Advertisement
ಅಜ್ಜಂಪುರ ಸಮೀಪ ಬೆಟ್ಟದಾವರೆ ಕೆರೆಯಲ್ಲಿ ಭಾನುವಾರ ಭದ್ರಾ ಮೇಲ್ದಂಡೆ ಯೋಜನೆಯ ನೀರೆತ್ತುವ ಪಂಪಿಂಗ್ ಮೋಟಾರು ಇರಿಸಿದ ಸ್ಥಳದಲ್ಲಿ “ಜಲವೀಲ್ಯೆ ‘ ನೀಡಿ ಮಾತನಾಡಿದ ಅವರು, ಭದ್ರೆಯ ನೀರು ಜಿಲ್ಲೆಗೆ ಹರಿಯುತ್ತಿರುವುದು ಸಂತಸ ತರಿಸಿದ್ದರೂ, ತುಂಗೆಯ ನೀರು ಜಿಲ್ಲೆಗೆ ಹರಿಯದಿರುವುದು ಅಷ್ಟೇ ಪ್ರಮಾಣದ ಬೇಸರ ಮೂಡಿಸಿದೆ. ತುಂಗಾ-ಭದ್ರೆ ಎರಡೂ ಜಿಲ್ಲೆಗೆ ಹರಿದಾಗ ಮಾತ್ರ ಜಲಕ್ಷಾಮ ನಿವಾರಣೆ ಆಗಲಿದೆ. ಜಿಲ್ಲೆಯ ಕೆರೆ-ಕಟ್ಟೆ-ಜಲಾಶಗಳು ತುಂಬಲಿವೆ. ಜಲ ಸಂವೃದ್ಧಿಗೊಳ್ಳಲಿದೆ ಎಂದರು.
Related Articles
ವಾಣಿವಿಲಾಸ ಸಾಗರ ತಲುಪುತ್ತಿದೆ. ನೀರು ಹರಿಸುವಿಕೆಗೆ ಅಕ್ಟೋಬರ್‌ವರೆಗೆ ಮಾತ್ರ ಅವಕಾಶವಿದೆ. ಆದರೆ ವಿಶೇಷ ಪ್ರಕರಣ ಆಗಿರುವುದರಿಂದ ಬರುವ ಮಾರ್ಚ್‌ವರೆಗೂ ನೀರು ಹರಿಸಲಾಗುವುದು. ಹಾಗೆ ಮಾಡಿದರೆ ವಾಣಿವಿಲಾಸ ಸಾಗರದಲ್ಲಿ 5 ರಿಂದ 6 ಟಿಎಂಸಿ ಅಡಿ ನೀರು ಸಂಗ್ರಹಗೊಳ್ಳಲಿದೆ ಎಂದು ತಿಳಿಸಿದರು.
Advertisement
ಹೊಸದುರ್ಗ ಕನಕ ಪೀಠದ ಪುರುಷೋತ್ತಮನಾಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶಾಂತವೀರಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಇಇ ರವಿಕುಮಾರ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ರೈತ ಸಂಘದ ಕಾರ್ಯದರ್ಶಿ ಎಂ.ಶಂಕರಪ್ಪ, ಮುಖಂಡ ಎ.ಸಿ. ಚಂದ್ರಪ್ಪ ಮತ್ತಿತರರಿದ್ದರು. ಸ್ಥಳ ವೀಕ್ಷಿಸಲು ಚಿತ್ರದುರ್ಗ ಜಿಲ್ಲೆಯ ನೂರಾರು ರೈತರು, ರೈತ ಮಹಿಳೆಯರು, ರಾಜಕೀಯ ಮುಖಂಡರು ಹಾಜರಿದ್ದರು.