹಿ ನನ್ನನ್ನು ಬಹಳ ಬದಲಿಸಿದೆ. ಭೂಮಿಕಾ ಪಾತ್ರ ನಿರ್ವಹಿಸಲು ಆರಂಭಿಸಿದ ಬಳಿಕ ಆಕೆಯ ಗುಣಗಳನ್ನು ನನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈಗ ಸಾಕಷ್ಟು ತಾಳ್ಮೆ ಬಂದಿದೆ. ಏನಾದರೂ ಮಾತನಾಡುವ ಮೊದಲು ಯೋಚಿಸಿ ಮಾತನಾಡುತ್ತೇನೆ. ತುಂಬಾ ಸಹಿಸಿಕೊಳ್ಳುತ್ತೇನೆ. ಆದರೆ ಕೆಲವೊಮ್ಮೆ ಕೋಪದಿಂದ ಸ್ಫೋಟಿಸಿಬಿಡುತ್ತೇನೆ. 

ಚೇತನ. ಜೆ.ಕೆ 

Advertisement

Udayavani is now on Telegram. Click here to join our channel and stay updated with the latest news.

Next