Advertisement
ಅಕ್ಷಯ್ ವರಮಾನವೆಷ್ಟು?ಪ್ರಸಕ್ತ ವರ್ಷದಲ್ಲಿ ಅಕ್ಷಯ್ 362 ಕೋಟಿ ರೂ.ಗಳ ಆದಾಯ ಗಳಿಸಿದ್ದಾರೆ. ಅದರಲ್ಲಿ ಹೆಚ್ಚಿನ ಪಾಲು ಗೃಹೋಪಯೋಗಿ ವಸ್ತುಗಳ ಜಾಹೀರಾತುಗಳ ಮೂಲಕ ಬಂದಿದೆ. ಇದರಲ್ಲಿ ಅವರು ಇದೇ ಮೊದಲ ಬಾರಿಗೆ ನಟಿಸುತ್ತಿರುವ ವೆಬ್ ಸರಣಿಯಾದ “ಎಂಡ್’ಗಾಗಿ ಪಡೆದಿರುವ 74 ಕೋಟಿ ರೂ. ಆದಾಯವೂ ಸೇರಿದೆ. ಈ ಆದಾಯವು ನಿವ್ವಳ ಆದಾಯವಾಗಿದ್ದು, ಅಕ್ಷಯ್ ಅವರು ಸರಕಾರಕ್ಕೆ ಕಟ್ಟಬೇಕಿರುವ ತೆರಿಗೆ, ತನ್ನ ಸಹಾಯಕರಿಗೆ ನೀಡುವ ವೇತನ, ಕಮೀಷನ್ ಖರ್ಚನ್ನು ಕಡಿತಗೊಳಿಸಿಲ್ಲ ಎಂದು ಫೋರ್ಬ್ಸ್ ಸ್ಪಷ್ಟನೆ ನೀಡಿದೆ.