Advertisement

ಅಕ್ಷರ ದಾಸೋಹ ನೌಕರ ಸಂಘ ಪ್ರತಿಭಟನೆ

05:42 PM May 05, 2022 | Shwetha M |

ಇಳಕಲ್ಲ: ಅಕ್ಷರ ದಾಸೋಹ ನೌಕರ ಸಂಘ ಹಾಗೂ ತಾಲೂಕು ಸಮಿತಿ ಸಹಯೋಗದಲ್ಲಿ 60 ವರ್ಷ ವಯೋಮಾನ ನೆಪವೊಡ್ಡಿ ಸುಮಾರು 11ಸಾವಿರದಿಂದ 12ಸಾವಿರ ನೌಕರರ ಕೆಲಸವನ್ನು ನಿವೃತ್ತಿ ಸೌಲಭ್ಯವಿಲ್ಲದೆ 19ವರ್ಷ ಸೇವೆ ಸಲ್ಲಿಸಿದವರನ್ನು ಸರಕಾರ ತೆಗೆದು ಹಾಕಲು ಮುಂದಾಗಿದೆ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುವುದಲ್ಲದೆ ಸರಕಾರ ಕೂಡಲೇ ಈ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು. ನಿವೃತ್ತಿ ಹೆಸರಲ್ಲಿ ಬಡವರ, ವಿಧವೆಯರ, ಅಲ್ಪಸಂಖ್ಯಾತರ, ದಲಿತರ, ಕೂಲಿಕಾರ ಮಹಿಳೆಯರಿಗೆ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ನಗರದ ಗುಬ್ಬಿಪೇಟದ ಶ್ರೀ ಶಂಕರಿರಾಮಲಿಂಗ ದೇವಸ್ಥಾನದಿಂದ ಎಸ್‌.ಆರ್‌. ಕಂಠಿ ವೃತ್ತ ಮಾರ್ಗವಾಗಿ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಶಾಸಕ ದೊಡ್ಡನಗೌಡ ಜಿ. ಪಾಟೀಲ ಅವರ ಪಕ್ಷದ ಕಾರ್ಯಾಲಯಕ್ಕೆ ತಲುಪಿ ವಿವಿಧ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರದಲ್ಲಿ ಉಲ್ಲೇಖೀಸಿ ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಕಾರ್ಯದರ್ಶಿ ರವಿ ಅವರಿಗೆ ತಾಲೂಕು ಅಧ್ಯಕ್ಷೆ ಸಿದ್ದಮ್ಮ ಕಲಗೋಡಿ ಮನವಿ ಸಲ್ಲಿಸಿದರು.

ಹುನಗುಂದ ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷೆ ಮಹಾದೇವಿ ಚಲವಾದಿ, ಪ್ರಧಾನ ಕಾರ್ಯದರ್ಶಿ ಶಾರದಾ ಗೋನಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next