Advertisement

ಎ.ಬಿ.ಖರಾಬ್ ಭೂಮಿ ಪರಿವರ್ತಿಸಿ ಬಗರಹುಕುಂ ಅಡಿಯಲ್ಲಿ ಪಟ್ಟಾ ದಾಖಲಾತಿ ವಿತರಣೆ

07:19 PM Jan 24, 2022 | Team Udayavani |

ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗ ಸೇರಿ ಇತರೆ ಕಂದಾಯ ಹೋಬಳಿಗಳಲ್ಲಿ ಎ ಮತ್ತು ಬಿ ಖರಾಬ್ ಭೂಮಿ ಹೆಚ್ಚಿದ್ದು ನೂರಾರು ರೈತರು ಇದರಲ್ಲಿ ಉಳುಮೆ ಮಾಡುತ್ತಿದ್ದಾರೆ. ಈಗಿನ ನಿಯಮಗಳ ಪ್ರಕಾರ ಇವರಿಗೆ ಪಟ್ಟಾ ನೀಡಲು ಬರುವುದಿಲ್ಲ. ಸರಕಾರದ ಮಟ್ಟದಲ್ಲಿ ನಿಯಮಗಳನ್ನು ಸರಳೀಕರಣಗೊಳಿಸಿ ಪಟ್ಟಾ ದಾಖಲೆ ನೀಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ 20 ವರ್ಷಗಳಿಂದ ಅಕ್ರಮ ಸಕ್ರಮ ಸಮಿತಿ ಸಭೆ ಜರುಗಿಲ್ಲ ಇದರಿಂದ ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಫಾರಂ 91, 92,93 ಸಿ ಅಡಿಯಲ್ಲಿ ಮತ್ತು ಸರಕಾರಿ ಭೂಮಿ ಸಾಗುವಳಿ ಮಾಡುವವರು ಪಟ್ಟಾ ದಾಖಲೆಗಾಗಿ 1390 ಫಾರಂ 57 ಅರ್ಜಿ ಹಾಕಿದ್ದು ಇದರಲ್ಲಿ ನಿಯಮಬದ್ಧವಾಗಿರುವ 278 ಜನರಿಗೆ  ಪಟ್ಟಾ ದಾಖಲೆ ನೀಡಲು ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ಎ.ಬಿ.ಖರಾಬ್ ಭೂಮಿಯನ್ನು ಅಧಿಕಾರಿಗಳು ಹೆಚ್ಚು ಮಾಡಿದ್ದು ಕಂದಾಯ ಸಚಿವರ ಜತೆ ಮಾತನಾಡಿ ಆರ್‌ಟಿಸಿಯಿಂದ ಮೊದಲು ಎ.ಬಿ ಖರಾಬ್ ತೆಗೆದು ಹಾಕಲಾಗುತ್ತದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಲ್ಲಿರುವ ಭೂಮಿಯನ್ನು ಉಳುಮೆ ಮಾಡುವವರು ಅರ್ಜಿ  ಹಾಕಿದ್ದು ಅರಣ್ಯ ಇಲಾಖೆಯ ನಿರಾಪೇಕ್ಷಣಾ ಪತ್ರ ತರಿಸಿಕೊಂಡು ಪಟ್ಟಾ ವಿತರಣೆ ಮಾಡಲಾಗುತ್ತದೆ. ಇರಕಲ್‌ಗಡಾ ಹೋಬಳಿಯಲ್ಲಿ ಅಧಿಕಾರಿಗಳು ಅಪೂರ್ಣ ಮಾಹಿತಿ ತಂದಿರುವುದರಿಂದ  ಫೆ.20 ರಂದು ಮತ್ತೊಮ್ಮೆ  ಪೂರ್ಣ ಪ್ರಮಾಣದ ಸಭೆ ನಡೆಸಿ  ಶೀಘ್ರ ಪಟ್ಟಾ ವಿತರಣೆ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಯು.ನಾಗರಾಜ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸಿದ್ಧಲಿಂಗಯ್ಯ ಗಡ್ಡಿಮಠ,ರಾಧಾ ಉಮೇಶ, ಕರುಣಾಕರ್, ಕಂದಾಯ ನಿರೀಕ್ಷಕ ಮಂಜುನಾಥಸ್ವಾಮಿ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next