Advertisement

ಅಕ್ಕನ ಸಾವು ಕಾಡಿದರೂ ಪ್ರಶಸ್ತಿ ತಂದಿತ್ತ ಅಕ್ಬರ್ ಅಲಿ

09:58 AM Feb 11, 2020 | sudhir |

ವಿಶ್ವಕಪ್‌ ಫೈನಲ್‌ಗ‌ೂ ಮುನ್ನವೇ ತನ್ನ ಅಕ್ಕನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದರೂ, ಬಾಂಗ್ಲಾ ನಾಯಕ ಅಕ್ಬರ್ ಅಲಿ ತಮ್ಮ ತಂಡವನ್ನು ಫೈನಲ್‌ನಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. “ಪ್ರೊಥೋಮ್‌ ಅಲೋ’ ದೈನಿಕದ ವರದಿ ಪ್ರಕಾರ, ಜ. 22ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಅಕ್ಕ ಖಾದಿಜಾ ಖತೂನ್‌ (22), ಅವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ.

Advertisement

ಈ ವಿಚಾರ ತಿಳಿಸಿದರೆ ಅಕ್ಬರ್ ವಿಚಲಿತರಾಗುತ್ತಾರೆ ಎಂಬ ಕಾರಣಕ್ಕೆ ಅವರ ಕುಟುಂಬ ಈ ಘಟನೆಯನ್ನು ತಿಳಿಸಿರಲಿಲ್ಲ. ಆದರೆ ಮತ್ತೂಬ್ಬ ಸಹೋದರಿಯಿಂದ ಈ ವಿಚಾರ ಅಲಿಗೆ ತಿಳಿಯಿತು. ನೋವಿನಲ್ಲೂ ಅವರು ಕ್ರೀಡಾಸ್ಫೂರ್ತಿ ಮೆರೆದರು. ಬಾಂಗ್ಲಾದೇಶಿಗರ ಪಾಲಿಗೆ ಅವರೀಗ “ಅಕ್ಬರ್ ದಿ ಗ್ರೇಟ್‌’ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next