Advertisement

ಗಡಿಯಲ್ಲಿ ಆಕಾಶವಾಣಿ, ಡಿಡಿ ಬಲವರ್ಧನೆ

01:01 AM Jan 08, 2023 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿ ಪಾಕಿಸ್ಥಾನ, ನೇಪಾಲ, ಅಫ್ಘಾನಿಸ್ಥಾನ ಗಡಿ ಪ್ರದೇಶಗಳಲ್ಲಿ ತನ್ನ ಪ್ರಸಾರ ಜಾಲವನ್ನು ಮತ್ತಷ್ಟು ಬಲಪಡಿಸಿ, ವಿಸ್ತರಿಸಲು ನಿರ್ಧರಿಸಿದೆ.

Advertisement

ಪ್ರಸಾರ ಮೂಲ ಸೌಕರ್ಯ ಜಾಲ ಅಭಿವೃದ್ಧಿ (ಬಿಐಎನ್‌ಡಿ) ವ್ಯಾಪ್ತಿಯ ಅಡಿಯಲ್ಲಿ ಈ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಪ್ರಸಾರ ಭಾರತಿಯ ಸಿಇಒ ಗೌರವ್‌ ತ್ರಿವೇದಿ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಈ ಯೋಜನೆಗಾಗಿ 2,539.61 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next