ನಂಜನಗೂಡು: ಮಹಿಳೆಯರ ಸಾಮಾಜಿಕ ಸ್ಥಾನಮಾನಕ್ಕಾಗಿ ವಚನ ಸಾಹಿತ್ಯದ ಮೂಲಕ ಕ್ರಾಂತಿ ನಡೆಸಿದ ಕನ್ನಡದ ಪ್ರಥಮ ಕವಯತ್ರಿ ಅಕ್ಕಮಹಾದೇವಿ ಸ್ತ್ರೀಕುಲಕ್ಕೆ ಮಾದರಿ ಎಂದು ಸಿಂಧುವಳ್ಳಿ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ತೆರೆಸಾ ಮಸ್ಕರೇನಸ್ ಹೇಳಿದರು.
ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಆಯೋಜಿಸಿದ್ದ ಅಕ್ಕಮಹಾದೇವಿ ಹಾಗೂ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮಿ ಜನ್ಮ ದಿನೋತ್ಸವ ಮತ್ತು ಕಾಯಕಯೋಗಿಗೆ ಶರಣು ಕಾರ್ಯಕ್ರಮದಲ್ಲಿ ಶರಣು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ತಾನು ಕ್ರೆ„ಸ್ತ ಧರ್ಮಿಯಳಾದ್ರೂ ಬಾಲ್ಯದಲ್ಲಿ ಅಕ್ಕಮಹಾದೇವಿ ಛದ್ಮವೇಷ ತೊಟ್ಟು ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೆ. ಅದರ ಫಲವಾಗಿ ಅಕ್ಕಮಹಾದೇವಿ ಜಯಂತಿಯಂದು ಕಾಯಕಯೋಗಿ ಬಿರುದಿಗೆ ಪಾತ್ರಳಾಗಿರುವುದು ಸಂತಸ ತಂದಿದೆ ಎಂದರು.
ನಂಜನಗೂಡು ನ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಮಾತನಾಡಿ, ತಾವೆಲ್ಲರೂ ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ಶರಣರ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ಬಡವಿದ್ಯಾರ್ಥಿಗಳಿಗೆ ಆಶಾಕಿರಣವಾದ ಶಿವಕುಮಾರ ಸ್ವಾಮಿ ಅವರ ಕಾಲಘಟ್ಟದಲ್ಲಿ ತಾವು ಬದುಕಿರುವುದು ನಮ್ಮ ಪುಣ್ಯ ಎಂದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತ ಬಸವರಾಜ್, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಸ್ಟರ್ ತೆರೇಸಾ ಮಸ್ಕರೇನಸ್‌ಗೆ ಕಾಯಕಯೋಗಿಗೆ ಶರಣು ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಫೌಂಡೇಶನ್ ಸಂಸ್ಥಾಪಕ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷೆ ಶಶಿಕಲಾ, ಗೌರವಾಧ್ಯಕ್ಷ ಭೋಗನಂಜಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಉಪಾಧ್ಯಕ್ಷ ನಾಗೇಶಮೂರ್ತಿ, ವೀರಶೈವ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ, ಕರವೇ ಅಧ್ಯಕ್ಷ ಮಹದೇವಪ್ರಸಾದ್, ನೂರ್ ಅಹಮದ್, ರಾಜಶೇಖರ್, ಮಮತ, ನೀಲಮ್ಮ, ವೃಷಭೇಂದ್ರಪ್ಪ, ದೊಡ್ಡಸ್ವಾಮಿ, ರಚನಾ ಉಪಸ್ಥಿತರಿದ್ದರು.