Advertisement

Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್‌ ಜಾಲತಾಣಗಳಲ್ಲಿ ವೈರಲ್‌!

09:38 PM Jul 06, 2024 | Team Udayavani |

ಲಂಡನ್‌: ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ರಾಜೀನಾಮೆ ಬೆನ್ನಲ್ಲೇ ಇದೀಗ ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿ ಸುದ್ದಿಯಲ್ಲಿದ್ದಾರೆ.

Advertisement

ರಿಷಿ ಅಂತಿಮ ಭಾಷಣದ ವೇಳೆ ಅಕ್ಷತಾ ಧರಿಸಿದ್ದ ಚೆವ್ರಾನ್‌ ಗೌನ್‌ ಇದೀಗ ಜಾಲತಾಣದಲ್ಲಿ ಚರ್ಚೆಗೀಡಾಗಿದೆ. ಅದರ ಬೆಲೆ 43 ಸಾವಿರ ರೂ.ಗಳು ಎಂದು ಹೇಳಲಾಗಿದೆ.

ನೀಲಿ, ಬಿಳಿ ಹಾಗೂ ಕೆಂಪು ಬಣ್ಣದ ಚೆವ್ರಾನ್‌ ಗೌನ್‌ ಅನ್ನು ಅಕ್ಷತಾ ಧರಿಸಿದ್ದರು. ಈ ಫೋಟೋ ವೈರಲ್‌ ಆಗಿದೆ. ಆಕೆ ಸಂದರ್ಭಕ್ಕೆ ತಕ್ಕನಾಗಿ ವಸ್ತ್ರ ಧರಿಸುವ ಅದ್ಭುತ ಕಲೆ ಹೊಂದಿದ್ದಾರೆ. ಇನ್ನು ಕೆಲವರು ಬ್ರಿಟನ್‌ ಧ್ವಜದಲ್ಲೂ ಇದೇ ಬಣ್ಣಗಳಿರುವ ಕಾರಣಕ್ಕೇ ಆ ರೀತಿಯ ವಸ್ತ್ರ ವಿನ್ಯಾಸ ಮಾಡಿಸಿಕೊಂಡಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next