Advertisement

ಅಕ್ಕಿಂ ತಿಂದಂ ಕೆಟ್ಟಂ, ನವಣೆ ಉಂಡಂ ಗಟ್ಟಂ!

03:35 PM Sep 23, 2018 | Team Udayavani |

ಧಾರವಾಡ: “ಸಿರಿಧಾನ್ಯ ಬಳಸಿ- ಆರೋಗ್ಯ ಉಳಿಸಿ’ ಎನ್ನುವ ಧೇಯ ವಾಕ್ಯದೊಂದಿಗೆ ಧಾರವಾಡ ಕೃಷಿ
ಮೇಳ-2018ಕ್ಕೆ ಚಾಲನೆ ಸಿಕ್ಕಿದೆ. ಆದರೆ ಸಿರಿಧಾನ್ಯಗಳಿಂದ ಆರೋಗ್ಯ ವೃದ್ಧಿ ಸಾಧ್ಯ ಎನ್ನುವುದನ್ನು ನಮ್ಮ ದೇಶಜ್ಞಾನ
ಪರಂಪರೆಯಲ್ಲಿ ರೈತರು ನೂರಾರು ವರ್ಷಗಳ ಹಿಂದೆಯೇ ಕಲಿತುಕೊಂಡಿದ್ದಾರೆ.

Advertisement

ಸಿರಿಧಾನ್ಯಗಳನ್ನು ರಾಸಾಯನಿಕ ಗಳನ್ನು ಬಳಸದೆ ನೈಸರ್ಗಿಕ ಕೃಷಿಯ ಮೂಲಕ ಬೆಳೆದು 10 ವರ್ಷಗಳಿಂದ
ಇದರ ಮಹತ್ವವನ್ನು ಪ್ರಚಾರ ಮಾಡುತ್ತಿದ್ದಾರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಲ್ಲೇಶಪ್ಪ ಕಲ್ಯಾಣಶೆಟ್ಟಿ.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ನೈಸರ್ಗಿಕ ಕೃಷಿಯಲ್ಲಿ
ತೊಡಗಿಕೊಂಡಿರುವ ಮಲ್ಲೇಶಪ್ಪ ಅವರು, ಅಕ್ಕಿಯಲ್ಲಿನ ಕೆಟ್ಟ ಅಂಶಗಳು ಮತ್ತು ನವಣೆಯಲ್ಲಿ ಉತ್ತಮ ಅಂಶಗಳ
ಕುರಿತು ಕೃಷಿಮೇಳದಲ್ಲಿ ಭಾಗಿಯಾಗುವ ಎಲ್ಲ ರೈತರಿಗೂ ಮಾಹಿತಿ ನೀಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸಕ್ಕರೆ
ಕಾಯಿಲೆಯಿಂದ ಬಳಲುವವರಿಗೆ ಮತ್ತು ಅಪೌಷ್ಟಿಕತೆ ಎದುರಿಸುತ್ತಿರುವವರಿಗೆ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ
ಆಹಾರ ಎಷ್ಟು ಮುಖ್ಯ ಎಂಬುದನ್ನು ಉದಾಹರಣೆಗಳ ಸಮೇತ ಸಲಹೆ ನೀಡುತ್ತಿದ್ದಾರೆ.

27 ತಳಿ ದೇಶಿ ಬೀಜ ರಕ್ಷಣೆ: ಮಲ್ಲೇಶಪ್ಪ ಅವರು ದೇಶಿಯವಾಗಿ ಬೆಳೆಯುವ ನವಣೆ, ಜೋಳ, ಬರಗು ಸೇರಿದಂತೆ 12 ತಳಿಯ ಸಿರಿಧಾನ್ಯಗಳನ್ನು ಮತ್ತು 15 ಪ್ರಕಾರದ ವಿವಿಧ ತರಕಾರಿ ಬೀಜಗಳನ್ನು ಸಂರಕ್ಷಣೆ ಮಾಡಿಟ್ಟುಕೊಂಡು ಅದನ್ನು ರೈತರು ಹೇಗೆ ಬಳಸಿಕೊಳ್ಳಬೇಕು ಎಂಬ ಸಲಹೆಯನ್ನು ಕೃಷಿ ಮೆಳದಲ್ಲಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next