Advertisement

Bollywood: ‘ಪಠಾಣ್‌ʼ ನಿರ್ದೇಶಕ ಸಿದ್ದಾರ್ಥ್‌ ಜತೆ‌ ಕೈಜೋಡಿಸಲಿದ್ದಾರೆ ʼಕಿಲಾಡಿʼ ಅಕ್ಷಯ್‌

05:28 PM Aug 21, 2024 | Team Udayavani |

 ಮುಂಬಯಿ: ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್(Akshay Kumar)‌ ಅವರ ಸಿನಿಮಾಗಳು ಸತತ ಸೋಲು ಕಾಣುತ್ತಿದೆ. ಇತ್ತೀಚೆಗೆ ಬಂದ ʼಖೇಲ್‌ ಖೇಲ್‌ ಮೇʼ (Khel Khel Mein) ಕೂಡ ಕೆಲಕ್ಷನ್‌ ವಿಚಾರದಲ್ಲಿ ಹಿಂದೆ ಬಿದ್ದಿದೆ.

Advertisement

ಅಕ್ಷಯ್‌ ಕುಮಾರ್‌ ಒಂದು ದೊಡ್ಡ ಗೆಲುವು ಕಾಣದೆ ವರ್ಷಗಳೇ ಕಳೆದಿದೆ. ಅವರ ಯಾವುದೇ ಸಿನಿಮಾಗಳು ಹಿಟ್‌ ಲಿಸ್ಟ್‌ ಗೆ ಸೇರುತ್ತಿಲ್ಲ. ಬಾಲಿವುಡ್‌ ನ ಖ್ಯಾತ ನಿರ್ದೇಶಕರೊಬ್ಬರು ಅಕ್ಷಯ್‌ ಕುಮಾರ್‌ ಅವರ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದು, ಇದು ಅಕ್ಷಯ್‌ ಅವರಿಗೆ ದೊಡ್ಡ ಬ್ರೇಕ್‌ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಾಲಿವುಡ್‌ ನಲ್ಲಿ ʼಬ್ಯಾಂಗ್ ಬ್ಯಾಂಗ್ʼ, ʼವಾರ್‌ʼ, ʼಪಠಾಣ್ʼ ಮತ್ತು ʼಫೈಟರ್‌ʼ ನಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸಿದ್ದಾರ್ಥ್‌ ಆನಂದ್‌ (Siddharth Anand) ತಮ್ಮ ಪ್ರೊಡಕ್ಷನ್‌ ಹೌಸ್‌ ʼಮಾರ್ಫ್ಲಿಕ್ಸ್ʼ ನಡಿಯಲ್ಲಿ 10 ಸಿನಿಮಾಗಳನ್ನು ನಿರ್ಮಾಣ ಮಾಡಲು ಸಿದ್ದರಾಗಿದ್ದು, ಇದರಲ್ಲಿ ಅಕ್ಷಯ್‌ ಕುಮಾರ್‌ ಅವರ ಒಂದು ಸಿನಿಮಾನೂ ಸೇರಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

content-img

ʼಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈʼ, ʼಡರ್ಟಿ ಪಿಕ್ಚರ್‌.. ನಂತಹ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಮಿಲನ್ ಲುಥ್ರಿಯಾ (Milan Luthria) ಅಕ್ಷಯ್‌ ಕುಮಾರ್‌ ಅವರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಇದನ್ನು ಸಿದ್ದಾರ್ಥ್‌ ಆನಂದ್‌ ಅವರ ಪ್ರೊಡಕ್ಷನ್‌ ಹೌಸ್‌ ನಿರ್ಮಾಣ ಮಾಡಲಿದೆ ಎಂದು ವರದಿ ತಿಳಿಸಿದೆ.

Advertisement

ಇದೊಂದು ಆ್ಯಕ್ಷನ್ ಮೂವಿ ಆಗಲಿದ್ದು ಅಕ್ಷಯ್‌ ಕುಮಾರ್‌ ಹಿಂದೆಂದೂ ಕಾಣದ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಸಿದ್ದಾರ್ಥ್‌ ಆನಂದ್‌ ಅವರ ಮಾರ್ಫ್ಲಿಕ್ಸ್, ಹಲವು ಬಾಲಿವುಡ್‌ ಸಿನಿಮಾಗಳಿಗೆ ಬಂಡವಾಳ ಹಾಕಲಿದ್ದು, ಸುಜೋಯ್ ಘೋಷ್ ನಿರ್ದೇಶನದ, ಶಾರುಖ್‌, ಸುಹಾನಾ, ಅಭಿಷೇಕ್‌ ಬಚ್ಚನ್‌ ಅಚರ ʼಕಿಂಗ್ʼ(KING Movie),  ಸೈಫ್ ಅಲಿ ಖಾನ್ ಮತ್ತು ಜೈದೀಪ್ ಅಹ್ಲಾವತ್ ಅವರೊಂದಿಗೆ ರಾಬಿ ಗ್ರೆವಾಲ್ ನಿರ್ದೇಶನ ಮಾಡುತ್ತಿರುವ ʼಜ್ಯುವೆಲ್ ಥೀಫ್ (Jewel Thief),ʼಹೃತಿಕ್‌ ರೋಷನ್‌ ಅವರ ʼಕ್ರಿಶ್‌ -4ʼ (Krrish 4) ಸೇರಿದಂತೆ ಹಲವು ಸಿನಿಮಾಗಳ ಬಂಡವಾಳ ಹಾಕಲಿದೆ.

ಇತ್ತ ಅಕ್ಷಯ್‌ ಕುಮಾರ್‌ ʼಜಾಲಿ ಎಲ್‌ ಎಲ್‌ ಬಿ-3(Jolly LLB 3), ʼವೆಲ್‌ ಕಂ ಟು ದಿ ಜಂಗಲ್‌ʼ (Welcome To The Jungle), ʼಹೌಸ್‌ ಫುಲ್‌ -5ʼ (Housefull 5 ) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.