Advertisement

ಅಕ್ಷಯ ತೃತೀಯ: ಬಂಗಾರ ಖರೀದಿ ಜೋರು

12:52 AM May 08, 2019 | Lakshmi GovindaRaj |

ಬೆಂಗಳೂರು: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್‌ ಸಿಟಿಯಲ್ಲಿ ಬಹುತೇಕ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಯ ಭರಾಟೆ ಜೋರಾಗಿತ್ತು.

Advertisement

ಅಕ್ಷಯ ತೃತೀಯದಂದು ಆಭರಣ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಚಿನ್ನ ಬಂಗಾರ ಕೊಂಡರೆ ವರ್ಷವಿಡೀ ಒಳ್ಳೆಯದಾಗುತ್ತದೆ ನಂಬಿಕೆಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಭೇಟಿ ನೀಡಿ ಆಭರಣಗಳನ್ನು ಖರೀದಿಸಿದರು.

ಮಂಗಳವಾರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ಆರಂಭವಾದ ಶುಭಗಳಿಗೆಗೆ ಕೆಲ ಆಭರಣ ಮಳಿಗೆಗಳಲ್ಲಿ ಅಕ್ಷಯ ತೃತೀಯಕ್ಕಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಒಡವೆಗಳಿಗೆ ರಿಯಾಯಿತಿ ಹಾಗೂ ಬಹುಮಾನಗಳನ್ನು ನೀಡಲಾಯಿತು.

ಸುಲ್ತಾನ್‌ ಡೈಮಂಡ್ಸ್‌ ಅಂಡ್‌ ಗೋಲ್ಡ್‌ ಅಕ್ಷಯ ತೃತೀಯ ಅಂಗವಾಗಿ 5 ಗ್ರಾಂ ಚಿನ್ನಾಭರಣಗಳು ಹಾಗೂ 25 ಸಾವಿರ ಮೇಲ್ಪಟ್ಟು ವಜ್ರಾಭರಣಗಳ ಖರೀದಿಗೆ ಉಚಿತ ಚಿನ್ನದ ನಾಣ್ಯ, ಜೋಸ್ಕೊ ಜ್ಯುವೆಲರ್ 30 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿ ಮೇಲೆ ಉಚಿತ ಚಿನ್ನದ ನಾಟ್ಯ ನೀಡಲಾಯಿತು.

ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಜ್ಯುವೆಲರಿಯಲ್ಲಿ ಚಿನ್ನ, ಬೆಳ್ಳಿ, ವಜ್ರ ಖರೀದಿಸುವವರಿಗೆ ತಿರುಪತಿ ಪದ್ಮಾವತಿ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟ ಲಕ್ಷ್ಮೀ ವಿಗ್ರಹ ನೀಡುವ ಜತೆಗೆ ಮಹಿಳೆಯರಿಗೆ ಮಡಲಕ್ಕಿ ತುಂಬಲಾಯಿತು. ಕೆಲವೊಂದು ಮಳಿಗೆಗಳಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ ಶೇ.5ರಷ್ಟು ಕ್ಯಾಶ್‌ಬ್ಯಾಕ್‌ ಕೂಡಾ ಲಭ್ಯವಿತ್ತು. ಮಳಿಗೆಗಳಲ್ಲಿ ಜನಜಂಗುಳಿ ಕಂಡು ಬಂತು.

Advertisement

ಬಂಗಾರದ ಓಲೆ, ಉಂಗುರ, ಮೂಗು ನತ್ತು, ಚೈನು, ಬೆಳ್ಳಿ ಕಾಲು ಚೈನು, ಲಕ್ಷ್ಮೀ ಮುದ್ರೆಯ ಚಿನ್ನದ ನಾಣ್ಯ, ಪಾರಂಪರಿಕ ಆಭರಣಗಳು, ಟೆಂಪಲ್‌ ಜ್ಯುವೆಲರ್, ಆ್ಯಂಟಿಕ್‌ ಸೇರಿದಂತೆ ವಿವಿಧ ನೂತನ ವಿನ್ಯಾಸದ ಆಭರಣಗಳಿಗೆ ಬೇಡಿಕೆ ಹೆಚ್ಚಿತ್ತು. ವಿಶೇಷವಾಗಿ ರಾಜಕೀಯ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರವಿರುವ ಆಭರಣಕ್ಕೆ ಈ ಬಾರಿ ಬೇಡಿಕೆ ಇತ್ತು ಎಂದು ಚಿನ್ನದಂಗಡಿ ಮಾರಾಟಗಾರರು ತಿಳಿಸಿದರು.

ಹೆಚ್ಚಿನ ಬೇಡಿಕೆ ಇತ್ತು. 916 ಹಾಲ್‌ ಮಾರ್ಕ್‌ ಇರುವ ಒಂದು ಗ್ರಾಂ ಆಭರಣ ಚಿನ್ನ 3,100 ರೂ. ಅಪರಂಜಿ ಚಿನ್ನ 3,300 ರೂ.ಅಸುಪಾಸಿನಲ್ಲಿ ಮಾರಾಟವಾಯಿತು.

ಕಳೆದ ಬಾರಿಗಿಂತ ವಹಿವಾಟು ದುಪ್ಪಟ್ಟಾಗಿದೆ. ವಿಶೇಷ ಆ್ಯಂಟಿಕ್‌ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು. ಮಧ್ಯಾಹ್ನನಂತರ ಗ್ರಾಹಕರ ಆಗಮನ ಜೋರಿತ್ತು.
-ಟಿ.ಎ.ಶರವಣ, ಅಧ್ಯಕ್ಷ, ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌

Advertisement

Udayavani is now on Telegram. Click here to join our channel and stay updated with the latest news.

Next