ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರನ್ನು ಅಣಕಿಸಲು ಯೋಗಿಯಂತೆಯೇ ಕಾಣುವ ವ್ಯಕ್ತಿಯೊಬ್ಬರಿಗೆ ಕಾವಿ ತೊಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಅವರನ್ನು ತಮ್ಮೊಂದಿಗೆ ಚುನಾವಣ ಪ್ರಚಾರಕ್ಕೆ ಕರೆದೊಯ್ಯುವುದಾಗಿ ಹೇಳಿ ಕೊಂಡಿದ್ದಾರೆ. ನಕಲಿ ದೇವರನ್ನು ಕರೆತರಲಾಗದು. ಆದರೆ ಬಾಬಾರನ್ನು ಕರೆದುಕೊಂಡು ಬಂದಿದ್ದೇನೆ. ಗೋರಖ್‌ಪುರವನ್ನು ಹೊರತುಪಡಿಸಿ, ಅವರು ರಾಜ್ಯದ ಎಲ್ಲೆಡೆಗೂ ಸರಕಾರದ ಬಗ್ಗೆ ಸತ್ಯವನ್ನು ಹೇಳುತ್ತಾರೆ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ನಕಲಿ ಬಾಬಾ ಫೋಟೋವನ್ನೂ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ, ಅಖೀಲೇಶ್ ಎಷ್ಟು ಆಘಾತ ಗೊಂಡಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಹಿಂದೊಮ್ಮೆ 37 ಕ್ಷೇತ್ರಗಳಲ್ಲಿ ಗೆದ್ದಿದ್ದ ಎಸ್‌ಪಿ ಈ ಬಾರಿ 37 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವಂತಾಗಿದೆ. ಬಿಎಸ್‌ಪಿಯ ಮಾಯಾವತಿ ಜೊತೆ ವೇದಿಕೆ ಹಂಚಿ ಕೊಂಡಾಗ, ಮಾಯಾವತಿ ದೊಡ್ಡಕುರ್ಚಿಯಲ್ಲಿ ಎತ್ತರದ ಮೇಲೆ ಕುಳಿತಿದ್ದರೆ, ಅಖೀಲೇಶ್ ಸಣ್ಣ ಕುರ್ಚಿಯಲ್ಲಿ ಕುಳಿತಿರುತ್ತಾರೆ. ಈ ಬೇಸರದಿಂದಲೇ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಯೋಗಿ ಟೀಕಿಸಿದ್ದಾರೆ.