Advertisement

ಮುಗಿದಿಲ್ಲ SP ಭಿನ್ನಮತ:ರಾಷ್ಟ್ರಾಧ್ಯಕ್ಷರಾಗಿ ಅಖಿಲೇಶ್‌; ಅಮರ್‌ ವಜಾ

12:25 PM Jan 01, 2017 | |

ಲಕ್ನೋ : ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಮುಂದುವರಿದಿದ್ದು ,ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ. ಇದುವರೆಗೆ ರಾಷ್ಟ್ರಾಧ್ಯಕ್ಷರಾಗಿದ್ದ ಮುಲಾಯಂ ಸಿಂಗ್‌ ಅವರನ್ನು ಮಾರ್ಗದರ್ಶಕ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್‌ ಯಾದವ್‌ ಘೋಷಿಸಿದ್ದಾರೆ. 

Advertisement

ಭಾನುವಾರ ಮುಲಾಯಂ ಸಿಂಗ್‌ ಅವರ ತೀವ್ರ ವಿರೋಧದ ನರಡುವೆಯೂ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್‌ ಯಾದವ್‌ ಗೈರಾಗಿದ್ದರು. ಶಿವಪಾಲ್‌ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಯಿತು. 

ಹೈಡ್ರಾಮಾ : ಮತ್ತೆ ರಾಮ್‌ ಗೋಪಾಲ್‌ ವಜಾ! 

ರಾಮ್‌ ಗೋಪಾಲ್‌ ಯಾದವ್‌ ಅವರನ್ನು 2 ದಿನಗಳ ಒಳಗಾಗಿ ಮತ್ತೆ ಪಕ್ಷದಿಂದ 6 ವರ್ಷಗಳ ಕಾಲ ಸಂಸ್ಪೆಂಡ್‌ ಮಾಡಿ ಮುಲಾಯಂ ಸಿಂಗ್‌ ಆದೇಶ ಹೊರಡಿಸಿದ್ದಾರೆ. 

ಜನವರಿ 5 ರಂದು ಕಾರ್ಯಕಾರಣಿ 

Advertisement

ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಜನವರಿ 5 ರಂದು ಮುಲಾಯಂ ಸಿಂಗ್‌ ಅವರು ಕರೆದಿದ್ದು ಮುಂದಿನ ರಾಜಕೀಯ ವಿದ್ಯಮಾನಗಳು ತೀವ್ರ ಕುತೂಹಲ ಮೂಡಿಸಿವೆ.

ನಾನು ಕುಟುಂಬ ಮತ್ತು ಪಕ್ಷವನ್ನು ಉಳಿಸುತ್ತೇನೆ 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖೀಲೇಶ್‌ ನಾನು ಕುಟುಂಬ ಮತ್ತು ಪಕ್ಷ ಎರಡನ್ನೂ ಉಳಿಸಬೇಕಾಗಿದೆ. ನನಗೆ ತಂದೆಯ ಮೇಲೆ ಅಪಾರಗೌರವವಿದೆ ಎಂದರು. ಇದೇ ವೇಳೆ ಶಿವಪಾಲ್‌ ವಿರುದ್ಧ ಕಿಡಿ ಕಾರಿದರು. 

ಅಶಿಸ್ತಿನ ವರ್ತನೆ ಆರೋಪದಡಿ  ಸಮಾಜವಾದಿ ಪಕ್ಷದಿಂದ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರನ್ನು ವಜಾ ಮಾಡಿದ ಆದೇಶವನ್ನು  ಒಂದೇ ದಿನದಲ್ಲಿ  ವಾಪಾಸು ಪಡೆಯಲಾಗಿತ್ತು. 

ಅಮರ್‌ ಸಿಂಗ್‌ ವಜಾ 
ಪಕ್ಷದಿಂದ ಅಮರ್‌ಸಿಂಗ್‌ ಅವರನ್ನು ವಜಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next