Advertisement
ಬೆಳಗ್ಗೆ 8.00 ಮೈಂದರ್ಗಿ ನಗರಾಧ್ಯಕ್ಷೆ ದಿಪ್ತಿ ಕೇಸೂರ ರಾಷ್ಟ್ರ ಧ್ವಜ ಹಾಗೂ ಅಕ್ಕಲ್‌ಕೋಟೆ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೈಂದರ್ಗಿಯ ಮಾಜಿ ನಗರಾಧ್ಯಕ್ಷರಾದ ಸಿ.ಎಫ್.ಶಾವರಿ, ತುಕಪ್ಪಾ ನಾಗೂರ ಮತ್ತು ಶಿವಚಲಪ್ಪ ಗೊಬ್ಬುರ, ಸಾಹಿತಿ ಮಂಗಳಗೌರಿ ಪಾಟೀಲ ಭಾಗವಹಿಸಲಿದ್ದಾರೆ. ಮುಂಜಾನೆ 9 ಗಂಟೆಗೆ ಮೈಂದರ್ಗಿಯ ಹಾಜಿ ಫಜಲೆರಹೆಮಾನ ಶಾಬ್ದಿ ಮೆರವಣಿಗೆಗೆ ಚಾಲನೆ ನೀಡುವರು. ಉಪ ನಗರಾಧ್ಯಕ್ಷ ವಿಠuಲ ಆರೇನವರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರಪಾಲಿಕೆಯ ಮುಖ್ಯಾಧಿಕಾರಿ ಪ್ರಸಾದ ಕಾಟಕರ, ಸಿದ್ಧಾರಾಮ ಕಾಳೆ, ಸಿದ್ಧಾರಾಮ ಸಾತಲ್ಗಾಂವ್, ನೀಲಕಂಠ ಮೆಂಥೆ, ಬಸವರಾಜ ಗೊಬ್ಬುರ, ಸುರೇಶ ದಿವಟೆ ಭಾಗವಹಿಸಲಿದ್ದಾರೆ. ಮುಂಜಾನೆ 10.30 ರಿಂದ ಅಕ್ಕಲ್‌ಕೋಟೆ ಶಾಸಕ ಸಿದ್ಧರಾಮ ಮೆØàತ್ರೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪೂಜ್ಯ ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವೆ ಡಾ| ಬಿ. ಟಿ. ಲಲಿತಾ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾರಾಷ್ಟ್ರ ಘಟಕದ ಕಸಾಪ ಅಧ್ಯಕ್ಷ ಬಸವರಾಜ ಮಸೂತಿ ಆಶಯ ನುಡಿಗಳನ್ನಾಡಲಿದ್ದಾರೆ. ಜಿ. ಪಂ. ಸಭಾಪತಿ ಮಲ್ಲಿಕಾರ್ಜುನ ಪಾಟೀಲ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಬಿ. ಬಿ. ಜೇವೂರ ಸರ್ವಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಚಿಂತನ ಗೋಷ್ಠಿಯಲ್ಲಿ ಮೈಂದರ್ಗಿ ಶಿವಚಲೇಶ್ವರ ಪ್ರಶಾಲೆಯ ಪ್ರಾಚಾರ್ಯ ಎಸ್. ಎಮ್. ಜಾಧವ್ ಅಧ್ಯಕ್ಷ ವಹಿಸಲಿದ್ದಾರೆ.
Related Articles
Advertisement
ನಿವೃತ್ತ ಪ್ರಾಚಾರ್ಯ ಎನ್. ಆರ್. ಕುಲಕರ್ಣಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಹಿರಿಯ ಸಾಹಿತಿ ಬಿ. ಬಿ. ಜೇವೂರೆ ಸರ್ವಾ ಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಆಳಂದ ಶಾಸಕ ಸುಭಾಷ ಗುತ್ತೇದಾರ, ಅಕ್ಕಲ್‌ಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಚಿನ ಕಲ್ಯಾಣ ಶೆಟ್ಟಿ, ಶಿಕ್ಷಣ ವಿಸ್ತಾರ ಅಧಿಕಾರಿ ಅಶೋಕ ಭಾಂಜೆ, ನಗರಸೇವಕ ಬಸಲಿಂಗಪ್ಪ ಖೇಡಗಿ, ಮಹೇಶ ಹಿಂಡೋಳೆ, ವಿರಾಜ ಪಾಟೀಲ, ರಾಜಶೇಖರ ಮಸೂತಿ, ಶಿವಚಲಪ್ಪ ಮುನ್ನೋಳಿ, ಸುರೇಖಾ ಹೊಳಿಕಟ್ಟಿ ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.