Advertisement
2006ರಲ್ಲಿ ಇನ್ಫೋಸಿಸ್ ಫೌಂಡೇಶನ್ ನೀಡಿದ ಅನುದಾನದಿಂದ ಇಸ್ಕಾನ್ ಕೃಷ್ಣ ದೇವಸ್ಥಾನ ಸಮೀಪದಲ್ಲಿ ಬೃಹತ್ ಅಡುಗೆಮನೆ ನಿರ್ಮಿಸಲಾಗಿದೆ. ಅಂದಿನಿಂದ ಈವರೆಗೆ ನಿತ್ಯ ಧಾರವಾಡ ಜಿಲ್ಲೆಯ 800 ಶಾಲೆಯ 1.31 ಲಕ್ಷ ಮಕ್ಕಳಿಗೆ ರುಚಿಕರ ಭೋಜನ ನೀಡಲಾಗುತ್ತಿದೆ. ಅಡುಗೆಯಾಗುತ್ತಿದ್ದಂತೆಯೇ ಬಿಸಿಬಿಸಿ ಊಟವನ್ನು 61 ವಾಹನಗಳಲ್ಲಿ ಸಾಗಣೆ ಮಾಡಿ, ಮಕ್ಕಳ ತಟ್ಟೆಗೆ ಬಡಿಸಲಾಗುತ್ತದೆ. ಬೆಳಗ್ಗೆ ಮಕ್ಕಳ ಹಾಲು ಪೂರೈಸಲಾಗುತ್ತದೆ.
Related Articles
15- ನಿಮಿಷಗಳಲ್ಲಿ 1 ಕ್ವಿಂಟಲ್ ಅನ್ನ ಸಿದ್ಧ
40- ಬಾಣಸಿಗರಿಂದ ಅಡುಗೆ
45- ನಿಮಿಷಗಳಲ್ಲಿ ಸಾಂಬಾರ್ ತಯಾರಿ
800- ಶಾಲೆಯ ಮಕ್ಕಳು ಫಲಾನುಭವಿಗಳು
3,000- ಕಿಲೊ ಬೇಳೆ ನಿತ್ಯ ಅವಶ್ಯ
8,000- ಕಿಲೊ ತರಕಾರಿಯಿಂದ ಅಡುಗೆ
14,000- ಕಿಲೊ ಅಕ್ಕಿಯಿಂದ ಅನ್ನ ತಯಾರಿ
1,31,000- ಲಕ್ಷ ಮಕ್ಕಳಿಗೆ ನಿತ್ಯ ಊಟ
Advertisement
ಭಕ್ಷ್ಯಗಳೇನು?: ವಾರದಲ್ಲಿ 4 ದಿನ ಅನ್ನ- ಸಾಂಬಾರ್, 1 ದಿನ ಪಲಾವ್- ದಾಲ್, 1 ದಿನ ಉಪ್ಪಿಟ್ಟು- ಕೇಸರಿಬಾತ್, ಸೋಮವಾರ ಹಾಗೂ ಗುರುವಾರ ಗೋದಿ ರವೆ ಪಾಯಸ ನೀಡಲಾಗುತ್ತದೆ.
ಬೃಹದಾಕಾರದ ಅಡುಗೆಮನೆ: ಅಡುಗೆಮನೆ 1 ಎಕರೆ ವಿಸೀರ್ಣ ಹೊಂದಿದೆ. 2 ಟನ್ ಸಾಮರ್ಥ್ಯದ ಬಾಯ್ಲರ್. ಅದರಲ್ಲಿ ಸೀrಮ್ ಜನರೇಟ್ ಮಾಡಲಾಗುತ್ತದೆ. 600 ಲೀಟರ್ ಸಾಮರ್ಥಯದ 11 ರೈಸ್ ಕುಕ್ಕರ್‌ಗಳಿದ್ದು, ಒಂದು ಕುಕ್ಕರ್‌ನಲ್ಲಿ 1 ಕ್ವಿಂಟಲ್ ಅನ್ನ 15 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ತಲಾ 1200 ಲೀಟರ್ ಸಾಮರ್ಥ್ಯದ, ಸಾಂಬಾರ್ ತಯಾರಿಸುವ 8 ಬೃಹತ್ ಪಾತ್ರೆಗಳಿವೆ. 45 ನಿಮಿಷಗಳಲ್ಲಿ ಸಾಂಬಾರ್ ಸಿದ್ಧವಾಗುತ್ತದೆ.
ವಿಶೇಷತೆಗಳು ಒಂದೆರಡಲ್ಲ…– ಪಾಕಶಾಲೆಯಲ್ಲಿ ಒಟ್ಟು 400 ಸಿಬ್ಬಂದಿಯ ಸೇವೆಯಿದೆ. – 12 ರೂ. ವೆಚ್ಚದಲ್ಲಿ ಊಟ ಸಿದ್ಧಪಡಿಸಲಾಗುತ್ತಿದ್ದು, ಅದರಲ್ಲಿ ಶೇ.60 ಸರಕಾರ ಅನುದಾನ, ಉಳಿದ ವೆಚ್ಚವನ್ನು ದೇಣಿಗೆಯಿಂದ ಸರಿದೂಗಿಸಲಾಗುತ್ತದೆ. – ಬಯೋ ಡೈಜೆಸ್ಟರ್ ಮೂಲಕ ಇಲ್ಲಿ ತರಕಾರಿ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತದೆ. ನೀರನ್ನು ಮರುಬಳಕೆ ಮಾಡಲಾಗುತ್ತದೆ. 2 ಕೊಳವೆ ಬಾವಿಗಳಿದ್ದು, ಅವುಗಳಿಗೆ ಮಳೆ ನೀರು ಕೊಯ್ಲು ಅಳವಡಿಸಲಾಗಿದೆ. – “ಪದ್ಮಶ್ರೀ’ ಮಧು ಪಂಡಿತ ದಾಸ ಅಕ್ಷಯ ಪಾತ್ರೆ ಚೇರ್ಮನ್ ಆಗಿದ್ದು, ಅಕ್ಷಯ ಪಾತ್ರೆ ಹುಬ್ಬಳ್ಳಿ- ಧಾರವಾಡದ ಘಟಕದ ಅಧ್ಯಕ್ಷರಾಗಿ ರಾಜೀವ ಲೋಚನ ಸೇವೆ ಸಲ್ಲಿಸುತ್ತಿದ್ದಾರೆ. – ಅಕ್ಷಯ ಪಾತ್ರೆ ಅಡುಗೆಮನೆಗೆ ರತನ್ ಟಾಟಾ, ನಾರಾಯಣ ಮೂರ್ತಿ, ಸುಧಾ ಮೂರ್ತಿ, ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ ಸತ್ಯಾರ್ಥಿ, ಚಿತ್ರನಟ ರಮೇಶ್, ರಾಹುಲ್ ಭೋಸ್, ಯುಟಿವಿ ಚೇರ್ಮನ್ ರೋನಿ ಸ್ಕೂವಾಲಾ ಭೇಟಿ ನೀಡಿದ್ದಾರೆ. – ಅಕ್ಷಯ ಪಾತ್ರೆ ಅಡುಗೆಮನೆಗೆ ಆಹಾರ ಸುರಕ್ಷತೆಗೆ ಐಎಸ್‌ಒ 22001 ಹಾಗೂ ಪರಿಸರ ರಕ್ಷಣೆಗೆ ಐಎಸ್‌ಒ 14001 ಪ್ರಮಾಣ ಪತ್ರ ನೀಡಲಾಗಿದೆ. * ವಿಶ್ವನಾಥ ಕೋಟಿ