Advertisement

ಗಂಧದಗುಡಿ ಚಲನಚಿತ್ರ ಸಂಕಲನ ಮಾಡಿದವರು ಅಕ್ಷಯ ಪೈ

07:31 PM Oct 30, 2022 | Team Udayavani |

ಹೊನ್ನಾವರ: ಪುನೀತ್‌ ರಾಜಕುಮಾರ್‌ ಅವರ ವಿದಾಯದ ಹಾಗೂ ವಿಶಿಷ್ಟ ಸಂದೇಶಗಳುಳ್ಳ ಚಿತ್ರ ಗಂಧದಗುಡಿಯನ್ನು ಹೊನ್ನಾವರದ ಅಕ್ಷಯ ಪೈ ಸಂಕಲನ ಮಾಡಿದ್ದಾರೆ.

Advertisement

ಪುನೀತ್‌ ಅವರು ಇರುವಾಗಲೇ ಮೊದಲ ಸಂಕಲನವನ್ನು ಅವರಿಗೆ ತೋರಿಸಿದ್ದೆ, ಮೆಚ್ಚುಗೆ ದೊರಕಿತ್ತು. ಅವರು ಇಹಲೋಕ ತ್ಯಜಿಸಿದ ನಂತರ ಹಲವು ಬದಲಾವಣೆಗಳೊಂದಿಗೆ ಒಂದು ವರ್ಷ ಎಡಿಟಿಂಗ್‌ ನಡೆಸಿ ಚಿತ್ರ ಬಿಡುಗಡೆಯಾಗಿದ್ದು, ಚಿತ್ರೀಕರಣದಿಂದ ಆರಂಭಿಸಿ ಎಡಿಟಿಂಗ್‌ ಕಾಲದಲ್ಲಿ ನಿರಂತರವಾಗಿ ಅಪ್ಪು ಅವರ ಮುಖವನ್ನು ನೋಡುತ್ತಿದ ಕಾರಣ ನಾನೇ ಎಡಿಟಿಂಗ್‌ ಮಾಡಿದರೂ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡುತ್ತಿದ್ದಂತೆ ಭಾವನೆಗಳು ಕಾಡಿದವು ಎಂದು ಅಕ್ಷಯ ಪೈ ಹೇಳಿದ್ದಾರೆ.

ಚಿತ್ರ ವೀಕ್ಷಿಸಿದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅಕ್ಷಯ ಪೈ ಅವರೊಂದಿಗೆ ಮಾತನಾಡಿ, ಜಗತ್ತು ಭಾರತವನ್ನು ಮತ್ತು ಕರ್ನಾಟಕವನ್ನು ತಿರುಗಿ ನೋಡುವಂತೆ ಚಿತ್ರವನ್ನು ಲೋಕಕ್ಕೆ ತೆರೆದಿಟ್ಟ ನಿಮ್ಮ ಕುರಿತು ನನಗೆ ಹೆಮ್ಮೆ ಎಂದು ಹೇಳಿದ್ದಾರೆ. ನನ್ನೂರು ಹೊನ್ನಾವರ, ನನ್ನ ಜಿಲ್ಲೆ ಉತ್ತರ ಕನ್ನಡದಲ್ಲಿ ಸಾಕಷ್ಟು ಚಿತ್ರೀಕರಣವಾದ ಕಾರಣ ನನಗೆ ಹೆಮ್ಮೆಯೂ ಹೌದು. ನಾನೇ ನೋಡಿರದ ನನ್ನ ಜಿಲ್ಲೆಯ ಚಿತ್ರಗಳು ಅಭೂತಪೂರ್ವವಾಗಿ ಬಂದಿದೆ. ಈ ಚಿತ್ರದ ಚಿತ್ರೀಕರಣ ಮಾಡುತ್ತಿರುವಾಗ ಕರ್ನಾಟಕದ ವೈಭವವನ್ನು ಜಗತ್ತಿಗೆ ತೋರಿಸಲು ಅಪ್ಪು ಸರ್‌ ಮತ್ತು ನಿರ್ದೇಶಕ ಅಮೋಘವರ್ಷ ಅಪೇಕ್ಷೆ ಪಟ್ಟಿದ್ದರು.

ಆದ್ದರಿಂದ ಈ ಚಿತ್ರದ ಸಂಕಲನ ಕೂಡ ಸವಾಲಾಗಿತ್ತು. ಚಿತ್ರದಲ್ಲಿ ಕಾಡು ಬೆಳೆಸುವ, ನಾಡು ಉಳಿಸುವ, ಪ್ಲಾಸ್ಟಿಕ್‌ ತ್ಯಜಿಸುವ ಹಲವು ಸಂದೇಶಗಳಿವೆ. ಚಿತ್ರದ ಎಡಿಟಿಂಗ್‌ ಬಹುಮುಖ್ಯ ಜವಾಬ್ದಾರಿ, ಅಪ್ಪು ಸರ್‌ ಅವರ ಕಾಳಜಿ, ಆಸಕ್ತಿ ಮತ್ತು ನಿರ್ದೆಶಕರ ಭಾವನೆಗಳು, ಕೋಟ್ಯಾಂತರ ಅಪ್ಪು ಅಭಿಮಾನಿಗಳ ಭಾವನೆಗಳು ಇವುಗಳನ್ನು ಲಕ್ಷದಲ್ಲಿಟ್ಟುಕೊಂಡು ಚಿತ್ರ ಸಂಕಲನಗೊಂಡಿದೆ. ಎಲ್ಲ ನೋಡಿ ಸಂತೋಷ ಪಡಿ ಎಂದು ಅಕ್ಷಯ ಪೈ ಹೇಳಿದ್ದಾರೆ. ಹೊನ್ನಾವರ ಪೇಟೆಯಲ್ಲಿ ಕಾಮಾಕ್ಷಿ ಸ್ಟೀಲ್‌ ಮಳಿಗೆ ನಡೆಸುತ್ತಿರುವ ಜಗದೀಶ ಪೈ ಮತ್ತು ವಿದ್ಯಾ ಪೈ ಅವರ ಪುತ್ರ ಅಕ್ಷಯ ಸಾಧನೆ ಸಂತೋಷ ತಂದಿದೆ. ಜಿಲ್ಲೆಗೆ ಹೆಮ್ಮೆ ತಂದ ಈ ತರುಣನಿಂದ ಇನ್ನಷ್ಟು ಚಿತ್ರಗಳು ಸಂಕಲನಗೊಳ್ಳಲಿ ಎಂದು ಹಾರೈಸೋಣ.

Advertisement

Udayavani is now on Telegram. Click here to join our channel and stay updated with the latest news.

Next