Advertisement

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

06:37 PM Sep 12, 2024 | Team Udayavani |

ಲಕ್ನೋ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ(Ayodhya) ನಡೆದ ದೊಡ್ಡ ಭೂ ಹಗರಣದಲ್ಲಿ ಆಡಳಿತಾರೂಢ ಬಿಜೆಪಿ(BJP) ಸದಸ್ಯರು ಮತ್ತು ಸರಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ(Samajwadi Party) ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ(ಸೆ 12) ಆರೋಪಿಸಿದ್ದಾರೆ.

Advertisement

ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ‘ಪವಿತ್ರ ನಗರದಲ್ಲಿ ನಡೆಯುತ್ತಿರುವ ಭೂ ಸಂಬಂಧಿತ ಕಳ್ಳತನವು ಅಧಿಕಾರದಲ್ಲಿರುವವರು ಸುಗಮಗೊಳಿಸುವ ಭ್ರಷ್ಟಾಚಾರದ ವಿಶಾಲ ಮಾದರಿಯ ಭಾಗವಾಗಿದೆ’ ಎಂದು ಆರೋಪಿಸಿದರು.

ಅಧಿಕಾರಿಗಳು ಮತ್ತು ಬಿಜೆಪಿಯವರು ಲೂಟಿಯಲ್ಲಿ ತೊಡಗಿದ್ದಾರೆ.ಎಲ್ಲಿ ಕಳ್ಳತನವಾಗಿದೆ, ಅಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಅಯೋಧ್ಯೆಯಲ್ಲಿ ನಡೆದ ಲೂಟಿಯ ಕರಾಳ ವಾಸ್ತವವನ್ನು ಬಹಿರಂಗಪಡಿಸಿದ್ದಕ್ಕಾಗಿ ನಮ್ಮ ಪಕ್ಷದ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಯಾದವ್ ಹೇಳಿದರು.

“ಅಯೋಧ್ಯೆಯಂತಹ ಪವಿತ್ರ ಸ್ಥಳದಲ್ಲಿ ಈ ಮಟ್ಟದ ಲೂಟಿ ಮಾಡಲು ಸಾಧ್ಯವಾಗಿದ್ದರೆ, ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಎಷ್ಟರ ಮಟ್ಟಿಗೆ ಲೂಟಿ ನಡೆಯುತ್ತಿದೆ ಎಂದು ಊಹಿಸಿ” ಎಂದರು.

‘ಒಳ್ಳೆಯ ಕಾರಣಗಳಿಗಾಗಿ ಭೂಮಿ ನೀಡಲು ಬಯಸಿದ ರೈತರಿಗೆ ಪರಿಹಾರವನ್ನು ನಿರಾಕರಿಸಲಾಯಿತು.ಬಡ ಮತ್ತು ನಿಷ್ಕಪಟ ವ್ಯಕ್ತಿಗಳು ತಮ್ಮ ಭೂಮಿಯನ್ನು ಇತರರಿಗೆ ಹಸ್ತಾಂತರಿಸಿದಾಗ ಭೂಮಿಯ ದರವನ್ನು ಹೆಚ್ಚಿಸಲಾಯಿತು. ಇದು ಆದಾಯದ ನಷ್ಟವಲ್ಲವೇ? ”ಎಂದು ಪ್ರಶ್ನಿಸಿದರು.

Advertisement

“ಬಿಜೆಪಿ ಅಧಿಕಾರಿಗಳನ್ನು ಒಳಗೊಂಡ ಭೂ ನೋಂದಣಿಯ ಪ್ರತಿಗಳನ್ನು ನಾವು ಸ್ವೀಕರಿಸಿದ್ದೇವೆ ಎನ್ನುವುದು ನನಗೆ ಸಂತೋಷ ತಂದಿದೆ. ಆರ್ಟಿಲರಿ ಅಭ್ಯಾಸಕ್ಕೆ ಮೀಸಲಾದ ರಕ್ಷಣ ಭೂಮಿಯನ್ನು ಬಿಜೆಪಿ ಸದಸ್ಯರು ಮಾರಾಟ ಮಾಡಿದ್ದಾರೆ. ಅವರು ರೈಲ್ವೆ ಜೋಡಣೆಯನ್ನು ಸಹ ಬದಲಾಯಿಸಿದ್ದಾರೆ, ಇದು ಹಿಂದೆ ಬಡವರ ಭೂಮಿಯಾಗಿದ್ದರೂ ಅವರ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿಲ್ಲ’ ಎಂದು ಆರೋಪ ಮಾಡಿದ್ದಾರೆ.

ಅಖಿಲೇಶ್ ಈ ಹಿಂದೆ ಜುಲೈ 10 ರಂದು ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿನ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕೋಟ್ಯಂತರ ರೂ. ಹಗರಣ ಆರೋಪ ಮಾಡಿ ಭೂ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next