Advertisement
ಶುಭ ಸಮಾರಂಭ, ಅಕ್ಷಯ ತೃತೀಯಾದ ಸಂಭ್ರಮದಲ್ಲಿರುವ ಹೆಂಗಳೆಯರು ಕೊಂಚ ನಿರಾಳ ವಾಗಿದ್ದಾರೆ. ಜಾಗ ತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳ ಮತ್ತು ರೂಪಾಯಿ ಸಹಿತ ವಿವಿಧ ಕರೆನ್ಸಿ ಮೌಲ್ಯ ಕುಸಿತವಾದ್ದರಿಂದ ಜನವರಿಯಲ್ಲಿ ಗ್ರಾಂ ಚಿನ್ನದ ಬೆಲೆ 3 ಸಾವಿರ ರೂ. ಗಡಿ ದಾಟಿತ್ತು. ಅನಂತರ ಇಳಿದಿರಲೇ ಇಲ್ಲ.
Related Articles
ಚಿನ್ನದ ಬೆಲೆ ಗ್ರಾಂಗೆ 3 ಸಾವಿರಕ್ಕೂ ಹೆಚ್ಚಿದ್ದುದರಿಂದ ಈ ವರ್ಷ ಮೇ 7ರಂದು ಅಕ್ಷಯ ತೃತೀಯಾ ಖರೀದಿ ಹೇಗೆ ಎಂಬ ಚಿಂತೆ ಅನೇಕರಲ್ಲಿತ್ತು. ಈಗ ಬೆಲೆ ಇಳಿಕೆ ಜನರಿಗೆ ಖುಷಿ ತಂದಿದೆ. ಜತೆಗೆ ಇನ್ನೆರಡು ತಿಂಗಳು ಮದುವೆ ಸೀಸನ್‌ವಾದ್ದರಿಂದ ಚಿನ್ನ ಕೊಳ್ಳುಗರಿಗೆ ಖುಷಿಯಾಗಿದೆ.
Advertisement
ಮೂರು ಸಾವಿರ ದಾಟಿದ್ದ ಬೆಲೆಮಾ.28ರ ವರೆಗೆ 22 ಕ್ಯಾರೆಟ್ ಚಿನ್ನ ಗ್ರಾಂ ಒಂದಕ್ಕೆ 3 ಸಾವಿರ ರೂ. ಇದ್ದ ಬೆಲೆ ಮಾ. 29ರಂದು 40 ರೂ.ಗಳಷ್ಟು ಕಡಿಮೆಯಾಗಿ 2,960 ರೂ. ಆಗಿತ್ತು. ಮಾ. 30 ರಂದು 2,985 ರೂ.ಗೇರಿತ್ತು. ಎಪ್ರಿಲ್‌ನಲ್ಲಿ ಇದೇ ರೀತಿ 5-10 ರೂ.ಗಳಷ್ಟು ಏರಿಳಿಕೆ ಆಗುತ್ತಲೇ ಇತ್ತು. ಎ.9ರಂದು ಏಕಾಏಕಿ 3,000 ರೂ.ಗೆ ಜಿಗಿದಿತ್ತು. ಮರುದಿನದಿಂದ ಬೆಲೆ ಕಡಿಮೆಯಾಗಲು ಆರಂಭವಾಗಿದ್ದು, ಎ.19ರಂದು 2,940 ರೂ., ಎ.20, 21ರಂದು 2,960 ರೂ. ಎ. 22 ರಂದು 2,970 ರೂ. ಇತ್ತು. ಡಿಸೆಂಬರ್‌ನಲ್ಲಿ ಗ್ರಾಂಗೆ ಸುಮಾರು 2,985 ರೂ. ವರೆಗೆ ಇದ್ದ 22 ಕ್ಯಾರೆಟ್ ಚಿನ್ನದ ಬೆಲೆ, ಜ.3ರಂದು 3,005 ರೂ. ತಲುಪಿತ್ತು. ಜ. 10ರ ವೇಳೆಗೆ 3,020 ರೂ. ಆಗಿತ್ತು. ಆನಂತರ ನಿರಂತರವಾಗಿ ಬೆಲೆ ಏರುತ್ತಲೇ ಹೋಗಿದ್ದು, ಸಂಕ್ರಾಂತಿ ಸಂದರ್ಭದಲ್ಲಿ 3,030 ರೂ. ಮುಟ್ಟಿತ್ತು. ಡಾಲರ್ ಮೌಲ್ಯ ಕುಸಿತವಾದ್ದ ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
– ಪ್ರಶಾಂತ್ ಶೇಟ್, ಕಾರ್ಯದರ್ಶಿ, ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘ