Advertisement
ಅಜ್ಜರಕಾಡು ಪಾರ್ಕ್‌ನಲ್ಲಿ ಬಹಳ ವರ್ಷಗಳ ಹಿಂದೆ ಎರಡು ಮಕ್ಕಳ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಚಿಕ್ಕ ಪಾರ್ಕ್ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿ ಹೊಸ ಮಕ್ಕಳ ಆಟದ ಪರಿಕರಗಳನ್ನು ಆಳವಡಿಸಲಾಗಿದೆ. ಪ್ರಸ್ತುತ ಮಕ್ಕಳಿಗೆ ತರಗತಿಗಳಿಲ್ಲದಿರುವುದರಿಂದ ಪಾರ್ಕ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಪಾರ್ಕ್‌ನಲ್ಲಿ ಆಟವಾಡಲು ಅವಕಾಶ ಸಿಗದವರು, ಸಮೀಪದ ಇನ್ನೊಂದು ಪಾರ್ಕ್‌ಗೆ(ದೊಡ್ಡ ಪಾರ್ಕ್) ಹೋಗುತ್ತಿದ್ದಾರೆ. ಆದರೆ ಇಲ್ಲಿನ ಆಟಿಕೆಗಳಲ್ಲಿ ಮಕ್ಕಳನ್ನು ಕೂರಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಇಲ್ಲಿರುವ ಕೆಲವು ಆಟಿಕೆಗಳು ತುಂಡಾಗಿದ್ದು, ತುಕ್ಕು ಹಿಡಿದು ಮುರಿದು ಬೀಳುವ ಆತಂಕವಿದೆ.
Related Articles
Advertisement
ಪಾರ್ಕ್‌ನಲ್ಲಿ ಸುಮಾರು ಮೂರು ಉಯ್ನಾಲೆ ಇದೆ. ಅದರಲ್ಲಿ ಒಂದು ಮಾತ್ರ ಬಳಕೆ ಮಾಡುವ ಸ್ಥಿತಿಯಲ್ಲಿದೆ. ಉಳಿದ ಎರಡರಲ್ಲಿ ಒಂದು ಉಯ್ನಾಲೆಯ ಕಬ್ಬಿಣದ ರಾಡ್ ತುಂಡಾಗಿದೆ. ಇನ್ನೊಂದರಲ್ಲಿ ಉಯ್ನಾಲೆ ಕಣ್ಮರೆಯಾಗಿ ರಾಡ್ ಮಾತ್ರ ಇದೆ. ಪ್ರಸ್ತುತ ಮಕ್ಕಳು ತುಂಡಾದ ರಾಡ್‌ನಲ್ಲಿರುವ ಉಯ್ನಾಲೆಯಲ್ಲಿ ಆಟವಾಡುತ್ತಿದ್ದು ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.
ಚಿಕ್ಕ ಪಾರ್ಕ್‌ನಲ್ಲಿ ಸಂಜೆಯ ಮಕ್ಕಳು ವೇಳೆ ತುಂಬಿ ತುಳುಕುತ್ತಾರೆ. ಅದಕ್ಕಾಗಿ ಮಕ್ಕಳು ದೊಡ್ಡ ಪಾರ್ಕ್‌ಗೆ ಹೋಗಬೇಕಾಗಿದೆ. ಆದರೆ ಇಲ್ಲಿನ ಆಟಿಕೆ ಸಾಮಗ್ರಿಗಳು ಶಿಥಿಲಾವಸ್ಥೆಯಲ್ಲಿದೆ. ಶೀಘ್ರದಲ್ಲಿ ದುರಸ್ತಿ ಮಾಡಿ ಮಕ್ಕಳು ಆಟವಾಡಲು ಅನುಕೂಲ ಮಾಡಬೇಕು.– ವಿದ್ಯಾ, ಸ್ಥಳೀಯರು
ಪಾರ್ಕ್‌ನಲ್ಲಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ವೈರ್‌ಗಳನ್ನು ದುರಸ್ತಿ ಮಾಡಲಾಗಿದೆ. -ರಶ್ಮಿ ಚಿತ್ತರಂಜನ್ ಭಟ್,-ಅಜ್ಜರಕಾಡು ವಾರ್ಡ್ ಸದಸ್ಯೆ ಉಡುಪಿ ನಗರಸಭೆ.