ಮುಂಬಯಿ: ಸ್ವಾತಂತ್ರ್ಯ ದಿನಾಚರಣೆಗೆ ಸಿನಿಮಾರಂಗದಲ್ಲಿ ಹತ್ತಾರು ಚಿತ್ರಗಳು ರಿಲೀಸ್ ಆಗಿವೆ. ಬಾಲಿವುಡ್‌ನಲ್ಲಿ ಮಲ್ಟಿಸ್ಟಾರ್ಸ್ ʼಖೇಲ್ ಖೇಲ್ ಮೇʼ (Khel Khel Mein) ಚಿತ್ರ ರಿಲೀಸ್ ಆಗಿದೆ.
ಸತತ ಸೋಲಿನಿಂದ ಕೆಂಗೆಟ್ಟಿರುವ ಅಕ್ಷಯ್ ಕುಮಾರ್ (Akshay Kumar) ʼಖೇಲ್ ಖೇಲ್ ಮೇʼ ಮೂಲಕ ಕಮಾಲ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಸಿನಿಮಾದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ.
ಸಿನಿಮಾ ನೋಡಿದ ಪ್ರೇಕ್ಷಕರು ʼಎಕ್ಸ್ʼನಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ಸಿನಿಮಾದ ಟ್ವಿಟರ್ ರಿವ್ಯೂ..
“ಹೌಸ್‌ಫುಲ್ 4 ರ ನಂತರ ಅಕ್ಷಯ್ ಕುಮಾರ್ ಮತ್ತೆ ಎಲ್ಲರನ್ನೂ ನಗಿಸಿದ್ದಾರೆ. ತಾಪ್ಸಿ ಮೋಡಿ ಮಾಡಿದ್ದಾರೆ. ಆಮಿ ವಿರ್ಕ್ ಸರಳತೆಯಿಂದಲೇ ಮನಗೆದ್ದಿದ್ದಾರೆ. ʼಖೇಲ್ ಖೇಲ್ ಮೇʼ ಹಾಸ್ಯದಿಂದ ತುಂಬಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Thangalaan Movie: ಆ್ಯಕ್ಟಿಂಗ್, ಮ್ಯೂಸಿಕ್ ಓಕೆ ಆದರೆ.. ಸಿನಿಮಾ ನೋಡಿದವರು ಏನಂತಾರೆ?
ʼಖೇಲ್ ಖೇಲ್ ಮೇʼ ಕಾಮಿಡಿ ಹಾಗೂ ಎಮೋಷನ್ ಮಿಶ್ರಣವುಳ್ಳ ಪರ್ಫೆಕ್ಟ್ ಸಿನಿಮಾ. ಮುದಸ್ಸರ್ ಅಜೀಜ್ ತುಂಬಾ ಸೊಗಸಾಗಿ ಕಥೆಯನ್ನು ಹೇಳಿದ್ದಾರೆ. ಹಾಸ್ಯ ಹಾಗೂ ಎಮೋಷನ್ ಎರಡನ್ನೂ ಸಮಾನವಾಗಿ ಹೇಳಲಾಗಿದೆ. ಹಡಗಿನ ಕ್ಯಾಪ್ಟನ್ ರೀತಿ ಅಕ್ಷಯ್ ಕುಮಾರ್ ಇಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
“ಸಿನಿಮಾದಲ್ಲಿನ ಹಾಸ್ಯ ಇಷ್ಟವಾಯಿತು. ಅಕ್ಷಯ್ ಫೈಯರ್ ರೀತಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್, ವಾಣಿ ಅವರ ಕೆಮಿಸ್ಟ್ರಿ,ತಾಪ್ಸಿ – ಆಮಿ ಅವರ ಕೆಮಿಸ್ಟ್ರಿ ಮೈಂಡ್ ಬ್ಲೂ ಆಗಿದೆ. ಕೊನೆಗೂ ಫರ್ದೀನ್ ಖಾನ್ ಅವರನ್ನು ನೋಡಿದೆ. ಅವರ ಅಭಿನಯ ಇಷ್ಟವಾಯಿತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಕಥೆ ಗ್ರಿಪ್ಪಿಂಗ್ ,ಎಂಗೆಜಿಂಗ್ ಆಗಿದ್ದು, ಮನರಂಜನೆಯನ್ನು ಚಿತ್ರ ನೀಡುತ್ತದೆ. ಇದು ಮದುವೆಯ ಕುರಿತು ಉತ್ತಮ ಸಂದೇಶವನ್ನು ಸಾರುವ ಸಿನಿಮಾ. ʼಗರಂ ಮಸಾಲಾʼ, ʼಹೇ ಬಾಬೇಬಿʼ, ʼಭಾಗಮ್ ಭಾಗ್ʼ ಚಿತ್ರದಲ್ಲಿನ ಅಕ್ಷಯ್ ಕುಮಾರ್ ಮತ್ತೆ ವಾಪಾಸ್ ಆಗಿದ್ದಾರೆ ಎಂದು ಮತ್ತೊಬ್ಬರು 5 ಕ್ಕೆ 5 ರೇಟಿಂಗ್ ನೀಡಿದ್ದಾರೆ.
ʼಖೇಲ್ ಖೇಲ್ ಮೇʼ ಹೌಸ್ ಫುಲ್ ಶೋವನ್ನು ನೋಡಿದೆ. ಸಿನಿಮಾದ ಕೊನೆಯವರೆಗೂ ಎಲ್ಲರೂ ನಗುತ್ತಿದ್ದರು ಇದೊಂದು ಅದ್ಭುತ ಅನುಭವ. ಹಳೆ ಕಾಲದ ಅಕ್ಷಯ್ ಕಂಬ್ಯಾಕ್ ಮಾಡಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ʼಖೇಲ್ ಖೇಲ್ ಮೇʼ ಚಿತ್ರವನ್ನು ಮುದಸ್ಸರ್ ಅಜೀಜ್ ನಿರ್ದೇಶಿಸಿದ್ದಾರೆ. ಟಿ-ಸೀರೀಸ್ ಫಿಲ್ಮ್ಸ್, ವಕಾವೂ ಫಿಲ್ಮ್ಸ್ ಮತ್ತು ಕೆಕೆಎಂ ಫಿಲ್ಮ್ ಚಿತ್ರಕ್ಕೆ ಬಂಡವಾಳ ಹಾಕಿದೆ.
ಅಕ್ಷಯ್ ಕುಮಾರ್, ತಾಪ್ಸಿ ಪನ್ನು, ಆಮಿ ವಿರ್ಕ್, ಫರ್ದೀನ್ ಖಾನ್ ಮತ್ತು ವಾಣಿ ಕಪೂರ್ ಮುಂತಾದವರು ನಟಿಸಿದ್ದಾರೆ.