Advertisement
2ನೇ ವಿಶ್ವಯುದ್ಧ ವೇಳೆ ಬ್ರಹ್ಮಾಸ್ತ್ರದಂತೆ ಬಳಕೆಯಾದ ಬಂದೂಕು. ಎಕೆ-47 ನಿರ್ಮಾತೃ, ರಷ್ಯಾದ ಮೈಕೇಲ್ ಕಲಾಶ್ನಿಕೋವ್ “ಎಕೆ-203′ ಬಂದೂಕನ್ನೂ ವಿನ್ಯಾಸಗೊಳಿಸಿದ. ಅತ್ಯಂತ ಚುರುಕು, ತೀಕ್ಷ್ಣ ದಾಳಿಗೆ ಹೇಳಿಮಾಡಿಸಿದ ಈ ರೈಫಲ್‌ಗೆ ಜಗತ್ತಿನಲ್ಲಿ ಭಾರೀ ಬೇಡಿಕೆಯಿದೆ.
Related Articles
Advertisement
ಉತ್ತರ ಪ್ರದೇಶದ ವಿಇಪಿ ಲೋಕಸಭಾ ಕ್ಷೇತ್ರವೊಂದರ ಕಾರ್ಖಾನೆಯಲ್ಲಿ ಉತ್ಪಾದನೆ ನಡೆಯಲಿದೆ. ಇಂಡೋ ರಷ್ಯನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಡಿಯಲ್ಲಿ, ಕೆಲವೇ ವರ್ಷಗಳಲ್ಲಿ 6 ಲಕ್ಷ ರೈಫಲ್‌ಗಳು ಉತ್ಪಾದನೆಗೊಳ್ಳಲಿವೆ.
ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೇ ಭಾರತದ ರಕ್ಷಣ ರಂಗಕ್ಕೆ ರಷ್ಯಾ ಸಿಹಿಸುದ್ದಿ ನೀಡಿದೆ. ಎಕೆ-47ನಷ್ಟೇ ಪರಿಣಾಮಕಾರಿ ದಾಳಿಗೆ ಹೆಸರಾದ “ಎಕೆ-203′ ರೈಫಲ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ರಷ್ಯಾ ಸಮ್ಮತಿಸಿದೆ.
ಸಿಆರ್‌ಪಿಎಫ್ಗೆ ವರ :
ಭಾರತೀಯ ಯೋಧರ ಬಳಿ ಈಗಾಗಲೇ ಎಕೆ- 203 ಸುಧಾರಿತ ದಾಳಿ ರೈಫಲ್‌ಗಳಿವೆ. ಸದ್ಯಕ್ಕೆ ಇದರ ಅವಶ್ಯಕತೆ ಇರುವುದು ಸಿಆರ್‌ಪಿಎಫ್ನಂಥ ಕೇಂದ್ರೀಯ ಪೊಲೀಸ್ ಪಡೆಗೆ. ದೇಶದ ಆಂತರಿಕ ಭದ್ರತೆಗೆ ಶ್ರಮಿಸುತ್ತಿರುವ ಕೇಂದ್ರೀಯ ಪಡೆಗಳು ಇದರ ಪ್ರಯೋಜನ ಲಭಿಸಲಿದೆ.