Advertisement

ಅಮೆರಿಕದ ಗುರುದ್ವಾರದಲ್ಲಿ ಸಿಖ್‌ ನಾಯಕನ ಮೇಲೆ ಗುಂಪು ದಾಳಿ 

01:32 PM Aug 26, 2018 | |

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಜನಾಂಗೀಯ ದಾಳಿ ಮುಂದುವರೆದಿದ್ದು,ಶನಿವಾರ ದೆಹಲಿಯ ಗುರುದ್ವಾರ ಸಮಿತಿಯ ಸದಸ್ಯ, ಆಕಾಲಿದಳದ ನಾಯಕ ಮಂಜೀತ್‌ ಸಿಂಗ್‌ ಅವರನ್ನು 20 ಕ್ಕೂ ಹೆಚ್ಚು ಜನರ ಗುಂಪು ಎಳೆದಾಡಿ ಮುಖಕ್ಕೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದೆ. 

Advertisement

ಗುರುದ್ವಾರದಿಂದ ಹೊರ ಬರುತ್ತಿದ್ದ ವೇಳೆ 20 ಕ್ಕೂ ಹೆಚ್ಚು ಮಂದಿ ದಾಳಿ ನಡೆಸಿದ್ದಾರೆ. ಮಂಜೀತ್‌ ಅವರ ಮುಖಕ್ಕೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ದಾಳಿ ನಡೆಸಿ ಮೂವರನ್ನು ಕ್ಯಾಲಿಫೋರ್ನಿಯಾ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

ಮಂಜೀತ್‌ ಅವರು ಗುರುದ್ವಾರದಲ್ಲಿ ನನ್ನ ಮೇಲೆ ನಡೆದ ದಾಳಿಗೆ ಯಾರೂ ಶಾಂತಿ ಭಂಗಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ. 

ಘಟನೆಯನ್ನು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಸೇರಿದಂತೆ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next