Advertisement

Instagram Liveನಲ್ಲಿ ಅಕ್ಷಯ್ ಕುಮಾರ್ ಬಹಿರಂಗಪಡಿಸಿದರು ಒಂದು ರಹಸ್ಯ: ಏನದು ?

08:26 PM Sep 10, 2020 | Mithun PG |

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಇನ್ ಸ್ಟಾಗ್ರಾಂ ಲೈವ್ ನಲ್ಲಿ ಹುಮಾ ಖುರೇಶಿ ಮತ್ತು ಬೇರ್ ಗ್ರಿಲ್ಸ್ ಜೊತೆಗಿನ ಸಂವಾದದಲ್ಲಿ  ತಾನು ಪ್ರತಿನಿತ್ಯ ಗೋಮೂತ್ರ ಸೇವಿಸುವುದಾಗಿ ತಿಳಿಸಿದ್ದಾರೆ.

Advertisement

ಬೇರ್ ಗ್ರಿಲ್ಸ್ ಜೊತೆಗಿನ ಇನ್ ಟು ದ ವೈಲ್ಡ್ ಕಾರ್ಯಕ್ರಮದಲ್ಲಿ ಅಕ್ಷಯ್ ಅತ್ಯದ್ಭುತ ಸಾಹಸ ಪ್ರದರ್ಶಿಸಿದ್ದರು. ಮರ ಮತ್ತು ಹಗ್ಗದ ಏಣಿಯನ್ನು ಹತ್ತಿ ಹೊಳೆಯನ್ನು ದಾಟುವುದರ ಜೊತೆಗೆ  ಅಕ್ಷಯ್ ಕುಮಾರ್ ಅವರು elephant-poop ಚಹಾವನ್ನು ಸಹ ಸೇವಿಸಿದ್ದರು.

ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಹುಮಾ ಖುರೇಶಿ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಅಕ್ಷಯ್, ಆಯುರ್ವೇದದ ಕಾರಣದಿಂದ ಪ್ರತಿದಿನ ಗೋಮೂತ್ರ ಸೇವಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರಸ್ತಾಪಿಸಿದ್ದರಿಂದ ಅಭಿಮಾನಿಗಳಲ್ಲಿ ಕೂಡ ಆಶ್ಚರ್ಯ ವ್ಯಕ್ತವಾಗಿದೆ.

ವಿಶೇಷ ಚಹಾವನ್ನು ಸೇವಿಸುವಾಗ ನನಗೆ ಚಿಂತೆಯಾಗಲಿಲ್ಲ. ಯಾಕೆಂದರೇ ನಾನು ತುಂಬಾ ಉತ್ಸುಕನಾಗಿದ್ದೆ. ಆಯುರ್ವೇದ ಕಾರಣಗಳಿಗಾಗಿ, ನಾನು ಪ್ರತಿದಿನ ಗೋಮೂತ್ರವನ್ನು ಕುಡಿಯುತ್ತೇನೆ ಎಂದಿದ್ದಾರೆ.

View this post on Instagram

@beargrylls @iamhumaq @discoveryplusindia @discoverychannelin

Advertisement

A post shared by Akshay Kumar (@akshaykumar) on

ಇನ್ ಟು ದ ವೈಲ್ಡ್ ಕಾರ್ಯಕ್ರಮವು ಸೆಪ್ಟೆಂಬರ್ 11 ಮತ್ತು 14ರಂದು ಪ್ರಸಾರವಾಗಲಿದ್ದು, ಈ ಕಾರಣಕ್ಕಾಗಿ ಅಕ್ಷಯ್ ಕುಮಾರ್, ಹುಮಾ ಖುರೇಶಿ, ಬೇರ್ ಗ್ರಿಲ್ಸ್ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next