Advertisement

ಅಕ್ಷರ ದಾಸೋಹ ಸಿಬ್ಬಂದಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

01:09 PM Aug 12, 2020 | Suhan S |

ಬಾಗಲಕೋಟೆ: ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಅಡುಗೆ ಮಾಡುವ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಮಂಗಳವಾರದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

Advertisement

ಧರಣಿ ವೇಳೆ ಅಡುಗೆ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ರೇಖಾ ವಡಗೇರಿ ಮಾತನಾಡಿ, ಏಪ್ರಿಲ್‌ ತಿಂಗಳಿನಿಂದ ಶಾಲೆ ಆರಂಭವಾಗುವವರೆಗೆ ಅಡುಗೆ ಸಿಬ್ಬಂದಿಗೆ ವೇತನ ಪಾವತಿ ನೀಡಬೇಕು. ತಮ್ಮ ಹುದ್ದೆಗಳನ್ನು ಕಾಯಂಗೊಳಿಸಬೇಕು. ಶಾಸನಬದ್ಧ ಸೌಲಭ್ಯಗಳನ್ನು ಜಾರಿಗೊಳಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. 6 ತಿಂಗಳ ವರೆಗೆ ಪಡಿತರವನ್ನು ಉಚಿತವಾಗಿ ಒದಗಿಸಬೇಕು. ಬಿಸಿಯೂಟ ನೌಕರರಿಗೆ ಲಾಕ್‌ಡೌನ್‌ ವೇಳೆ 7500 ರೂ ನಂತೆ ಮುಂದಿನ 6 ತಿಂಗಳವರೆಗೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ತಯಾರಿಕೆ ಸಿಬ್ಬಂದಿಗೆ ಎಲ್‌ಐಸಿ ಪಿಂಚಣಿ ನಿಗದಿ ಮಾಡಬೇಕು. ಕೋವಿಡ್‌ -19ನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಹಾಗೂ ಕುಟುಂಬ ಸದಸ್ಯರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಬೇಕು. ಕೋವಿಡ್‌ ವೇಳೆ ಕ್ವಾರಂಟೈನ್‌ನಲ್ಲಿದ್ದವರಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರಿಗೆ ತಕ್ಚಣವೇ ವೇತನ ಪಾವತಿಯಾಗಬೇಕು ಆಗ್ರಹಿಸಿದರು.

ಸಂಘಟನೆಯ ಸಹ ಕಾರ್ಯದರ್ಶಿ ಅನುಸುಯಾ, ರಂಗಮ್ಮ, ಗೀತಾ, ಶೈಲಜಾ, ಪ್ರೇಮಾ, ಶಾಂತಾ, ಶಕುಂತಲಾ, ಸುವರ್ಣ ಧರಣಿಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next