Advertisement

Bollywood: ʼಭೂತ್ ಬಂಗ್ಲʼಕ್ಕಾಗಿ 14 ವರ್ಷದ ಬಳಿಕ ಸೂಪರ್‌ ನಿರ್ದೇಶಕನ ಜತೆ ಅಕ್ಷಯ್ ಸಿನಿಮಾ

12:37 PM Sep 09, 2024 | Team Udayavani |

ಮುಂಬಯಿ: ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್(Akshay‌ Kumar) ಅವರಿಗಿಂದು 57ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮ ಡಬಲ್‌ ಆಗುವಂತೆ ಅಕ್ಷಯ್‌ ತನ್ನ ಮುಂದಿನ ಹೊಸ ಸಿನಿಮಾದ ಕುರಿತು ಅಪ್ಡೇಟ್‌ ನೀಡಿದ್ದು ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

Advertisement

ಒಂದು ಕಾಲದಲ್ಲಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್‌ ಇತ್ತೀಚೆಗಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದಾರೆ. ಮೊನ್ನೆ ಮೊನ್ನೆ ಬಂದ ಸರ್ಫಿರಾ (Sarfira), ಖೇಲ್ ಖೇಲ್ ಮೇ (Khel Khel Mein) ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.

ಸತತ ಸೋಲು ಕಾಣುತ್ತಿದ್ದರೂ ಅಕ್ಷಯ್‌ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಅವರ ಹುಟ್ಟುಹಬ್ಬದಂದು(ಸೆ.9ರಂದು) ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದು, ಟೈಟಲ್‌ ಪೋಸ್ಟರನ್ನು ರಿಲೀಸ್‌ ಮಾಡಲಾಗಿದೆ.

content-img

ವಿಶೇಷವೆಂದರೆ ಅಕ್ಷಯ್‌ ಕುಮಾರ್‌ ಅವರೊಂದಿಗೆ ಈ ಹಿಂದೆ ʼಹೇರಾ ಫೇರಿʼ, ʼಗರಂ ಮಸಾಲಾ, ʼಭಾಗಂ ಭಾಗ್ʼ, ʼಭೂಲ್ ಭುಲೈಯಾʼ, ʼದೇ ದಾನ ದಾನ್ʼ ನಂತಹ ಸೂಪರ್‌ ಹಿಟ್‌ ಕಾಮಿಡಿ ಸಿನಿಮಾಗಳನ್ನು ನೀಡಿದ್ದ ಪ್ರಿಯದರ್ಶನ್ (Priyadarshan) ಅವರೊಂದಿಗೆ ಅಕ್ಷಯ್‌ 14 ವರ್ಷಗಳ ಬಳಿಕ ಕೈಜೋಡಿಸಲಿದ್ದು, ಚಿತ್ರಕ್ಕೆ ʼಭೂತ್ ಬಂಗ್ಲʼ (Bhooth Bangla) ಎಂದು ಟೈಟಲ್‌ ಇಡಲಾಗಿದೆ.

Advertisement

ದೊಡ್ಡ ಬಂಗಲೆಯೊಂದರ ಮುಂದೆ ನಿಂತಿರುವ ಅಕ್ಷಯ್‌ ಅವರ ಬೆನ್ನ ಮೇಲೆ ಕಪ್ಪು ಬೆಕ್ಕು ನಿಂತಿದೆ. ಸ್ಟೀಲ್‌ ಕಪ್‌ ವೊಂದರಲ್ಲಿ ಹಾಲನ್ನು ಕುಡಿಯುತ್ತಿರುವ ಲುಕ್‌ ನಲ್ಲಿ ಅಕ್ಷಯ್‌ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಇದೊಂದು ಹಾರಾರ್ ಕಾಮಿಡಿ ಅಕ್ಷಯ್ ಮೂವರು ನಟಿಯರೊಂದಿಗೆ ಜಾದೂಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಆಧರಿತ ಸಿನಿಮಾ 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.