Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ಪ್ರೊ. ಬಿ.ಕೆ ತುಳಸಿಮಾಲಾ ನೇಮಕ

06:49 PM Jan 22, 2021 | Team Udayavani |

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಪ್ರೊ.ಬಿ.ಕೆ. ತುಳಸಿಮಾಲಾ ನೇಮಕಗೊಂಡಿದ್ದಾರೆ.

Advertisement

ಶುಕ್ರವಾರ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರೊ.ತುಳಸಿಮಾಲಾ ಅವರನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

2020 ಜೂನ್ 19 ರಂದು ಪ್ರೊ. ಸಬಿಹಾ ಭೂಮಿಗೌಡ ಅವರ ಉಪ ಕುಲಪತಿ ಅವಧಿ ಮುಕ್ತಾಯವಾಗಿತ್ತು. ಬಳಿಕ ಪತ್ರಿಕೋದ್ಯಮ ವಿಭಾಗದ ಪ್ರೊ. ಓಂಕಾರ ಕಾಕಡೆ ಅವರು 2020 ಜೂನ್ 20 ರಿಂದ 2020 ಡಿಸೆಂಬರ್ 13 ರವರೆಗೆ ಹಂಗಾಮಿ ಉಪ ಕುಲಪತಿಯಾಗಿ ನೇಮಕಗೊಂಡಿದ್ದರು. ಇವರ ಬಳಿಕ ಪ್ರೊ. ನಾಮದೇವಗೌಡ ಅವರು 2020 ಡಿಸೆಂಬರ್ 14 ರಿಂದ ಹಂಗಾಮಿ ಉಪ ಕುಲಪತಿಯಾಗಿ ನೇಮಕಗೊಂಡು ಈ ತಿಂಗಳ 31 ರ ವರೆಗೆ ಅಧಿಕಾರದಲ್ಲಿದ್ದರು. ಈ ಹಂತದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪೂರ್ಣಾವಧಿ ಉಪ ಕುಲಪತಿಗಳನ್ನಾಗಿ ನೇಮಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ನನಗೆ ಯಾವುದೇ ಅಸಮಾಧಾನ ಇಲ್ಲ: ಆರ್. ಶಂಕರ್ ಮನವೊಲಿಸುವಲ್ಲಿ ಸಿಎಂ BSY ಯಶಸ್ವಿ

Advertisement

Udayavani is now on Telegram. Click here to join our channel and stay updated with the latest news.

Next