Advertisement

ಇಂದಿನಿಂದ ಅಕ್ಕಿಆಲೂರು ಉತ್ಸವ

01:28 PM Feb 12, 2020 | Suhan S |

ಅಕ್ಕಿಆಲೂರು: ಲಿಂ| ಹಾನಗಲ್ಲ ಕುಮಾರ ಮಹಾ ಶಿವಯೋಗಿಗಳ 90ನೇ ಹಾಗೂ ಲಿಂ| ಚನ್ನವೀರ ಮಹಾಶಿವಯೋಗಿಗಳ 11ನೇ ಪುಣ್ಯಸ್ಮರಣೋತ್ಸವ ಮತ್ತು ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಇದೇ ಫೆ.12 ರಿಂದ ಫೆ.15ರ ವರೆಗೆ ಅಕ್ಕಿಆಲೂರ ಉತ್ಸವ-2020 ನಡೆಯಲಿದೆ.

Advertisement

ಫೆ. 12ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಷಟಸ್ಥಲ ಧ್ವಜಾ ರೋಹಣ ನೆರವೇರಿಸುವುದರ ಮೂಲಕ ಅಕ್ಕಿಆಲೂರ ಉತ್ಸವ -2020ಕ್ಕೆ ಚಾಲನೆ ನೀಡುವರು. ನಂತರ ಮಹಿಳೆಯರಿಂದ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯ ಕ್ರಮ ನಡೆಯಲಿದೆ. ಸಂಜೆ 6ಕ್ಕೆ ಶ್ರೀಮಠದ ಆವರಣದಲ್ಲಿ ನಡೆಯುವ ಸಮಾಜಕ್ಕೆ ಮಠಗಳ ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯ ವನ್ನು ಬಾಳೂರಿನ ಅಡವಿಸ್ವಾಮಿಮಠದ ಕುಮಾರ ಶ್ರೀಗಳು ವಹಿಸಲಿದ್ದು, ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸುವರು. ನವಲ ಗುಂದ ಗವಿಮಠದ ಬಸವಲಿಂಗ ಶ್ರೀಗಳು ನೇತೃತ್ವ ವಹಿಸುವರು. ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ

ಶ್ರೀಗಳು ಅನುಭ ವಾಮೃತ ನುಡಿಗಳನ್ನಾಡುವರು. ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸುವರು. ನಿವೃತ್ತ ಅಭಿಯಂತರ ಸಿ.ಆರ್‌. ಬಳ್ಳಾರಿ, ಶಲವಡಿಯ ಷಣ್ಮುಖಯ್ಯ ಹಿರೇಮಠ ಪಾಲ್ಗೊಳ್ಳುವರು. ಪ್ರಸ್ತುತ ಕೆಎಎಸ್‌ ಉತ್ತೀರ್ಣರಾಗಿರುವ ಭುವನೇಶ್ವರಿ ಪಾಟೀಲ ಮತ್ತು ಶಿಕಾರಿಪುರದ ಬಿ.ಎಸ್‌. ಸತೀಶ ಶ್ರೀರಕ್ಷೆ ಸ್ವೀಕರಿಸುವರು. ಫೆ. 13 ರಂದು ಬೆಳಗ್ಗೆ 6ಕ್ಕೆ ವಿರಕ್ತಮಠದಿಂದ ಹಾನಗಲ್ಲಿನ ಕುಮಾರೇಶ್ವರ ಮಠಕ್ಕೆ ನಮ್ಮ ನಡಿಗೆ ಗುರುವಿನಡೆಗೆ ಪಾದಯಾತ್ರೆ ನಡೆಯಲಿದೆ. ಸಂಜೆ 6ಕ್ಕೆ ವಿರಕ್ತಮಠದ ಆವರಣದಲ್ಲಿ ನಡೆಯಲಿರುವ ಧರ್ಮಚಿಂತನ ಗೋಷ್ಠಿಯ ಸಾನ್ನಿಧ್ಯವನ್ನು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಅಧ್ಯಕ್ಷತೆ ವಹಿಸವರು.

ಮೂಲೆಗದ್ದೆಯ ಚನ್ನಬಸವ ಶ್ರೀಗಳು, ಮುತ್ತಿನಕಂತಿಮಠ ಗುರುಪೀಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಹೇರೂರಿನ ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸುವರು. ಜನಹಿತ ರಕ್ಷಣಾ ವೇದಿಕೆಯ ಬಿ.ಕೆ.ಮೋಹನಕುಮಾರ ಪಾಲ್ಗೊಳ್ಳುವರು. ಫೆ. 14 ರಂದು ಬೆಳಗ್ಗೆ 9ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಪುಷ್ಪ ರಥೋತ್ಸವ ಮತ್ತು ಗುಗ್ಗಳ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ ನೆರವೇರಲಿದೆ. ಸಂಜೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ನಡೆಯಲಿದೆ.

ಫೆ.15 ಬೆಳಗ್ಗೆ 6 ಗಂಟೆಗೆ ಮುತ್ತಿನ ಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ದೀಕ್ಷಾ ಅಯ್ನಾಚಾರ ನೆರವೇರಲಿದೆ.ಮಧ್ಯಾಹ್ನ 1ಕ್ಕೆ ಮಹಾಪ್ರಸಾದ, ಸಂಜೆ 5 ಗಂಟೆಗೆ ಲಿಂ. ಹಾನಗಲ್ಲ ಕುಮಾರೇಶ್ವರರು ಮತ್ತು ಲಿಂ| ಚನ್ನವೀರೇಶ್ವರ ಮಹಾಶಿವಯೋಗಿಗಳ ಭಾವಚಿತ್ರದ ಭವ್ಯ ಮೆರವಣಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ನೆರವೇರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next