Advertisement
ಬಂಗಾರದ ಬೆಲೆ ಇಳಿಕೆಇದು ಬಂಗಾರ ಖರೀದಿಗೆ ಸುಸಮಯವೂ ಹೌದು. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಬುಧವಾರ 44,500 ರೂ. ಇತ್ತು. ಮಂಗಳವಾರಕ್ಕೆ ಹೋಲಿಸಿದರೆ 200 ರೂ. ಕಡಿಮೆ. 10 ಗ್ರಾಂ 24 ಕ್ಯಾರೆಟ್‌ಗೆ 48,560 ರೂ. ಗಳಾಗಿದ್ದು, 210 ರೂ. ಕಡಿಮೆ .
ಗೋಲ್ಡ್ ಕಾಯಿನ್, ಬುಲಿಯನ್, ಆಭರಣಗಳು, ಸವರಿನ್ ಗೋಲ್ಡ್ ಬಾಂಡ್, ಗೋಲ್ಡ್ ಮ್ಯೂಚುವಲ್ ಫಂಡ್ ಮತ್ತು ಗೋಲ್ಡ್ ಇಟಿಎಫ್ ಗಳನ್ನು ಭೌತಿಕ ರೂಪದ ಚಿನ್ನವೆಂದು ಕರೆಯಲಾಗುತ್ತದೆ. ಇವನ್ನು ಖರೀದಿಸಿ ಸುರಕ್ಷಿತವಾಗಿ ಇಡಬಹುದು. ಡಿಜಿಟಲ್ ಚಿನ್ನವನ್ನು ಆನ್ ಲೈನ್‌ನಲ್ಲೇ ಮಾರಾಟ ಮಾಡಲಾಗುತ್ತದೆ. ಇದು ಭೌತಿಕ ರೂಪದಲ್ಲಿ ಇರುವುದಿಲ್ಲ. ಮಾರಿದವರೇ ಗ್ರಾಹಕನ ಪರವಾಗಿ ಆತ ಖರೀದಿಸಿದ ಮೌಲ್ಯದಷ್ಟು ಬಂಗಾರವನ್ನು ವಾಲ್ಟ್ನಲ್ಲಿ ಇರಿಸುತ್ತಾರೆ. ಮಳಿಗೆಗಳಲ್ಲೂ ಆನ್‌ಲೈನ್ ಖರೀದಿ
ಕರಾವಳಿ ಸಹಿತ ಪ್ರಮುಖ ಆಭರಣ ಅಂಗಡಿಗಳು ಆನ್‌ಲೈನ್ ನಲ್ಲಿ ಚಿನ್ನ ಖರೀದಿ ಅವಕಾಶ ಮಾಡಿಕೊಟ್ಟಿವೆ. ಚಿನ್ನದ ಕಾಯಿನ್ ನಿಂದ ಹಿಡಿದು ಚಿನ್ನದ ಬಾಂಡ್ ಗಳ ವರೆಗೆ ಇಲ್ಲಿ ಖರೀದಿಸಬಹುದಾಗಿದೆ. ಕೆಲವು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳೂ ಡಿಜಿಟಲ್ ಗೋಲ್ಡ್ ಮಾರಾಟ ಮಾಡುತ್ತಿವೆ.
Related Articles
ಡಿಜಿಟಲ್ ಬಂಗಾರ ಮಾರುವ ಆ್ಯಪ್ ಅಥವಾ ವೆಬ್‌ಸೈಟ್ ಗೆ ಹೋಗಿ ಖರೀದಿಸಬೇಕು. ನಿಮಗೆಷ್ಟು ಬೇಕೋ ಅಷ್ಟು ಗ್ರಾಂ ಬಂಗಾರವನ್ನು ಆರಿಸಿಕೊಳ್ಳಬಹುದು. ಅಂದಿನ ಬಂಗಾರದ ದರ ಅನ್ವಯವಾಗುತ್ತದೆ. ಹಣ ಪಾವತಿಯಿಂದ, ಕೆವೈಸಿ ವರೆಗೆ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಸುರಕ್ಷಿತ ಲಾಕರ್‌ಗೆ ಡಿಜಿಟಲ್ ಬಂಗಾರ ಬರುತ್ತದೆ.
Advertisement
ಹಾಗೆಯೇ ಭೌತಿಕವಾಗಿ ಬಂಗಾರ ಬೇಕು ಎಂದಾದಲ್ಲಿ ನೀವು ಬೇಡಿಕೆ ಸಲ್ಲಿಸಬಹುದು, ಮನೆಬಾಗಿಲಿಗೇ ತಂದು ಕೊಡುತ್ತಾರೆ. ಆದರೆ ಡೆಲಿವರಿ ದರ ನೀಡಬೇಕಾಗುತ್ತದೆ.
ಉಪಯೋಗಗಳು– ಮನೆ ಬಾಗಿಲಿಗೇ ಬಂಗಾರ ತರಿಸಬಹುದು.
– ಕೇವಲ ಒಂದು ರೂ. ಪಾವತಿಸಿ ಖರೀದಿಸಬಹುದು.
– ಸಾಲ ಪಡೆಯುವಾಗ ಅಡಮಾನವಾಗಿ ಇಡಬಹುದು.
– ಡಿಜಿಟಲ್ ಗೋಲ್ಡ್ 24 ಕ್ಯಾರೆಟ್ ಗೋಲ್ಡ್ ನಷ್ಟೇ ಉತ್ತಮ.
– ನೀವು ಖರೀದಿಸಿದ್ದು ಸಂಪೂರ್ಣ ಸುರಕ್ಷಿತ, ಇದರ ಮೇಲೆ ವಿಮೆ ಇರುತ್ತದೆ.
– ಡಿಜಿಟಲ್ ಗೋಲ್ಡನ್ನು ಭೌತಿಕ ಬಂಗಾರವಾಗಿ ಪರಿವರ್ತಿಸಿಕೊಳ್ಳಬಹುದು.