Advertisement

CBI: ಫೆ.29 ರಂದು ಸಿಬಿಐ ಮುಂದೆ ಹಾಜರಾಗುವಂತೆ ಅಖಿಲೇಶ್ ಯಾದವ್‌ಗೆ ನೋಟಿಸ್… ಏನಿದು ಪ್ರಕರಣ

03:13 PM Feb 28, 2024 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ಸ್ ನೀಡಿದೆ.

Advertisement

ನಾಳೆ ಅಂದರೆ ಫೆಬ್ರವರಿ 29 ರಂದು ದೆಹಲಿಯಲ್ಲಿ ಸಿಬಿಐ ಮುಂದೆ ಹಾಜರಾಗುವಂತೆ ಅಖಿಲೇಶ್ ಯಾದವ್ ಅವರಿಗೆ ನೊಟೀಸ್ ನೀಡಲಾಗಿದ್ದು ಇದರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಯಾಗಿ ಹಾಜರಾಗುವಂತೆ ಅಖಿಲೇಶ್‌ ಅವರಿಗೆ ಸೂಚಿಸಲಾಗಿದೆ.

ಫೆಬ್ರವರಿ 29 ರಂದು ಹಾಜರಾಗಬೇಕು:
ಸಿಆರ್‌ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಅಖಿಲೇಶ್‌ಗೆ ನೋಟಿಸ್ ನೀಡಿದ್ದು ಫೆಬ್ರವರಿ 21 ರಂದು ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ ಫೆಬ್ರವರಿ 29 ರಂದು ದೆಹಲಿಯಲ್ಲಿ ಸಿಬಿಐ ಮುಂದೆ ಹಾಜರಾಗುವಂತೆ ಅಖಿಲೇಶ್ ಅವರಿಗೆ ತಿಳಿಸಲಾಗಿದೆ.

2019ರಲ್ಲಿ ಎಫ್‌ಐಆರ್ ದಾಖಲಾಗಿತ್ತು:
ಅಖಿಲೇಶ್ ಯಾದವ್ ಸಿಬಿಐ ಮುಂದೆ ಹಾಜರಾಗಿ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 2012-2016ರ ನಡುವೆ ಹಮೀರ್‌ಪುರದಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 2019ರ ಜನವರಿಯಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಲಾಗಿತ್ತು.

ಜನವರಿ 2019 ರಲ್ಲಿ, ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟ್, ಗಣಿಗಾರಿಕೆ ಅಧಿಕಾರಿ ಮತ್ತು ಇತರರು ಸೇರಿದಂತೆ ಹಲವಾರು ಸಾರ್ವಜನಿಕ ಸೇವಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಮೀರ್‌ಪುರದಲ್ಲಿ ಸರ್ಕಾರಿ ನೌಕರರು ಅಕ್ರಮ ಖನಿಜ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

Advertisement

ಇದನ್ನೂ ಓದಿ: Himachal Pradesh; ಸಚಿವ ಸ್ಥಾನಕ್ಕೆ ವಿಕ್ರಮಾದಿತ್ಯ ರಾಜೀನಾಮೆ: ಕೈ ಸರಕಾರ ಸಂಕಷ್ಟದಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next