Advertisement

ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶ

03:35 PM Apr 18, 2022 | Team Udayavani |

ತಿಪಟೂರು: ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸರಿಸಮಾನ ಸ್ಥಾನಮಾನ ಕಲ್ಪಿಸ ಬೇಕೆಂದು 12ನೇ ಶತಮಾನದಲ್ಲಿಯೇ ಹೋರಾಟ ಮಾಡಿದ ಧೀರ ವನಿತೆ ಅಕ್ಕಮಹಾದೇವಿಯು ಇಂದಿನ ಮಹಿಳೆಯರ ಬದುಕಿಗೆ ಆದರ್ಶಪ್ರಾಯ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಎಂ.ಬಸವರಾಜಪ್ಪ ತಿಳಿಸಿದರು.

Advertisement

ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಸಮಾಜ ಹಾಗೂ ತಾಲೂಕು ಕಸಾಪ ಆಶ್ರಯದಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ವಚನ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಕುಟುಂಬದಿಂದ ಜನಿಸಿದ ಅಕ್ಕಮಹಾದೇವಿಯು ಚಿಕ್ಕ ವಯಸ್ಸಿನಲ್ಲಿಯೇ ರಾಜನನ್ನು ಮದುವೆಯಾಗಿ ವೈಭೋಗದ ಜೀವನ ಬಿಟ್ಟು ಸಮಾಜದಲ್ಲಿದ್ದ ದೇವ ದಾಸಿ, ವಿಧವಾ ಪದ್ಧತಿ, ಸತಿಸಹಗಮನ ಪದ್ಧತಿ ಗಳಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಕಲ್ಯಾಣಕ್ರಾಂತಿಯ ಮೂಲಕ ಹೋರಾಟಕ್ಕಿಳಿದರು.

ಸಮಾಜದಲ್ಲಿ ಸಾಮರಸ್ಯ ಮೂಡಿಸಲು, ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಅಕ್ಕಮಹಾ ದೇವಿಯವರ ಹೆಸರು ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದು, ಅವರ ಆದರ್ಶಗಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಿದೆ ಎಂದರು.

ಪ್ರಾಂಶುಪಾಲ ಎಂ.ಡಿ.ಶಿವಕುಮಾರ್‌ ಅಕ್ಕನ ವಚನಗಳಲ್ಲಿ ಸ್ತ್ರೀ ಸ್ವಾತಂತ್ರ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಾ, 12ನೇ ಶತಮಾನದ ಕರ್ನಾಟಕ ಇತಿಹಾಸದಲ್ಲಿ ಸುವರ್ಣಯುಗ. ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮಣ್ಣ, ಚೆನ್ನಬಸವಣ್ಣನಂತಹ ಶಿವಶರಣರು ಸಾಹಿತ್ಯದ ಮೂಲಕ ಕ್ರಾಂತಿ ಯನ್ನುಂಟ ಮಾಡಿದರು. ಕಲ್ಯಾಣಕ್ಕೆ ಬಂದು ಬಸವಣ್ಣನವರಂತಹ ಶಿವಶರಣರೊಡಗೂಡಿ ಸ್ತ್ರೀ ಸಮಾನತೆ, ಜಾತಿ, ಲಿಂಗ ತಾರತಮ್ಯದ ವಿರುದ್ಧ ಹೋರಾಡಿದರು.

ಸಮಾಜ ದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವ ಜೀವನಾದರ್ಶಗಳನ್ನು ಸಾರಿ ಸಮಾಜಕ್ಕೆ ತಿಳಿ ಹೇಳುವ ಮುಖಾಂತರ ಪ್ರೇರಕರಾಗಿದ್ದರು ಎಂದು ಹೇಳಿ ದರು. ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಶಿವಶರಣೆ ಅಕ್ಕಮಹಾದೇವಿಯಂತೆ ಮಹಿಳೆಯರು ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಮ್ಮ ಸಮಾಜವು ಜಯಂತಿ ಆಚರಣೆಗೆ ಸೀಮಿತವಾಗದೆ ಹಲವು ಸಮಾಜಮುಖೀ ಕಾರ್ಯಗಳನ್ನು ಮಾಡು ತ್ತಿದೆ ಎಂದರು.

Advertisement

ಈ ಸಂದರ್ಭದಲ್ಲಿ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಮಾಜದ ಮಹಿಳೆ ಯರು ಬಸವಣ್ಣ, ಅಕ್ಕಮಹಾದೇವಿ ಹೀಗೆ ವಚನಕಾರರ ವಚನಗಳನ್ನು ಪ್ರಸ್ತತ ಪಡಿಸಿದರು. ಕಸಪಾ ಕಾರ್ಯದರ್ಶಿ ಮಂಜಪ್ಪ, ನಿವೃತ್ತ ಶಿಕ್ಷಕ ಸೋಮಶೇಖರ್‌, ಸಮಾಜ ಸೇವಕಿ ಸ್ವರ್ಣಗೌರಿ, ಗಾಯಕಿ ಹೇಮಾ ಬಸವರಾಜು, ಶಿಕ್ಷಕಿ ಉಮಾ, ಮುಕ್ತಾ ತಿಪ್ಪೇಶ್‌, ವೇದ ಸುರೇಶ್‌ ಸೇರಿದಂತೆ ಸಮಾಜದ ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next