Advertisement
ಹೇಗೆ ಗೊತ್ತೆ? ಕೊನೆಗೂ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿ ಸರಕಾರಿ ಬಂಗಲೆ ತೆರವು ಗೊಳಿಸಿರುವ ಅಖೀಲೇಶ್, ನೆಲಕ್ಕೆ ಅಳವಡಿಸಲಾಗಿದ್ದ ಟೈಲ್ಸ್‌ಗಳನ್ನೂ ಬಿಡದೆ ಬೆಲೆ ಬಾಳುವ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ “ಮಹಾನ್’ ಕಾರ್ಯಕ್ಕಾಗಿ ಇಡೀ ಬಂಗಲೆಯನ್ನೇ ವಿರೂಪ ಗೊಳಿಸಿದ್ದಾರೆ. ಘಟನೆ ಬಿಜೆಪಿ ಮತ್ತು ಎಸ್‌ಪಿ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.
ಜೂ. 2ರಂದೇ ಬಂಗಲೆ ತೆರವು ಗೊಳಿಸಿದ್ದ ಅಖೀಲೇಶ್, ಅದರ ಕೀಲಿಕೈಗಳನ್ನು ಹಸ್ತಾಂತರಿಸಿದ್ದು ಶುಕ್ರವಾರ ರಾತ್ರಿ. ಶನಿವಾರ ಬೆಳಗ್ಗೆ ಬಂಗಲೆ ಪ್ರವೇಶಿಸಿದ ಅಧಿಕಾರಿ ಗಳಿಗೆ ಶಾಕ್ ಕಾದಿತ್ತು. 2016ರಲ್ಲಿ ಯಾದವ್ ಕುಟುಂಬದ ಅಭಿ ರುಚಿಗೆ ತಕ್ಕಂತೆ ಬರೋಬ್ಬರಿ 45 ಕೋ. ರೂ. ವೆಚ್ಚ ಮಾಡಿ ನವೀಕರಿಸಿದ್ದ ಬಂಗಲೆ ವಿರೂಪ ಗೊಂಡಿತ್ತು. ಒಳಗಿರುವ ವಸ್ತು ಗಳೆಲ್ಲ ಮಾಯವಾಗಿದ್ದವು. ಸ್ವಿಮ್ಮಿಂಗ್ ಪೂಲ್, ಮನೆಯೊಳಗಿನ ನೆಲ ಅಗೆದು ಟೈಲ್ಸ್, ಮಾರ್ಬಲ್‌ಗಳನ್ನು ಹೊತ್ತೂಯ್ಯಲಾಗಿತ್ತು. ಮುಂದೇನು?
ಕಣ್ಮರೆಯಾಗಿರುವ ಎಲ್ಲ ವಸ್ತುಗಳನ್ನೂ ಆದ ಹಾನಿಯನ್ನು ಪಟ್ಟಿ ಮಾಡಿ, ಮೌಲ್ಯವನ್ನು ಲೆಕ್ಕ ಮಾಡುತ್ತೇವೆ. ಕಾನೂನು ಸಲಹೆ ಪಡೆದು, ಮನೆ ಮಾಲಕರಿಗೆ ನೋಟಿಸ್ ಜಾರಿ ಮಾಡುತ್ತೇವೆ. ನಾಪತ್ತೆಯಾದ ಎಲ್ಲ ವಸ್ತುಗಳನ್ನೂ ವಶಪಡಿಸಿಕೊಳ್ಳುವ ಮತ್ತು ಸರಕಾರಿ ಬಂಗಲೆಗಾದ ಹಾನಿ ಭರಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಯಾವತಿ, ರಾಜನಾಥ್ ಸಿಂಗ್, ಕಲ್ಯಾಣ್‌ಸಿಂಗ್, ಮುಲಾಯಂ ಸೇರಿದಂತೆ ಯಾವ ಮಾಜಿ ಸಿಎಂಗಳೂ ಬಂಗಲೆ ತೆರವು ಗೊಳಿಸುವಾಗ ಹೀಗೆ ಮಾಡಿರಲಿಲ್ಲ ಎಂದೂ ಹೇಳಿದ್ದಾರೆ.
Related Articles
ಸ್ವಿಮ್ಮಿಂಗ್ ಪೂಲ್‌ಗೆ ಅಳವಡಿಸಲಾಗಿದ್ದ ಟರ್ಕಿ ಆಮದಿತ ಟೈಲ್ಸ್
ಇಟಾಲಿಯನ್ ಮಾರ್ಬಲ್‌ಗಳು
ಎಸಿ, ಆಮದಿತ ಛಾವಣಿ
ಉದ್ಯಾನದ ಲೈಟ್,
ಬಾತ್‌ರೂಂ ಫಿಟ್ಟಿಂಗ್
ಅಪರೂಪದ ಗಿಡಗಳು
ಆಮದಿತ ಆಲಂಕಾರಿಕ ವಸ್ತುಗಳು
Advertisement