ಸೊಲ್ಲಾಪುರ: ನಗರದ ಅಕ್ಕಲ್‌ಕೋಟೆ ರಸ್ತೆಯಲ್ಲಿರುವ ಬೃಹನ್ಮಠ ಹೋಟಗಿ ಮಠದಲ್ಲಿ ಲಿಂಗೈಕ್ಯ ಷ. ಬ್ರ. ತಪೋರತ್ನ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪ ಸಿದ್ಧಿ ಮಹೋತ್ಸವದ ನಿಮಿತ್ತವಾಗಿ ಎ. 17ರಿಂದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಎ. 27ರ ವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ 108 ಅಡಿ ಎತ್ತರದ ಪಂಡಿತಾ ರಾಧ್ಯರ ಮೂರ್ತಿಯ ಪ್ರತಿಷ್ಠಾಪನೆ, 1008 ಲಿಂಗಗಳ ಸ್ಥಾಪನೆ, 1008 ಗೋಮಾತೆಗಳ ಪೂಜೆ, ವೀರತಪಸ್ವಿ ಲಕ್ಷ ದೀಪೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಲಿಂಗೈಕ್ಯ ಷ. ಬ್ರ. ತಪೋರತ್ನ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರು ಮಾಡಿದ ಸಂಕಲ್ಪ ಭಕ್ತರ ಸಹಾಯದೊಂದಿಗೆ ಪೂರ್ಣತ್ವದ ಕಡೆಗೆ ಹೊರಟಿದೆ. ಸಂಕಲ್ಪಸಿದ್ಧಿ ಮಹಾ ಸಮಾರಂಭದ ಯಶಸ್ಸಿಗಾಗಿ ಸಾವಿರಾರು ಭಕ್ತರು ಕಾರ್ಯ ನಿರ್ವಹಿಸುತ್ತಿದ್ದು 10 ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊ ಳ್ಳುವ ಮೂಲಕ ಸಂಕಲ್ಪಸಿದ್ಧಿ ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಕಲ್ಪ ಹೊಂದಿದ್ದಾರೆ ಎಂದು ಹೋಟಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಷ. ಬ್ರ. ತಪೋರತ್ನ ಯೋಗಿರಾಜೇಂದ್ರ ಶಿವಾ ಚಾರ್ಯ ಮಹಾ ಸ್ವಾಮೀಜಿಯವರು ಲಿಂಗೈಕ್ಯ ಆದ ನಂತರ ಅವರ ಉತ್ತರಾಧಿಕಾರಿಗಳಾದ ಷ. ಬ್ರ. ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಸಂಕಲ್ಪ ಸಿದ್ಧಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮದ ತಯಾರಿ ನಡೆದಿದ್ದು ಲಕ್ಷಾನುಲಕ್ಷ ಭಕ್ತರ ಸಹಾಯದೊಂದಿಗೆ ಉಜ್ಜೆ$çನಿ, ರಂಭಾಪುರಿ, ಕಾಶೀ, ಶ್ರೀಶೈಲದ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಸಂಕಲ್ಪ ಸಿದ್ಧಿ ಮಹೋತ್ಸವ ನಡೆಯಲಿದೆ. ಭವ್ಯದಿವ್ಯವಾದ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ದೇಶದ ಮಾಜಿ ಕೇಂದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಉಸ್ತುವಾರಿ ಸಚಿವ ವಿಜಯ ಕುಮಾರ್ ದೇಶ್‌ಮುಖ್, ಅಕ್ಕಲ್‌ಕೋಟದ ಶಾಸಕ ಸಿದ್ಧಾರಾಮ ಮೆØàತ್ರೆ ಇವರು ಭಾಗವಹಿಸಲಿದ್ದಾರೆ.
ಎ. 18ರಂದು ದೀಕ್ಷೆ ಮತ್ತು ಅಯ್ನಾಚಾರದ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಪ್ರತಿದಿನ ಹೋಮ ಹವನ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. ಎ. 26ರಂದು ಜಗದ್ಗುರುಗಳ ಆಗಮನ ಮತ್ತು ರಾಷ್ಟ್ರೀಯ ಭಾವೈಕ್ಯ ಸಮಾವೇಷ ಕಾರ್ಯ ಕ್ರಮ ನಡೆಯಲಿದೆ.
ಎ. 27ರಂದು ವೀರಶೈವ ಲಿಂಗಾಯತ ಸಮ್ಮೇಳನ ಮತ್ತು ವೀರ ತಪಸ್ವಿ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11ಕ್ಕೆ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಹಸ್ತದಿಂದ 108 ಅಡಿ ಎತ್ತರದ ಜಗದ್ಗುರು ಪಂಡಿತಾರಾಧ್ಯ ಭಗವತ್ಪಾದ ಮೂರ್ತಿಯ ಲೋಕಾರ್ಪಣೆ ಸಮಾ ರಂಭ, ಮಧ್ಯಾಹ್ನ 12.30ಕ್ಕೆ ಸಾಮುದಾಯಿಕ ವಿವಾಹ ಸಮಾರಂಭ ನಡೆಯಲಿದ್ದು ಉಪಸ್ಥಿತ ಭಕ್ತ ರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.