Advertisement

ಎಲ್ಲವನ್ನು ತೊರೆದು ವೈರಾಗಿಯಾಗಿ ಸಮಾಜ ತಿದ್ದಿದ ಅಕ್ಕಮಹಾದೇವಿ

11:53 AM Apr 23, 2019 | Lakshmi GovindaRaju |

ಮೈಸೂರು: ಯಾವ ವ್ಯಕ್ತಿ ಎಲ್ಲವನ್ನು ತೊರೆದು ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟು ಎಲ್ಲರ ಒಳಿತಿಗಾಗಿ ಶ್ರಮಿಸುತ್ತಾನೋ ಅದೇ ನಿಜವಾದ ಸೇವೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಅಭಿಪ್ರಾಯಪಟ್ಟರು.

Advertisement

ಮೈಸೂರು ಶರಣ ಮಂಡಲಿ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ಅಕ್ಕಮಹಾದೇವಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯಕ್ಕೆ ಕೊಡುಗೆ: ಅಕ್ಕಮಹಾದೇವಿ ಎಲ್ಲವನ್ನು ತೊರೆದು, ವೈರಾಗಿಯಾಗಿ ಸಮಾಜದ ಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದರು. ವಚನ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಪಾರ. 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಸಮಾಜ ಕಟ್ಟುವ ಕೆಲಸ ಮಾಡಿದರು. ಜೊತೆಗೆ ಜೀವನಕ್ಕೆ ಬೇಕಾದ ಅಂಶಗಳನ್ನು ಸಾರಿದ್ದಾರೆ. ಅವುಗಳನ್ನು ನಾವು ಅನುಸರಿಸುವ ಮೂಲಕ ಸ್ವಸ್ಥ ಸಮಾಜ ಕಟ್ಟಬೇಕಿದೆ ಎಂದು ಸಲಹೆ ನೀಡಿದರು.

ಸಶಕ್ತ ವಚನ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, 12ನೇ ಶತಮಾನದ ವಚನಕಾರರು ಬರೆದ ವಚನಗಳು ತುಂಬಾ ಸಶಕ್ತವಾಗಿದ್ದವು. ಅವು ಜನಭಾಷೆಯಾಗಿದ್ದು, ಸಮಾಜಕ್ಕೆ ಸರಳವಾಗಿ ಅರ್ಥವಾಗುತ್ತಿದ್ದವು. ಈ ಮೂಲಕ ಭಾಷಿಕ ನೆಲೆಗಟ್ಟಿನಲ್ಲಿ ವಚನಕಾರರು ತಮ್ಮ ಅನುಭವವನ್ನು ಸಮಾಜಕ್ಕೆ ವಚನಗಳ ರೂಪದಲ್ಲಿ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಾತ್ಮಿಕ ಎಳೆ: ಅಕ್ಕ ಮಹಾದೇವಿಯನ್ನು ಸ್ತ್ರೀವಾದಿ ಎಂತಲು ಬಹಳಷ್ಟು ಮಂದಿ ಕರೆಯುವುದಿದೆ. ಆದರೆ, ಆಕೆ ಸ್ತ್ರೀವಾದಿಯಲ್ಲ ಬದಲಿಗೆ ಮಾನವತಾವಾದಿಯಾಗಿದ್ದು, ಶರಣ ಸತಿ ಲಿಂಗ ಪತಿ ಎಂಬ ಪರಿಕಲ್ಪನೆಯಲ್ಲಿ ಬದುಕು ಸಾಗಿಸಿದರು. ಜತೆಗೆ ಅಧ್ಯಾತ್ಮಿಕ ಎಳೆ ಬದುಕಲ್ಲಿ ಇಲ್ಲದಿದ್ದರೆ ಆ ಬದುಕೆ ವ್ಯರ್ಥ ಎಂಬುದನ್ನು ಗಾಢವಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

Advertisement

ಡಾ. ಎ.ಪುಷ್ಪಾ ಅಯ್ಯಂಗಾರ್‌, ಎಂ.ಸಿ.ಪ್ರಭಾಮಣಿ ಅವರಿಗೆ ಅಕ್ಕ ಮಹಾದೇವಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ದಾಸ್ತಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಡಿ.ತಿಮ್ಮಯ್ಯ, ಸಂಸ್ಕೃತಿ ಚಿಂತಕ ಹೆಳವರಹುಂಡಿ ಸಿದ್ದಪ್ಪ, ಮೈಸೂರು ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಗೌರವಾಧ್ಯಕ್ಷ ಯು.ಎಸ್‌. ಶೇಖರ್‌, ಪ್ರಧಾನ ಸಂಚಾಲಕ ಎಂ. ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next